Job Reservation: ಯುವ ನಿಧಿ ಬೆನ್ನಲ್ಲೇ ಇನ್ನೊಂದು ಯೋಜನೆ, ಕನ್ನಡಿಗರಿಗೆ ಈ ಕ್ಷೇತ್ರದಲ್ಲಿ ಉದ್ಯೋಗ ಮೀಸಲು ಕಡ್ಡಾಯ

ಇನ್ನುಮುಂದೆ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಡ್ಡಾಯ

Job Reservation In Private Sector: ಸದ್ಯ ರಾಜ್ಯ ಸರ್ಕಾರ ರಾಜ್ಯದ ಜನತೆಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಪರಿಚಯಿಸುವುದರ ಜೊತೆಗೆ ಹೆಚ್ಚಿನ ಸೌಲಭ್ಯವನ್ನು ಕಲ್ಪಿಸಿಕೊಡುತ್ತಿದೆ. ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಯೋಜನೆಗಳು ತಲೆ ಎತ್ತಿಕೊಂಡಿದ್ದು, ಇನ್ನು ಹತ್ತು ಹಲವು ಯೋಜನೆಗಳು ಸದ್ಯದಲ್ಲೇ ಜಾರಿಗೆ ಬರಲಿದೆ. ಇದೀಗ ರಾಜ್ಯ ಸರ್ಕಾರದಿಂದ ಕರ್ನಾಟಕ ಜನತೆಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

Job Reservation In Private Sector
Image Credit: Scroll

ಸಂಕ್ರಾಂತಿ ಹಬ್ಬದ ಸಮಯದಲ್ಲಿ ಕರ್ನಾಟಕದ ಜನತೆಗೆ ಸಿಹಿ ಸುದ್ದಿ
ಸದ್ಯ ಎಲ್ಲೆಡೆ ಸಂಕ್ರಾಂತಿ ಹಬ್ಬದ ಸಡಗರ ಜೋರಾಗಿಯೇ ನಡೆಯುತ್ತಿದೆ. ಜನರು ಸಂಕ್ರಾಂತಿ ಹಬ್ಬದ ಸಂಭ್ರದಲ್ಲಿ ಮುಳುಗಿದ್ದಾರೆ. ಇನ್ನು ಸಂಕ್ರಾಂತಿ ಹಬ್ಬದ ವಿಶೇಷಕ್ಕೆ ಸರ್ಕಾರ ಜನರಿಗೆ ಸಿಹಿಸುದ್ದಿ ನೀಡುವುದು ಬಾಕಿ ಇದೆ. ಸದ್ಯ ರಾಜ್ಯ ಸರ್ಕಾರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಕರ್ನಾಟಕದ ಜನತೆಗೆ ಸಿಹಿ ಸುದ್ದಿ ನೀಡಿದೆ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಸಭೆ ನಡೆಸಿ, ಸಂಕ್ರಾಂತಿ ಶುಭದಿನದಂದು ಘೋಷಣೆ ಹೊರಡಿಸಿದೆ.

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಡ್ಡಾಯ
ಸದ್ಯ ರಾಜ್ಯ ಸರ್ಕಾರ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಮಹತ್ವದ ತೀರ್ಮಾನ ಕೈಗೊಂಡಿದೆ. ಕಾರ್ಮಿಕ ಇಲಾಖೆಯು ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಹಾಗೂ ಸರ್ಕಾರೀ ಹುದ್ದೆಗಳಲ್ಲಿ ಅಂಗವಿಕಲರಿಗೆ ಉದೋಗ್ಯ ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಿದೆ.

Reservation in Private Sector Jobs
Image Credit: The Hindu

ರಾಜ್ಯ ಸರ್ಕಾರವು ರಾಜ್ಯದಲ್ಲಿ ಯಾವುದೇ ಉದ್ಯಮ ಸ್ಥಾಪನೆ ಮಾಡುವ ಉದ್ಯೋಗಿಗಳು ಕನ್ನಡಿಗರು ಹಾಗೂ ಅಂಗವಿಕಲೀರಿಗೆ ಕಡ್ಡಾಯವಾಗಲಿ ಉದ್ಯೋಗ ನೀಡುವುದಕ್ಕೆ ಸಂಬಂಧಿಸಿದಂತೆ ಸ್ಪ್ಯಾಂಡಿಂಗ್ ಆರ್ಡರ್ ನಲ್ಲಿಯೇ ಬದಲಾವಣೆ ತರಲು ತೀರ್ಮಾನಿಸಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸ್ಪ್ಯಾಂಡಿಂಗ್ ಆರ್ಡರ್ ನಲ್ಲಿ ಬದಲಾವಣೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group