JioBook Laptop: ಕಡಿಮೆ ಬೆಲೆಯ JioBook ಲ್ಯಾಪ್ ಟಾಪ್ ಬಿಡುಗಡೆ ಮಾಡಿದ ಜಿಯೋ, ದೀಪಾವಳಿ ಆಫರ್ ಕೊಟ್ಟ ಅಂಬಾನಿ.

JioBook Laptop: ಜಿಯೋ (Jio) ಕೆಲವು ವರ್ಷಗಳಿಂದ ತನ್ನ ಗ್ರಾಹಕರಿಗೆ ಹಲವು ಸೇವೆಗಳನ್ನ ಒದಗಿಸಿಕೊಂಡು ಬಂದಿದೆ. ಜಿಯೋ ಸಿಮ್ (Jio sim) ಜಾರಿಗೆ ತರುವುದರ ಮೂಲಕ ಗ್ರಾಹಕರನ್ನ ತನ್ನತ್ತ ಆಕರ್ಷಣೆ ಮಾಡಿದ ದೇಶದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ (Mukesh Ambani) ಅವರು ಗ್ರಾಹಕರ ಅನುಕೂಲದ ಉದ್ದೇಶದಿಂದ ಈಗಾಗಲೇ ಹಲವು ಹೊಸ ಹೊಸ ಯೋಜನೆಗಳನ್ನ ಜಾರಿಗೆ ತರುವುದರ ಮೂಲಕ ಗ್ರಾಹಕರ ವಿಶ್ವಾಸವನ್ನ ಗಳಿಸಿಕೊಂಡಿದ್ದಾರೆ.

ಸದ್ಯ ಜಿಯೋ ಸಿಮ್ ಮತ್ತು ಜಿಯೋ ಮೊಬೈಲ್ ಗಳನ್ನ ಜಾರಿಗೆ ತರುವುದರ ಮೂಲಕ ಜನರಿಗೆ ಹತ್ತಿರವಾಗಿದ್ದ ಮುಕೇಶ್ ಅಂಬಾನಿಯವರು ಈಗ ಜಿಯೋ ಬುಕ್ (Jio Book) ಜಾರಿಗೆ ತರುವುದರ ಮೂಲಕ ಗ್ರಾಹಕರನ್ನ ಇನ್ನಷ್ಟು ಆಕರ್ಷಣೆ ಮಾಡಿದ್ದಾರೆ.

JioBook laptop will be available at a low price
Image Credit: indiatoday

ಈಗಿನ ಕಾಲದಲ್ಲಿ ಕೆಲಸ ಮಾಡಲು ಲ್ಯಾಪ್ ಟಾಪ್ ತುಂಬಾ ಅವಶ್ಯಕ
ಹೌದು ಪ್ರಸ್ತುತ ದಿನಗಳಲ್ಲಿ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸದ ಸಮಯದಲ್ಲಿ ಮತ್ತು ಹೆಚ್ಚಿನ ಕೆಲಸಗಳಿಗೆ laptop ಬಳಸಲಾಗುತ್ತದೆ ಮತ್ತು ಲ್ಯಾಪ್ ಟಾಪ್ ಇಲ್ಲದೆ ಕೆಲವು ಕೆಲಸಗಳನ್ನ ಮಾಡಲು ಸಾಧ್ಯವಿಲ್ಲ. ಈಶದಲ್ಲಿ ಹಲವು ಕಂಪನಿಯ ಲ್ಯಾಪ್ ಟಾಪ್ ಗಳು ಇದ್ದು ಜನರು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಫೀಚರ್ ಇರುವ ಲ್ಯಾಪ್ ಟಾಪ್ ಯಾವಾಗ ಸಿಗುತ್ತದೆ ಎಂದು ಹುಡುಕುತ್ತಾರೆ.

ಮಾರುಕಟ್ಟೆಯಲ್ಲಿ ಲ್ಯಾಪ್ ಟಾಪ್ ಬಹಳ ದುಬಾರಿ
ಹೌದು ಸದ್ಯ ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ಲ್ಯಾಪ್ ಟಾಪ್ ಗಳು ಇದ್ದು ಕೆಲವು ಲ್ಯಾಪ್ ಟಾಪ್ ಗಳು ಬಹಳ ದುಬಾರಿ ಆಗಿದೆ. ಜನರಿಗೆ ಕಡಿಮೆ ಬೆಲೆಯಲ್ಲಿ ಲ್ಯಾಪ್ ಟಾಪ್ ಒದಗಿಸುವ ಉದ್ದೇಶದಿಂದ ಮುಕೇಶ್ ಅಂಬಾನಿಯವರು ಈಗ ಜಿಯೋ ಬುಕ್ ಅನ್ನುವ ಹೊಸ ಮಾದರಿಯ ಲ್ಯಾಪ್ ಅನ್ನು ಮಾರುಕಟ್ಟೆಗೆ ಪರಿಚಯ ಮಾಡಿದ್ದಾರೆ.

JioBook available at Reliance Digital Store
Image Credit: economictimes.indiatimes

ಜಿಯೋ ಬುಕ್ ಲ್ಯಾಪ್ ಟಾಪ್ ಗೆ ಜನರು ಫುಲ್ ಫಿದಾ
ಜಿಯೋ ಬುಕ್ ಅನ್ನುವುದು ಜಿಯೋ ಕಂಪನಿ ಸಿದ್ಧಪಡಿಸಿರುವ ಲ್ಯಾಪ್ ಟಾಪ್ ಆಗಿದ್ದು ಇತರೆ ಕಂಪನಿಗಳ ಲ್ಯಾಪ್ ಟಾಪ್ ಗಳಿಗೆ ಹೋಲಿಕೆ ಮಾಡಿದರೆ ಜಿಯೋ ಬುಕ್ ಲ್ಯಾಪ್ ಟಾಪ್ ಬೆಲೆ ಬಹಳ ಕಡಿಮೆ ಆಗಿದೆ. ಇನ್ನು ಈ ಜಿಯೋ ಬುಕ್ ಲ್ಯಾಪ್ಟಾಪ್ ಅನ್ನು Reliance Digital Store ಮೂಲಕ ಜನರು ಖರೀದಿ ಮಾಡಬಹುದಾಗಿದೆ.

Join Nadunudi News WhatsApp Group

ಕಡಿಮೆ ಬೆಲೆಯಲ್ಲಿ ಸಿಗಲಿದೆ JioBook
JioBook MRP ಬೆಲೆ 35,605 ರೂಪಾಯಿ ಆಗಿದೆ, ಆದರೆ ಆರಂಭಿಕ ಆಫರ್ ಇರುವ ಇರುವ ಕಾರಣ ಜನರು ಈ ಲ್ಯಾಪ್ ಟಾಪ್ ಅನ್ನು ಕೇವಲ 15,799 ರೂಪಾಯಿಗಳಲ್ಲಿ ಎಲ್ಲಾ ರಿಲಯನ್ಸ್ ಡಿಜಿಟಲ್ ಸ್ಟೋರ್ ಗಳಲ್ಲಿ ಖರೀದಿ ಮಾಡಬಹುದು. ಇನ್ನು ಈ ಲ್ಯಾಪ್ ಟಾಪ್ ಮೇಲೆ ಕೆಲವು ಆಫರ್ ಗಳು ಲಭ್ಯವಿರುವ ಕಾರಣ ಲ್ಯಾಪ್ ಟಾಪ್ ಖರೀದಿ ಮಾಡುವ ಸಮಯದಲ್ಲಿ ಜನರು ಇನ್ನಷ್ಟು ರಿಯಾಯಿತಿಯನ್ನ ಕೂಡ ಪಡೆದುಕೊಳ್ಳಬಹುದು.

Blue color JioBook laptop has come to the market
Image credit: economictimes.indiatimes

ಕ್ರೆಡಿಟ್ ಕಾರ್ಡುಗಳ ಮೇಲೆ ಭರ್ಜರಿ ಆಫರ್
ಹೌದು ಕೆಲವು ಬ್ಯಾಂಕುಗಳ Credit Card ಮೇಲೆ ಭರ್ಜರಿ ಆಫರ್ ಘೋಷಣೆ ಮಾಲಾಗಿದೆ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಲ್ಯಾಪ್ ಟಾಪ್ ಖರೀದಿ ಮಾಡಿದರೆ ಇನ್ನಷ್ಟು ಆಫರ್ ಗಳು ಇದ್ದು ಹೆಚ್ಚಿನ ಮಾಹಿತಿಗಾಗಿ ರಿಲಯನ್ಸ್ ಡಿಜಿಟಲ್ ಸ್ಟೋರ್ ಅನ್ನು ಸಂಪರ್ಕ ಮಾಡುವುದು ಬಹಳ ಉತ್ತಮ.

JioBook ಲ್ಯಾಪ್ ಟಾಪ್ ನಲ್ಲಿ ಏನೇನಿದೆ
JioBook ಲ್ಯಾಪ್ ಟಾಪ್ ಅನ್ನು ಒಂದೇ ಬಣ್ಣದಲ್ಲಿ ತಯಾರು ಮಾಡಲಾಗಿದೆ. ಬ್ಲೂ ಬಣ್ಣದಲ್ಲಿ ಮಾತ್ರ ಈ ಲ್ಯಾಪ್ ಟಾಪ್ ಸಿಗಲಿದೆ ಮತ್ತು ಈ ಲ್ಯಾಪ್ ಟಾಪ್ 11.6 ಇಂಚಿನ ಸ್ಕ್ರೀನ್ ಹೊಂದಿದೆ. ಒಳ್ಳೆಯ ಸ್ಪೀಕರ್ ಮತ್ತು 2MP ವೆಬ್ ಕ್ಯಾಮೆರಾ ಈ ಲ್ಯಾಪ್ ಟಾಪ್ ನಲ್ಲಿ ಲಭ್ಯವಿದೆ.

5000mAh ಬ್ಯಾಟರಿ, 3.5mm ಆಡಿಯೋ ಜಾಕ್, 128GB ಮೈಕ್ರೋ SD ಕಾರ್ಡ್. ಅದೇ ರೀತಿಯಲ್ಲಿ ಇನ್ನಷ್ಟು ಹಲವು ವಿಶೇಷತೆಗಳು ಈ ಲ್ಯಾಪ್ ಟಾಪ್ ನಲ್ಲಿ ಇದ್ದು ಇದು ಯಾವುದೇ ದೊಡ್ಡ ಕಂಪನಿಯ ಲಪ್ ಟಾಪ್ ಗಳಿಗೆ ಕಡಿಮೆ ಇಲ್ಲ ಎಂದು ಕಂಪನಿ ಗರ್ವದಿಂದ ಹೇಳಿದೆ. ಈ JioBook ಗೆ ಒಮ್ಮೆ ಚಾರ್ಜ್ ಮಾಡಿದರೆ ಎಂಟು ಘಂಟೆಗಳ ಕಾಲ ಯಾವುದೇ ಸಮಸ್ಯೆ ಇಲ್ಲದೆ ಕೆಲಸವನ್ನ ಮಾಡಬಹುದು.

Join Nadunudi News WhatsApp Group