JioBharath: ಜಿಯೋ ಅಂಬಾನಿ ಕಡೆಯಿಂದ ಇನ್ನೊಂದು ಗಿಫ್ಟ್, ಕೇವಲ 1200 ರೂಪಾಯಿಗೆ ಖರೀದಿಸಿ ಈ ಜಿಯೋ ಮೊಬೈಲ್

ಕೇವಲ 1200 ರೂ. ಗೆ ಜಿಯೋದಿಂದ ಹೊಸ ಫೀಚರ್ ಫೋನ್ ಲಾಂಚ್.

Jio Bharat V2 Feature Phone: Reliance Jio ಸದ್ಯ ದೇಶದಲ್ಲಿ ನೆಟ್ವರ್ಕ್ ಸೇವೆಯನ್ನು ನೀಡುವುದರ ಜೊತೆಗೆ ಫೋನ್ ಗಳನ್ನೂ ಕೂಡ ಗ್ರಾಹಕರಿಗೆ ನೀಡುತ್ತಿದೆ. ಸದ್ಯ ದೇಶದಲ್ಲಿ JioBharth 4G ಸೆಟ್ ಗ್ರಾಹಕರಿಗೆ ಲಭ್ಯವಾಗುತ್ತಿದೆ.

ಸದ್ಯ ಸ್ಮಾರ್ಟ್ ಫೋನ್ ಬಳಕೆದಾರರಿಗೆ ಹೆಚ್ಚಿನ ಅನುಭವವನ್ನು ನೀಡಲು ಜಿಯೋ ಇದೀಗ ಹೊಸ ಹೆಜ್ಜೆ ಇಟ್ಟಿದೆ. ಸೋಶಿಯಲ್ ಮೀಡಿಯಾ ಮತ್ತು ಪೇಮೆಂಟ್ ಗೇಟ್ ಗಳ ಅನುಭವವನ್ನು ಹೆಚ್ಚಿಸಲು ಇದೀಗ Jio Feature ಫೋನ್ ತಯಾರಾಗುತ್ತಿದೆ. ಜಿಯೋ ಬಿಡುಗಡೆಗೊಳಿಸುತ್ತಿರುವ ನೂತನ ಫೀಚರ್ ನ ಫೋನ್ ನ ಬಗ್ಗೆ ವಿವರ ಇಲ್ಲಿದೆ.

Jio Bharat V2 Feature Phone
Image Credit: News 18

ಕೇವಲ 1200 ರೂ. ಗೆ ಜಿಯೋದಿಂದ ಹೊಸ ಫೀಚರ್ ಫೋನ್ ಲಾಂಚ್
ಕಳೆದ ವರ್ಷ ಪ್ರಾರಂಭವಾದ ಜಿಯೋಭಾರತ್ ಫ್ಲಾಟ್ ಫಾರ್ಮ್ ಅನ್ನು ಘೋಷಿಸಿತು. ಇದೀಗ ಇದರ ಅಡಿಯಲ್ಲಿ ಕಂಪನಿಯು OEM ತಯಾರಕರೊಂದಿಗೆ ಪಾಲುದಾರಿಕೆ ಹೊಂದಿದ್ದು, ಸುಮಾರು 1200 ರೂಪಾಯಿಗಳ ಕೈಗೆಟುಕುವ ಬೆಲೆಯಲ್ಲಿ ಈ ಹೊಸ 4G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ. ಇನ್ನು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಲಿರುವ JioBharath B1 ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದ್ದು, ಮಾರುಕಟ್ಟೆಯಲ್ಲಿ 1299 ರೂ. ಗಳಲ್ಲಿ ಮಾರಾಟ ಆಗುತ್ತಿದೆ.

Jio Bharat Phone Price
Image Credit: Your Story

Jio Bharath ಹೊಸ ಸೆಟ್ ನಲ್ಲಿ ಏನೆಲ್ಲಾ ಫೀಚರ್ ಇರಲಿದೆ….?
JioPhone ಕನೆಕ್ಷನ್ ನೊಂದಿಗೆ ಮುಂದುವರಿಯುತ್ತದೆ, ಇದು UPI ಪಾವತಿಗಳನ್ನು ಒಳಗೊಂಡಂತೆ ಎಲ್ಲಾ ರೀತಿಯ ಪಾವತಿಗಳನ್ನು ಮಾಡುವ ಸಾಮರ್ಥ್ಯದೊಂದಿಗೆ ಬಳಕೆದಾರರಿಗೆ ಹೆಚ್ಚು ಸೌಲಭ್ಯವನ್ನು ನೀಡಲಿದೆ. ಇನ್ನು Bureau of Indian Standards (BIS) ನಲ್ಲಿ ಈ ಫೀಚರ್ ಫೋನ್ ಅನ್ನು ಗುರುತಿಸಲಾಗಿದೆ. ಇನ್ನು JioBharath B2 Feature Phone ಬಗ್ಗೆ ಕಂಪನಿಯು ಹೆಚ್ಚಿನ ಮಾಹಿತಿ ಬಹಿರಂಗಪಡಿಸಿಲ್ಲ. ಆದ್ರೆ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗುವ ಬಗ್ಗೆ ಮಾಹಿತಿ ಲಭಿಸಿದೆ. ಶೀಘ್ರದಲ್ಲೇ UPI ಸೌಲಭ್ಯ ನೀಡುವಂತಹ ಫೀಚರ್ ಫೋನ್ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Join Nadunudi News WhatsApp Group

Join Nadunudi News WhatsApp Group