Jio Plan: ಇನ್ನೊಂದು ಐತಿಹಾಸಿಕ ರಿಚಾರ್ಜ್ ಬಿಡುಗಡೆ ಮಾಡಿದ Jio, ಇನ್ಮುಂದೆ ಎಲ್ಲವೂ ಅನಿಯಮಿತ.

ತ್ರೈಮಾಸಿಕ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ Jio

Jio New Recharge Plan: ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿ ಗುರುತಿಸಿಕೊಂಡಿರುವ Jio ತನ್ನ ಗ್ರಾಹಕರಿಗೆ ಆಗಾಗ ಹೊಸ ಹೊಸ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸುತ್ತ ಇರುತ್ತದೆ. ಕಡಿಮೆ ಬೆಲೆಯ ಯೋಜನೆಗಳಿಂದಾಗಿ ಜಿಯೋ ಗ್ರಾಹಕರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ.

ಉಚಿತ OTT ಚಂದಾದಾರಿಕೆ, ಡೇಟಾ ವೋಚರ್‌ ಗಳು, ಮನರಂಜನಾ ಯೋಜನೆಗಳು, ವಾರ್ಷಿಕ ಯೋಜನೆಗಳು, ಡೇಟಾ ಬೂಸ್ಟರ್ ಸೇರಿದಂತೆ ದೈನಂದಿನ ಮಿತಿಯಿಲ್ಲದೆ ಹಲವು ಯೋಜನೆಗಳನ್ನು ಪರಿಚಯಿಸಿದೆ. ಇದೀಗ ಜಿಯೋ ಅತಿ ಕಡಿಮೆ ಬೆಲೆಯಲ್ಲಿ ತ್ರೈಮಾಸಿಕ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ನೀವು ಈ ರಿಚಾರ್ಜ್ ಪ್ಲಾನ್ ಅನ್ನು ಒಮ್ಮೆ ಸಕ್ರಿಯಗೊಳಿಸಿಕೊಂಡರೆ ತಿಂಗಳು ತಿಂಗಳು ರಿಚಾರ್ಜ್ ಮಾಡುವ ಚಿಂತೆಯಿಂದ ತಪ್ಪಿಸಿಕೊಳ್ಳಬಹುದು. ಈ ಯೋಜನೆಯಲ್ಲಿ ನಿಮಗೆ ಎಲ್ಲ ರೀತಿಯ ಪ್ರಯೋಜನಗಳು ಲಭ್ಯವಾಗಲಿದೆ.

Jio New Recharge Plans
Image Credit: Indiatvnews

ಇನ್ನೊಂದು ಐತಿಹಾಸಿಕ ರಿಚಾರ್ಜ್ ಬಿಡುಗಡೆ ಮಾಡಿದ Jio
Jio ಇದೀಗ ಗ್ರಾಹಕರಿಗೆ ಹೊಸದಾಗಿ ರೂ. 1198 ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ನೀವು ಎಲ್ಲ ರೀತಿಯ ಯೋಜನೆಯ ಲಾಭ ಪಡೆಯಲು ರೂ. 1198 ರೂ. ರಿಚಾರ್ಜ್ ಮಾಡಿಸಿಕೊಳ್ಳಬೇಕು. ಈ ಯೋಜನೆಯಲ್ಲಿ ಕಂಪನಿಯು ತನ್ನ ಬಳಕೆದಾರರಿಗೆ 84 ದಿನಗಳ ದೀರ್ಘಾವಧಿಯ ಮಾನ್ಯತೆಯನ್ನು ನೀಡುತ್ತದೆ. ನೀವು ಯಾವುದೇ ನೆಟ್‌ ವರ್ಕ್‌ ನಲ್ಲಿ 84 ದಿನಗಳವರೆಗೆ ಉಚಿತ ಕರೆ ಮಾಡಬಹುದು.

ಜಿಯೋ 84 ದಿನಗಳವರೆಗೆ ಒಟ್ಟು 168GB ಡೇಟಾವನ್ನು ನೀಡುತ್ತದೆ. ಈ ರೀತಿಯಾಗಿ, ಈ ಯೋಜನೆಯಲ್ಲಿ ನೀವು ಪ್ರತಿದಿನ ಸುಮಾರು 2GB ಡೇಟಾವನ್ನು ಬಳಸಬಹುದು. ಇತರ ಯೋಜನೆಗಳಂತೆ, ಈ ರೀಚಾರ್ಜ್ ಯೋಜನೆಯಲ್ಲಿ ಡೇಟಾ ಜೊತೆಗೆ ಉಚಿತ SMS ಸಹ ನೀಡಲಾಗುತ್ತದೆ. ಇದರಲ್ಲಿ ನೀವು ಪ್ರತಿದಿನ 100 ಉಚಿತ SMS ಅನ್ನು ಪಡೆಯುತ್ತೀರಿ.

Jio New Recharge Plan 2024
Image Credit: Financial Express

ಇನ್ಮುಂದೆ ಜಿಯೋ ಗ್ರಾಹಕರಿಗೆ ಎಲ್ಲವೂ ಅನಿಯಮಿತ
ಈ ಯೋಜನೆಯಲ್ಲಿ ನೀವು ಕೇವಲ ಒಂದು ಅಥವಾ ಎರಡು ಅಲ್ಲ ಸಂಪೂರ್ಣ 14 OTT ಅಪ್ಲಿಕೇಶನ್‌ ಗಳ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು. ಈ ಯೋಜನೆಯಲ್ಲಿ, ಡಿಸ್ನಿ ಪ್ಲಸ್ ಹಾಟ್‌ ಸ್ಟಾರ್‌ ನ ಚಂದಾದಾರಿಕೆಯು 90 ದಿನಗಳವರೆಗೆ ಮತ್ತು ಪ್ರೈಮ್ ವಿಡಿಯೋ 84 ದಿನಗಳವರೆಗೆ ಲಭ್ಯವಿದೆ. ಇದರೊಂದಿಗೆ ಜಿಯೋ ಸಿನಿಮಾ ಸೌಲಭ್ಯವನ್ನು 84 ದಿನಗಳವರೆಗೆ ಒದಗಿಸಲಾಗಿದೆ.

Join Nadunudi News WhatsApp Group

Sony LIV, ZEE5, Lionsgate Play, Discovery, Sun NXT, Kanchha Lanka, Planet Marathi, Chaupal.tv, Docubay, EPIC ON, Hoichoi (JioTV ಅಪ್ಲಿಕೇಶನ್ ಮೂಲಕ), Prime Video Mobile Edition ಜೊತೆಗೆ JioTV ಅಪ್ಲಿಕೇಶನ್ ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು. ಇನ್ನಿತರ ಟೆಲಿಕಾಂ ಕಂಪನಿಗಳ ರಿಚಾರ್ಜ್ ಪ್ಲಾನ್ ಗೆ ಹೋಲಿಸಿದರೆ ಈ 1198 ಯೋಜನೆಯು ಕಡಿಮೆ ಬೆಲೆಯಲ್ಲಿ ಹೆಚ್ಚು ಪ್ರಯೋಜನವನ್ನು ನೀಡುವ ಯೋಜನೆಯಾಗಿದೆ.

Jio Free OTT Recharge Plan
Image Credit: Hindustan Times

Join Nadunudi News WhatsApp Group