Jio: 388 ದಿನ ಉಚಿತ ಡೇಟಾ, ಕರೆ ಮತ್ತು SMS, ಗ್ರಾಹಕರಿಗಾಗಿ ಇನ್ನೊಂದು ರಿಚಾರ್ಜ್ ಘೋಷಿಸಿದ Jio.

ಜಿಯೋ ಬಳಕೆದಾರರಿಗೆ ತಿಂಗಳ ರಿಚಾರ್ಜ್ ಪ್ಲಾನ್ ನ ಚಿಂತೆಯನ್ನು ತಪ್ಪಿಸಲು ಇದೀಗ ಜಿಯೋ ವಾರ್ಷಿಕ ಯೋಜನೆ ಬಿಡುಗಡೆಗೊಳಿಸಿದೆ.

Jio Annual Recharge Plan: ರಿಲಯನ್ಸ್ ಜಿಯೋ (Jio) ಭಾರತದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಪಡೆದುಕೊಂಡಿದೆ. ಪ್ರತಿನಿತ್ಯ ಜಿಯೋ ತನ್ನ ಬಳಕೆದಾರರಿಗೆ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನೂ ಘೋಷಿಸುತ್ತಿವೆ.

ಇದೀಗ ಜಿಯೋ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ಜಿಯೋ ಬಳಕೆದಾರರಿಗೆ ತಿಂಗಳ ರಿಚಾರ್ಜ್ ಪ್ಲಾನ್ ನ ಚಿಂತೆಯನ್ನು ತಪ್ಪಿಸಲು ಇದೀಗ ಜಿಯೋ ವಾರ್ಷಿಕ ಯೋಜನೆ ಬಿಡುಗಡೆಗೊಳಿಸಿದೆ.

New plan launched for Jio customers
Image Credit: Moneycontrol

ಜಿಯೋ ಗ್ರಾಹಕರಿಗೆ ಹೊಸ ಯೋಜನೆ ಬಿಡುಗಡೆ
ಜಿಯೋ ತನ್ನ ಬಳಕೆದಾರರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಜಿಯೋ 5G ಸೇವೆಯೊಂದಿಗೆ ಗ್ರಾಹಕರಿಗೆ ಅಗ್ಗದ ರಿಚಾರ್ಜ್ ಪ್ಲಾನ್ ಗಳನ್ನೂ ಘೋಷಿಸುತ್ತಿವೆ. ಜಿಯೋ ತನ್ನ ಪೂರ್ಣ ಪ್ಯಾಕೇಜ್ ಯೋಜನೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ. ಕಂಪನಿಯು ವಿವಿಧ ಯೋಜನೆಗಳ ಜೊತೆಗೆ ಉಚಿತ ಕರೆ, ಡೇಟಾ ಎಸ್ ಎಂಎಸ್ ಸೌಲಭ್ಯವನ್ನು ನೀಡುತ್ತದೆ. ಜಿಯೋ ತನ್ನ ಬಳಕೆದಾರರ ಅನುಕೂಲಕ್ಕಾಗಿ 119 ರಿಂದ 2999 ರೂ. ವರೆಗೆ ಯೋಜನೆಯನ್ನು ಬಿಡುಗಡೆಗೊಳಿಸಿದೆ.

ಜಿಯೋನಲ್ಲಿ 388 ದಿನ ಉಚಿತ ಡೇಟಾ, ಕರೆ ಮತ್ತು SMS
ಜಿಯೋ ತನ್ನ ಗ್ರಾಹಕರಿಗಾಗಿ 388 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ರೂ. 2,999 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲಾನ್ ನ ಪ್ರಯೋಜನವನ್ನು ಪಡೆಯಬಹುದು. ಪ್ರತಿನಿತ್ಯ 2.5GB ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು.

New plan launched for Jio customers
Image Credit: 91mobiles

ಜಿಯೊದ ಈ ವಾರ್ಷಿಕ ಯೋಜನೆಯು ಬಳಕೆದಾರರಿಗೆ 970GB ಡೇಟಾವನ್ನು ಇಡುತ್ತದೆ. ಪ್ರತಿ ನಿತ್ಯ 2 .5GB ಡೇಟಾ ಲಭ್ಯವಿರುವ ಕಾರಣ ಹೆಚ್ಚಿನ ಡೇಟಾವನ್ನು ಬಳಸಲು ಅವಕಾಶವಿದೆ. ಈ ಯೋಜನೆಯಲ್ಲಿ ಬಳಕೆದಾರರು ಜಿಯೋ ಅಪ್ಲಿಕೇಶನ್ ಸೇವೆಗಳನ್ನು ಉಚಿತವಾಗಿ ಪಡೆಯಬಹುದು.

Join Nadunudi News WhatsApp Group

ಜಿಯೋ 2879 ರೂ. ಯೋಜನೆ
ಜಿಯೋ ತನ್ನ ಗ್ರಾಹಕರಿಗಾಗಿ 2,879 ರೂ. ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ಜಿಯೋ ಗ್ರಾಹಕರು ರೂ. 2,879 ರಿಚಾರ್ಜ್ ಮಾಡಿದರೆ 365 ದಿನಗಳ ಮಾನ್ಯತೆಯ ಜೊತೆಗೆ ಅನ್ಲಿಮಿಟೆಡ್ ಕರೆಯ ಪ್ರಯೋಜನವನ್ನು ಪಡೆಯಬಹುದು. ಪ್ರತಿನಿತ್ಯ 2GB ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು. ಜಿಯೋ ಸಿನಿಮಾ, ಜಿಯೋ ಸೆಕ್ಯೂರಿಟಿ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

Jio has now introduced a new service with free calling and data for 388 days
Image Credit: mysmartprice

ಜಿಯೋದಲ್ಲಿ ಇದೀಗ 336 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಲಭ್ಯ
ಜಿಯೋ ತನ್ನ ಗ್ರಾಹಕರಿಗಾಗಿ 336 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲಾನ್ ಅನ್ನು ಘೋಷಿಸಿದೆ. ರೂ. 2,545 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲಾನ್ ನ ಪ್ರಯೋಜನವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿನಿತ್ಯ 1.5GB ಡೇಟಾ ಜೊತೆಗೆ 100 SMS ಹಾಗೂ ಅನಿಯಮಿತ ಕರೆಯ ಪ್ರಯೋಜನವನ್ನು ಪಡೆಯಬಹುದು. ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.

Join Nadunudi News WhatsApp Group