Jio And Airtel: ಒಂದೇ ಬೆಲೆಯಲ್ಲಿ Jio ಹಾಗೂ Airtel ರಿಚಾರ್ಜ್ ಘೋಷಣೆ, ಯೋಜನೆಗಳ ಲಾಭ ತಿಳಿದುಕೊಳ್ಳಿ.

jio ಹಾಗೂ Airtel ಒಂದೇ ಬೆಲೆಯಲ್ಲಿ ರಿಚಾರ್ಜ್ ಘೋಷಿಸಿದ್ದು ಇವೆರಡರ ನಡುವೆ ಇರುವ ವ್ಯತ್ಯಾಸದ ಬಗ್ಗೆ ತಿಳಿಯಿರಿ.

Jio And Airtel Same Recharge Plan: ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ನಡುವೆ ಪೈಪೋಟಿ ನಡೆಯುತ್ತಲೇ ಇವೆ. ವಿವಿಧ ಕಂಪನಿಗಳು ಅನೇಕ ರೀತಿಯ ಯೋಜನೆಗಳನ್ನು ಬಿಡುಗಡೆ ಮಾಡುತಲಿವೆ. ಜಿಯೋ (Jio)  ಹಾಗೂ ಏರ್ ಟೆಲ್ (Airtel) ನಡುವೆ ಹೆಚ್ಚಿನ ಪೈಪೋಟಿ ನಡೆಯುತ್ತಿದೆ. ಕಡಿಮೆ ಬೆಲೆಯಲ್ಲಿ ಜಿಯೋ ಹಾಗೂ ಏರ್ ಟೆಲ್ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಬಿಡುಗಡೆ ಮಾಡುತ್ತಲೇ ಇದೆ.

ಜಿಯೋ ಹಾಗೂ ಏರ್ ಟೆಲ್ ಟೆಲಿಕಾಂ ತನ್ನ ಗ್ರಾಹಕರನ್ನು ಸೆಳೆಯಲು ಅತಿ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ. ತನ್ನ ಗ್ರಾಹಕರಿಗೆ ಅನುಕೂಲವಾಗಲು ಕಡಿಮೆ ಬೆಲೆಯಲ್ಲಿ ಜಿಯೋ ಹಾಗೂ ಏರ್ ಟೆಲ್ ಕಂಪನಿಗಳು ಒಂದೇ ರೀತಿಯ ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಒಂದೇ ಬೆಲೆಯಲ್ಲಿ ಎರಡು ಕಂಪನಿಗಳು ರಿಚಾರ್ಜ್ ಘೋಷಿಸಿದ್ದು ಇವೆರಡರ ನಡುವೆ ಎಷ್ಟು ವ್ಯತ್ಯಾಸವಿದೆ ಎಂದು ತಿಳಿಯೋಣ.

Jio And Airtel Same Recharge Plan
Image Credit: telecomtalk

ಏರ್ ಟೆಲ್ 296 ರೂ. ಯೋಜನೆ
ಏರ್ ಟೆಲ್ ತನ್ನ ಗ್ರಾಹಕರಿಗಾಗಿ 30 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ರೂ. 296 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲಾನ್ ನ ಪ್ರಯೋಜನವನ್ನು ಪಡೆಯಬಹುದು. ಹೆಚ್ಚಿನ ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು.

ಈ ಯೋಜನೆಯಲ್ಲಿ ನಿಮಗೆ 25GB ಡೇಟಾ ಲಭ್ಯವಿದೆ. ದಿನನಿತ್ಯ ಬಳಕೆಗೆ ಡೇಟಾ ಮಿತಿ ಇರುವುದಿಲ್ಲ. 25GB ಡೇಟಾವನ್ನು ಸಂಪೂರ್ಣವಾಗಿ ಒಂದೇ ದಿನದಲ್ಲಿ ಬೇಕಾದರೂ ಬಳಸಿಕೊಳ್ಳುವ ಅವಕಾಶವಿದೆ.

Jio And Airtel Same Recharge Plan
Image Credit: telecomtalk

ಜಿಯೋ ಗ್ರಾಹಕರಿಗೆ 25GB ಡೇಟಾ ಯೋಜನೆ
ಜಿಯೊದ 296 ರೂ. ಯೋಜನೆಯು ಗ್ರಾಹಕರಿಗೆ 25GB ಡೇಟಾವನ್ನು ನೀಡಲಿದೆ. ಅನಿಯಮಿತ ಕರೆ ಹಾಗೂ 100 SMS ಗಳ ಸೌಲಭ್ಯವನ್ನು ಜಿಯೊದ 296 ಯೋಜನೆ ನಿಮಗೆ ನೀಡಲಿದೆ.

Join Nadunudi News WhatsApp Group

ಜಿಯೊದ 296 ಯೋಜನೆಯು ನಿಮಗೆ 30 ದಿನಗಳ ಮಾನ್ಯತೆಯನ್ನು ನೀಡುತ್ತದೆ.
ಜಿಯೊದ ಈ 296 ಯೋಜನೆಯು ನಿಮಗೆ ದೈನಂದಿನ ಡಾಟಾವನ್ನು ನೀಡುವುದಿಲ್ಲ. ಏಕೆಂದರೆ ಇದರಲ್ಲಿ ಕೇವಲ 25GB ಡೇಟಾ ಮಾತ್ರ ಇರುತ್ತದೆ. ಕಡಿಮೆ ಇಂಟೆರ್ ನೆಟ್ ಬಳಕೆದಾರರಿಗೆ ಈ ಯೋಜನೆ ಸಹಾಯವಾಗಲಿದೆ.

Join Nadunudi News WhatsApp Group