Laptop: ಕೇವಲ 16 ಸಾವಿರದಲ್ಲಿ ಸಿಗಲಿದೆ ಜಿಯೋ ಬುಕ್ ಲ್ಯಾಪ್ ಟಾಪ್.

ಆಗಸ್ಟ್ 5 ರಿಂದ ಬಿಡುಗಡೆಗೊಳ್ಳಲಿದೆ ಜಿಯೋ ಬುಕ್ ಲ್ಯಾಪ್ ಟಾಪ್.

Jiobook Laptop: ಡಿಜಿಟಲ್ ಯುಗದಲ್ಲಿ ಇತ್ತೀಚಿಗೆ ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್(Laptop) ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚಾಗಿದೆ. ಇನ್ನು ಸಂಬಂಧಪಟ್ಟ ಕಂಪನಿಗಳು ವಿವಿಧ ವಿನ್ಯಾಸದ ಹೊಸ ಹೊಸ ಮಾದರಿಯ ವಸ್ತುಗಳನ್ನು ಬಿಡುಗಡೆ ಮಾಡುತ್ತಲೇ ಇವೆ.

ಇನ್ನು ಪ್ರತಿಷ್ಠಿತ ಇ- ಕಾಮರ್ಸ್ ವೆಬ್ ಸೈಟ್ ಗಳೂ ಕೂಡ ಕೆಲ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ರಿಯಾಯಿತಿಯನ್ನು ಕೂಡ ಘೋಷಿಸಿವೆ. ಆನ್ಲೈನ್ ವೆಬ್ ಸೈಟ್ ಗಾಲ ರಿಯಾಯಿತಿಯ ಮೇಲೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ.

Jio Book Laptop will be released from August 5.
Image Credit: Cnbctv18

ಜಿಯೋ ಬುಕ್ ಲ್ಯಾಪ್ ಟಾಪ್ (Jiobook Laptop) ಬಿಡುಗಡೆ
ಇದೀಗ ಗ್ರಾಹಕರ ಬೇಡಿಕೆಗೆ ಅನುಗುನವಾಗಿ ಹೊಚ್ಚ ಹೊಸ ಜಿಯೋ ಬುಕ್ ಲ್ಯಾಪ್ ಟಾಪ್(Jio Book Laptop) ಬಿಡುಗಡೆಗೊಂಡಿದೆ. ಆಕರ್ಷಕ ವಿನ್ಯಾಸ ಮತ್ತು ವಿವಿಧ ಕನೆಕ್ಟೆಡ್ ಫೀಚರ್ ಗಳೊಂದಿಗೆ ಜಿಯೋ ಬುಕ್ ಲ್ಯಾಪ್ ಟಾಪ್ ಬಿಡುಗಡೆಗೊಂಡಿದೆ. ವಿದ್ಯಾರ್ಥಿಗಳು ಸೇರಿದಂತೆ ಕಚೇರಿ ಕೆಲಸಗಳನ್ನು ಮಾಡಿಕೊಳ್ಳಲು ಲ್ಯಾಪ್ ಟಪ್ ಸಹಾಯವಾಗಲಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ವಿವಿಧ ಕಂಪನಿಗಳ ಲ್ಯಾಪ್ ಟಾಪ್ ಲಭ್ಯವಿದೆ. ಇವುಗಳ ಜೊತೆಗೆ ಇದೀಗ ಜಿಯೋ ಬುಕ್ ಲ್ಯಾಪ್ ಟಾಪ್ ಬಿಡುಗಡೆಗೊಂಡು ಗ್ರಾಹಕರನ್ನು ಸೆಳೆಯಲಿದೆ.

ಜಿಯೋ ಬುಕ್ ಲ್ಯಾಪ್ ಟಾಪ್ ಬೆಲೆ
ಆಗಸ್ಟ್ 5 ರಿಂದ ಜಿಯೋ ಬುಕ್ ಲ್ಯಾಪ್ ಟಾಪ್ ಬಿಡುಗಡೆಗೊಳ್ಳಲಿದೆ. ಜಿಯೋ ರಿಟೇಲ್, ರಿಲಯನ್ಸ್ ಡಿಜಿಟಲ್ ಹಾಗೂ ಫ್ಲಿಪ್ ಕಾರ್ಟ್, ಅಮೆಜಾನ್ ಸೇರಿದಂತೆ ಇನ್ನಿತರ ಇ ಕಾಮರ್ಸ್ ಶಾಪಿಂಗ್ ವೆಬ್ ಸೈಟ್ ಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಇನ್ನು ಇ ಜಿಯೋ ಬುಕ್ ಲ್ಯಾಪ್ ಟಾಪ್ ಗೆ 16,499 ರೂ. ನಿಗದಿಪಡಿಸಲಾಗಿದೆ. ಆನ್ಲೈನ್ ಅಥವಾ ಆಫ್ ಲೈನ್ ನ ಮೂಲಕ ಅಥವಾ Amazon .in ವೆಬ್ ಸೈಟ್ ನ ಮೂಲಕ ಖರೀದಿಸಬಹುದಾಗಿದೆ.

Jio Book Laptop Special feature
Image Credit: Indiatoday

ಜಿಯೋ ಬುಕ್ ಲ್ಯಾಪ್ ಟಾಪ್ ವಿಶೇಷತೆ
ಜಿಯೋ ಬುಕ್ ಲ್ಯಾಪ್ ಟಾಪ್ ನಲ್ಲಿ ಮ್ಯಾಟ್ ಫಿನಿಷ್, ಅಲ್ಟ್ರಾ ಸ್ಲಿಮ್ ಬಿಲ್ಟ್ , 2.0 GHz ಓಕ್ಟಾ ಕೋರ್ ಪ್ರೊಸೆಸರ್, 4GB LPDDR4 RAM , 64GB ಸ್ಟೋರೇಜ್, ಇನ್ ಫಿನಿಟಿ ಕೀಬೋರ್ಡ್, ಟ್ರ್ಯಾಕ್ ಪ್ಯಾಡ್, ಅಂತರ್ ನಿರ್ಮಿತ USB /HDMI ಪೋರ್ಟ್ ಗಳನ್ನೂ ಅಳವದಲಿಸಲಾಗಿದೆ. ಈ ಜಿಯೋ ಬುಕ್ ಲ್ಯಾಪ್ ಟಾಪ್ ಕೇವಲ 990 ಗ್ರಾಂ ತೂಕವಿದ್ದು ಬೇರೆ ಲ್ಯಾಪ್ ಟಪ್ ಗಳಿಗಿಂತ ಹಗುರವಾಗಿದೆ.

Join Nadunudi News WhatsApp Group

Join Nadunudi News WhatsApp Group