Jio Recharge: ಗ್ರಾಹಕರಿಗೆ 2 ತಿಂಗಳ ಹೊಸ ರಿಚಾರ್ಜ್ ಆಫರ್ ಘೋಷಣೆ ಮಾಡಿದ JIO, ಎರಡು ತಿಂಗಳು ಎಲ್ಲವೂ ಉಚಿತ.

ಟೆಲಿಕಾಂ ಜಗತ್ತಿನಲ್ಲಿ ದೊಡ್ಡ ಮಟ್ಟದಲ್ಲಿ ಸಂಚಲನವನ್ನ ಮೂಡಿಸಿರುವ ಸಿಮ್ ಅಂದರೆ ಅದೂ Jio ಸಿಮ್ ಎಂದು ಹೇಳಿದರೆ ತಪ್ಪಾಗಲ್ಲ. ಜನರಿಗೆ ಉಚಿತ ಇಂಟರ್ನೆಟ್ ಮತ್ತು ಕರೆಗಳ ಸೌಲಭ್ಯವನ್ನ ನೀಡುವುದರ ಮೂಲಕ ಟೆಲಿಕಾಂ ಜಗತ್ತಿನಲ್ಲಿ ದೊಡ್ಡ ಸಂಚಲನವನ್ನ ಸೃಷ್ಟಿಸಿದ Jio ಕಳೆದ ಕೆಲವು ವರ್ಷಗಳಿಂದ ತನ್ನ ಗ್ರಾಹಕರಿಗೆ ಬಹಳ ಸೇವೆಯನ್ನ ಒದಗಿಸಿಕೊಂಡು ಬಂದಿದೆ. Reliance Jio ತನ್ನ ಗ್ರಾಹಕರಿಗೆ ಕೆಲವು ವಿಶೇಷ ರಿಚಾರ್ಜ್ ಆಫರ್ ಗಳನ್ನ ಘೋಷಣೆ ಮಾಡುವುದರ ಮೂಲಕ ಜನರ ಮೆಚ್ಚುಗೆಗೆ ಕಾರಣವಾಗುತ್ತಿದೆ. ಅದೇ ರೀತಿಯಲ್ಲಿ ಈಗ Reliance Jio ಈಗ ಎರಡು ತಿಂಗಳ ಹೊಸ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ್ದು ಇದು ಗ್ರಾಹಕರ ಮೆಚ್ಚುಗೆಗೆ ಕಾರಣವಾಗಿದೆ.

ತನ್ನ Recharge Plan ಬದಲಾವಣೆ ಮಾಡಿರುವ ಜಿಯೋ ಈಗ ಹೊಸ Jio Recharge Plan ಅನ್ನು ಘೋಷಣೆ ಮಾಡಿದೆ. ಎರಡು ತಿಂಗಳ ರಿಚಾರ್ಜ್ ಮಾಡುವವರಿಗೆ ಈ ಹೊಸ ಪ್ಲಾನ್ ಬಹಳ ಇಷ್ಟವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗಾದರೆ ಜಿಯೋ ಘೋಷಣೆ ಮಾಡಿರುವ ಹೊಸ ರಿಚಾರ್ಜ್ ಪ್ಲಾನ್ ಯಾವುದು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ. ಹೌದು ಪ್ರತಿ ತಿಂಗಳು ರಿಚಾರ್ಜ್ ಮಾಡುವ ಜನರಿಗೆ ಮತ್ತು ಎರಡು ತಿಂಗಳಿಗೆ ರಿಚಾರ್ಜ್ ಜನರಿಗೆ ಜಿಯೋ ಈಗ ಹೊಸ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದೆ.

Jio best recharge
Image Credit: hindi.news18.com

ಜಿಯೋ ತನ್ನ ಹೊಸ 533 ರೂಪಾಯಿಯ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ್ದು ಈ ರಿಚಾರ್ಜ್ ಅಡಿಯಲ್ಲಿ ಜಿಯೋ ಗ್ರಾಹಕರು ಪ್ರತಿದಿನ 2 GB ಇಂಟರ್ನೆಟ್ ಅನ್ನು ಉಚಿತವಾಗಿ ಬಳಸಬಹುದಾಗಿದೆ. 56 ದಿನಗಳ ಕಾಲ ವ್ಯಾಲಿಡಿಟಿ ಇರುವ ಈ 533 ರೂಪಾಯಿಯ Jio Recharg ಜನರಿಗೆ ಬಹಳಷ್ಟು ಲಾಭವನ್ನ ತಂದುಕೊಡಲಿದೆ. 533 ರೂಪಾಯಿ ಒಮ್ಮೆ ರಿಚಾರ್ಜ್ ಮಾಡಿದರೆ ಜನರು 56 ದಿನಗಳ ಕಾಲ ಪ್ರತಿನಿತ್ಯ 2 GB ಇಂಟರ್ನೆಟ್ ಜೊತೆಗೆ 56 ದಿನಗಳ ಉಚಿತ ಕರೆ ಮತ್ತು ದಿನಕ್ಕೆ 100 SMS ಗಳನ್ನ ಫ್ರೀ ಆಗಿ ಪಡೆದುಕೊಳ್ಳಬಹುದಾಗಿದೆ.

ಜಿಯೋ ಗ್ರಾಹಕರು ಎರಡು ತಿಂಗಳ 533 ರೂಪಾಯಿ ರಿಚಾರ್ಜ್ ಮಾಡಿಸಿದರೆ ಜಿಯೋ ನಿಮಗೆ ಪ್ರತಿನಿತ್ಯ 2 GB ಇಂಟರ್ನೆಟ್ ನಂತೆ ಎರಡು ತಿಂಗಳಿಗೆ 112 GB ಇಂಟರ್ನೆಟ್ ಅನ್ನು ಉಚಿತವಾಗಿ ನೀಡುತ್ತದೆ. ಇನ್ನು ಈ 533 ರೂಪಾಯಿ ರಿಚಾರ್ಜ್ ಅಡಿಯಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯೂರಿಟಿ ಮತ್ತು ಜಿಯೋ ಕ್ಲೌಡ್ ಸೇರಿದಂತೆ ಇನ್ನಷ್ಟು ಪ್ರಯೋಜನಗಳನ್ನ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ. ಸದ್ಯ ಈ 553 ರೂಪಾಯಿಯ ಹೊಸ ರಿಚಾರ್ಜ್ ಜನರ ಮೆಚ್ಚುಗೆಯನ್ನ ಪಡೆದುಕೊಳ್ಳುವಲ್ಲಿ ಯಶಸ್ಸನ್ನ ಸಾಧಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ. ಜಿಯೋ ಈಗ ಹೊಸ 5G ಫೋನ್ ಬಿಡುಗಡೆ ಮಾಡುವ ಸಲುವಾಗಿ ಹೊಸ ಹೊಸ ರಿಚಾರ್ಜ್ ಪ್ಲ್ಯಾನ್ ಕೂಡ ಘೋಷಣೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಜನರು 5G ಸೇವೆಯನ್ನ ಬಳಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group