ಜಿಯೋ ಸಿಮ್ ಬಳಸುವವರಿಗೆ ಬಿಗ್ ಶಾಕ್, ರಿಚಾರ್ಜ್ ಬೆಲೆಯಲ್ಲಿ ಭಾರಿ ಏರಿಕೆ, ಬೆಲೆ ಎಷ್ಟಾಗಿದೆ ನೋಡಿ.

ದೇಶದಲ್ಲಿ ಹೆಚ್ಚಿನ ಜನರು ಬಸುವ ಸಿಮ್ ಕಾರ್ಡ್ ಅಂದರೆ ಅದೂ ಜಿಯೋ ಸಿಮ್ ಆಗಿದೆ. ಭಾರತದಲ್ಲಿ ಅತೀ ಹೆಚ್ಚಿನ ಜನರು ಬಳಸುವ ಜಿಯೋ ಒಂದು ಕಾಲದಲ್ಲಿ ದೊಡ್ಡ ಉಚಿತ ಕರೆ ಮತ್ತು ಇಂಟೆರ್ ನೆಟ್ ನೀಡುವ ಮೂಲಕ ದೇಶದಲ್ಲಿ ದೊಡ್ಡ ಸಂಚಲನವನ್ನ ಉಂಟುಮಾಡಿತ್ತು ಎಂದು ಹೇಳಬಹುದು. ಇನ್ನು ಇದರ ನಡುವೆ ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳ ದರ ಹೆಚ್ಚಳ ಮಾಡಲಾಗಿದ್ದು ಅದೇ ರೀತಿಯಲ್ಲಿ ಜಿಯೋ ಬಳಸುವ ಎಲ್ಲಾ ಗ್ರಾಹಕರಿಗೆ ಜಿಯೋ ಕಂಪನಿ ದೊಡ್ಡ ಶಾಕ್ ನೀಡಿದೆ ಎಂದು ಹೇಳಬಹುದು. ಹೌದು ಜಿಯೋ ಸಿಮ್ ತನ್ನ ಎಲ್ಲಾ ಪ್ಲ್ಯಾನ್ ನಲ್ಲಿನ ದರಗಳಲ್ಲಿ ಬಹಳ ಹೆಚ್ಚಳ ಮಾಡಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ.

ಹಾಗಾದರೆ ಜಿಯೋ ತನ್ನ ರಿಚಾರ್ಜ್ ಬೆಲೆಯನ್ನ ಹೆಚ್ಚಳ ಮಾಡಲು ಕಾರಣ ಏನು ಮತ್ತು ಎಷ್ಟು ಹೆಚ್ಚಳ ಮಾಡಿದೆ ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಈ ಹಿಂದೆ ಅಗ್ಗದ ರಿಚಾರ್ಜ್ ಸೇವೆಯನ್ನ ಒದಗಿಸಿ ಇತರೆ ಟೆಲಿಕಾಂ ಕಂಪನಿಗಳಿಗೆ ದೊಡ್ಡ ಶಾಕ್ ನೀಡಿದ್ದ ಜಿಯೋ ಈಗ ದರಗಳನ್ನ ಹೆಚ್ಚಳ ಮಾಡುವುದರ ಮೂಲಕ ಜನರಿಗೆ ದೊಡ್ಡ ಶಾಕ್ ಕೊಟ್ಟಿದೆ ಎಂದು ಹೇಳಬಹುದು. ಜಿಯೋ ಸಿಮ್ ನ ಅತೀ ಜನಪ್ರಿಯತೆಯ ರಿಚಾರ್ಜ್ ಆಗಿದ್ದ 749 ರೂಪಾಯಿಯ ರಿಚಾರ್ಜ್ ನಲ್ಲಿ ಈಗ ಭಾರಿ ಹೆಚ್ಚಳ ಮಾಡಲಾಗಿದೆ.

Jio recharge rate

ಹೌದು 749 ರೂಪಾಯಿಯ ರಿಚಾರ್ಜ್ ನಲ್ಲಿ ಈಗ ಶೇಕಡಾ 20 ರಷ್ಟು ಹೆಚ್ಚಳವನ್ನ ಮಾಡಲಾಗಿದ್ದು ಈಗ ರಿಚಾರ್ಜ್ ಬೆಲೆ ಬರೋಬ್ಬರಿ 899 ರೂಪಾಯಿ ಆಗಿದೆ. ಇನ್ನು ಜಿಯೋ ಕಂಪನಿಯ ಜನಪ್ರಿಯ ರಿಚಾರ್ಜ್ ಯೋಜನೆಗಳಾದ 155 ರೂಪಾಯಿ, 185 ರೂಪಾಯಿ ಮತ್ತು 749 ರೂಪಾಯಿಯ ಪ್ರಿಪೇಯ್ಡ್ ಯೋಜನೆಗಳಲ್ಲಿ ಈಗ ಶೇಕಡಾ 20 ರಷ್ಟು ಹೆಚ್ಚಳವನ್ನ ಮಾಡಲಾಗಿದ್ದು ಜನರು ಇದರ ಬದಲಿಗೆ ಇನ್ನುಮುಂದೆ 186 ರೂಪಾಯಿ, 222 ರೂಪಾಯಿ ಮತ್ತು 899 ರೂಪಾಯಿ ಪಾವತಿ ಮಾಡಬೇಕಾಗಿದೆ ಎಂದು ಕಂಪನಿ ಹೇಳಿದೆ.

ಇನ್ನು ದರಗಳಲ್ಲಿ ಮಾತ್ರ ಹೆಚ್ಚಳ ಮಾಡಲಾಗಿದೆಯೇ ಹೊರತು ಒದಗಿಸುವ ಸೇವೆಗಳಲ್ಲಿ ಯಾವುದೇ ರೀತಿಯ ಬದಲಾವಣೆಯನ್ನ ಮಾಡಲಾಗಿಲ್ಲ. ಹಿಂದಿನ ಹಾಗೆ ಗ್ರಾಹಕರು ಉಚಿತ ಕರೆ, ಉಚಿತ ಸಂದೇಶ ಮತ್ತು ಉಚಿತವಾಗಿ ಇಂಟೆರ್ ನೆಟ್ ಸೇವೆಯನ್ನ ಬಳಸಬಹುದಾಗಿದೆ. ಏನೇ ಆಗಲಿ ಬೆಲೆಯಲ್ಲಿನ ಹೆಚ್ಚಳ ಜಿಯೋ ಗ್ರಾಹಕರ ಬೇಸರಕ್ಕೆ ಕಾರಣವಾಗಿದ್ದು ಹಲವು ಜನರು ಜಿಯೋ ಸಿಮ್ ಗೆ ಬದಲಾಗಿ ಏರ್ಟೆಲ್ ಸಿಮ್ ಖರೀದಿ ಮಾಡಲು ಮನಸ್ಸು ಮಾಡಿದ್ದಾರೆ. ಈ ಮಾಹಿತಿಯನ್ನ ಜಿಯೋ ಸಿಮ್ ಬಳಸುವ ಎಲ್ಲಾ ಗ್ರಾಹಕರಿಗೆ ತಲುಪಿಸಿ.

Join Nadunudi News WhatsApp Group

Jio recharge rate

Join Nadunudi News WhatsApp Group