Job Alert: ಪದವಿ ಪಾಸ್ ಆದವರಿಗೆ ಭರ್ಜರಿ ನೇಮಕಾತಿ, ಸಂಬಳ ಭರ್ಜರಿ 1.5 ಲಕ್ಷ ರೂ, ಇಂದೇ ಅರ್ಜಿ ಸಲ್ಲಿಸಿ

ಈ ವಿದ್ಯಾರ್ಹತೆ ಇದ್ದರೆ ಮಾಸಿಕ 1.50 ಲಕ್ಷ ಸಂಬಳ ಪಡೆಯುವ ಉದ್ಯೋಗ ಸಿಗಲಿದೆ.

Job Recruitment 2024: ಸಾಮಾನ್ಯವಾಗಿ ಹೆಚ್ಚಿನ ಜನರು ಸರ್ಕಾರೀ ಉದ್ಯೋಗವನ್ನು ಪಡೆಯಬೇಕು ಎಂದು ಆಶಿಸುತ್ತಾರೆ. ಸರ್ಕಾರೀ ಉದ್ಯೋಗವನ್ನು ಪಡೆಯುವುದು ಅಷ್ಟು ಸುಲಭದ ಮಾತಲ್ಲ ಇದಕ್ಕಾಗಿ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಇನ್ನು ದೇಶದಲ್ಲಿ ಲೋಕಸಭಾ ಚುನಾವಣೆಯ ಕಾರಣ ವಿವಿಧ ರಾಜಕೀಯ ಪಕ್ಷಗಳು ಖಾಲಿ ಇರುವ ಸರ್ಕಾರೀ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿವೆ.

ಹಾಗೆಯೆ ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಇಂಟೆಲಿಜೆನ್ಸ್ ಬ್ಯೂರೋ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ನೀಡಿದೆ. ದೊಡ್ಡ ಪ್ರಮಾಣದಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಈ ಉದ್ಯೋಗಗಳನ್ನು ಪಡೆಯಲು ಈ ಅರ್ಹತೆಗಳು ಇದ್ದರೆ ಸಾಕಾಗುತ್ತದೆ.

Job Recruitment 2024
Image Credit: ABP Live

ಈ ವಿದ್ಯಾರ್ಹತೆ ಇದ್ದರೆ ಮಾಸಿಕ 1.50 ಲಕ್ಷ ಸಂಬಳ ಪಡೆಯುವ ಉದ್ಯೋಗ ಸಿಗಲಿದೆ
ನೀವು ಈ ಉದ್ಯೋಗಗಳಿಗೆ ಆಯ್ಕೆಯಾದರೆ, ನೀವು ಪೋಸ್ಟ್‌ ಗಳಿಗೆ ಅನುಗುಣವಾಗಿ ತಿಂಗಳಿಗೆ 1,51,000 ರೂಪಾಯಿಗಳ ಸಂಬಳವನ್ನು ಪಡೆಯುತ್ತೀರಿ. ಇಂಟೆಲಿಜೆನ್ಸ್ ಬ್ಯೂರೋ ಒಟ್ಟು 660 ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. 10 ನೇ, ಇಂಟರ್, ಪದವಿ ಅರ್ಹ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಮೇ 30 ರ ವರೆಗೆ ಆನ್‌ ಲೈನ್‌ ನಲ್ಲಿ ಅರ್ಜಿ ಸಲ್ಲಿಸಬಹುದು. ಸಂಪೂರ್ಣ ಮಾಹಿತಿಗಾಗಿ ಅಭ್ಯರ್ಥಿಗಳು ವೆಬ್‌ ಸೈಟ್ mha.gov.in ಅನ್ನು ಪರಿಶೀಲಿಸಬಹುದು. ಇನ್ನು ಅರ್ಜಿದಾರರಾ ವಯಸ್ಸು 56 ವರ್ಷವನ್ನು ಮೀರಿರಬಾರದು

ಹುದ್ದೆಯ ವಿವರ ಈ ಕೆಳಗಿನಂತಿದೆ
•ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-I/ಕಾರ್ಯನಿರ್ವಾಹಕ – 80

•ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ-II/ಕಾರ್ಯನಿರ್ವಾಹಕ -136

Join Nadunudi News WhatsApp Group

•ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ I/ಎಕ್ಸಿಕ್ಯೂಟಿವ್ – 120

•ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ II/ಕಾರ್ಯನಿರ್ವಾಹಕ – 170

Intelligence Bureau Recruitment 2024
Image Credit: Karmasandhan

•ಭದ್ರತಾ ಸಹಾಯಕ / ಕಾರ್ಯನಿರ್ವಾಹಕ -100

•ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ II/ಟೆಕ್- 8

•ಸಹಾಯಕ ಕೇಂದ್ರ ಗುಪ್ತಚರ ಅಧಿಕಾರಿ II/ಸಿವಿಲ್ ವರ್ಕ್ಸ್- 3

•ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ I/ಮೋಟಾರು ಸಾರಿಗೆ – 22

•ಅಡುಗೆ ಮಾಡುವವರು- 10

•ಕೇರ್ ಟೇಕರ್ – 5

•ಆಪ್ತ ಸಹಾಯಕ – 5

•ಮುದ್ರಣ- ಪ್ರೆಸ್- ಆಪರೇಟರ್- 1

Intelligence Bureau Recruitment
Image Credit: Studycafe

Join Nadunudi News WhatsApp Group