Jio Booster: ಜಿಯೋ ಗ್ರಾಹಕರಿಗೆ ಸಿಬಂಪರ್ ಆಫರ್, ಕೇವಲ 61 ರೂ. ಗೆ ಸಿಗಲಿದೆ 10GB ಡೇಟಾ.

ಜಿಯೋ ತನ್ನ ಗ್ರಾಹಕರಿಗೆ 10GB ಡೇಟಾ ಯೋಜನೆಯನ್ನು ಪರಿಚಯಿಸಿದೆ.

Jio Bosster Recharge Plan: ಇತ್ತೀಚಿಗೆ ಜಿಯೋ ರಿಲಯೆನ್ಸ್ (jio)  ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇನ್ನಿತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಜಿಯೋ ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದೆ.

ಜಿಯೋ ರಿಲಯನ್ಸ್ ಇದೀಗ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ಜೊತೆ ಜಿಯೋ ಪೈಪೋಟಿ ನಡೆಸುತ್ತಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗೆ 10GB ಡೇಟಾ ಯೋಜನೆಯನ್ನು ಪರಿಚಯಿಸಿದೆ.

Jio's Rs 179 recharge offers 24 days validity.
Image Credit: indiamart

ಜಿಯೋ ಗ್ರಾಹಕರಿಗೆ ಜಿಯೋ ಬೂಸ್ಟರ್ ರಿಚಾರ್ಜ್ ಪ್ಲಾನ್ ಗಳನ್ನೂ ಪರಿಚಯಿಸಿದೆ. ಜಿಯೋ ಗ್ರಾಹಕರು ಈ ಯೋಜನೆಯ ಲಾಭವನ್ನು ಪಡೆಯಬಹುದು. ನೀವು ಜಿಯೋ ಬಳಕೆದಾರರಾಗಿದ್ದರೆ ಈ ಯೋಜನೆಯ ಲಾಭವನ್ನು ಪಡೆಯಿರಿ.

ಕೇವಲ 61 ರೂ. ಗೆ ಸಿಗಲಿದೆ 10GB ಡೇಟಾ
ಜಿಯೊದ 61 ರೂ. ಯೋಜನೆಯು ಗ್ರಾಹಕರಿಗೆ 10GB ಡೇಟಾವನ್ನು ನೀಡಲಿದೆ. ಅನಿಯಮಿತ ಕರೆ ಹಾಗೂ 100 SMS ಗಳ ಸೌಲಭ್ಯವನ್ನು ಜಿಯೊದ 61 ರೂ ಯೋಜನೆ ನೀಡುವುದಿಲ್ಲ. ಹೆಚ್ಚಿನ ಡೇಟಾ ಬಳಕೆದಾರರಿಗೆ ಈ ಪ್ಲಾನ್ ಅನುಕೂಲವಾಗಲಿದೆ. ನಿಮ್ಮ ದೈನದಿಂದ ಡೇಟಾ ಖಾಲಿ ಆದ ನಂತರ 61 ರೂ.ನ ಪ್ಲಾನ್ ನ್ನು ಬಳಸಿಕೊಳ್ಳಬಹುದು. ಈ ಯೋಜನೆಗೆ ದಿನದ ಮಿತಿ ಇರುವುದಿಲ್ಲ. ಒಮ್ಮೆಲೇ 10GB ಅನ್ನು ಕೂಡ ಬಳಸಿಕೊಳ್ಳುವ ಅವಕಾಶವಿದೆ.

Sweet news for Jio customers, only Rs 61. will get 10GB data.
Image Credit: hindustantimes

ಜಿಯೊದ 209 ರೂಪಾಯಿ ರಿಚಾರ್ಜ್ ಯೋಜನೆ
ಜಿಯೊದ 209 ರೂಪಾಯಿ ರಿಚಾರ್ಜ್ 28 ದಿನಗಳ ವಾಲಿಡಿಟಿಯನ್ನು ನೀಡುತ್ತದೆ. ಪ್ರತಿದಿನ 1GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೆ ಅನಿಯಮಿತ ಉಚಿತ ವಾಯ್ಸ್ ಕರೆಗಳ ಸೌಲಭ್ಯ. ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸೇರಿದಂತೆ ಅನಿಯಮಿತ ಕರೆಯ ಸೌಲಭ್ಯ ಸಿಗಲಿದೆ.

Join Nadunudi News WhatsApp Group

ಜಿಯೊದ 179 ರೂಪಾಯಿ ರಿಚಾರ್ಜ್ ಯೋಜನೆ
ಜಿಯೊದ 179 ರೂಪಾಯಿ ರಿಚಾರ್ಜ್ 24 ದಿನಗಳ ವಾಲಿಡಿಟಿಯನ್ನು ನೀಡುತ್ತದೆ. ಪ್ರತಿದಿನ 1GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಸೇರಿದಂತೆ ಅನಿಯಮಿತ ಕರೆಯ ಸೌಲಭ್ಯ ಸಿಗಲಿದೆ. ಜಿಯೋ ಗ್ರಾಹಕರು ಹೊಸ ರಿಚಾರ್ಜ್ ಪ್ಲ್ಯಾನ್ ನ ಅನುಕೂಲವನ್ನು ಪಡೆದುಕೊಳ್ಳಬಹುದು.

 

Join Nadunudi News WhatsApp Group