Jothe Jotheyali: ಜೊತೆ ಜೊತೆಯಲಿ ಅಭಿಮಾನಿಗಳಿಗೆ ಬೇಸರದ ಸುದ್ದಿ, ಶೀಘ್ರದಲ್ಲಿ ಅಂತ್ಯವಾಗಲಿದೆ ಧಾರವಾಹಿ.

ಮುಕ್ತಾಯದ ಹಂತದಲ್ಲಿ ಜೊತೆ ಜೊತೆಯಲಿ ಸೀರಿಯಲ್, ಇನ್ನೇನು ಕೆಲವೇ ದಿನಗಳಲ್ಲಿ ಧಾರವಾಹಿ ಮುಕ್ತಾಯ.

Jote Joteyali Serial Climax: ಜೀ ವಾಹಿನಿಯಲ್ಲಿ (Zee Channel) ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ (Jote Joteyali Serial) ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಜೊತೆ ಜೊತೆಯಲಿ ಧಾರಾವಾಹಿಯ ಪ್ರತಿಯೊಂದು ಪಾತ್ರವು ಕೂಡ ಅಭಿಮಾನಿಗಳ ಮನ ಮುಟ್ಟಿದೆ.

ಜೀ ವಾಹಿನಿಯ ಜೊತೆ ಜೊತೆಯಲಿ ಧಾರಾವಾಹಿ ಅತಿ ಹೆಚ್ಚು ಟಿಆರ್ ಪಿ ಪಡೆದಿದೆ. ಕನ್ನಡಿಗರ ನೆಚ್ಚಿನ ಧಾರಾವಾಹಿಯಾಗಿ ಜೊತೆ ಜೊತೆಯಲಿ ಮೂಡಿಬರುತ್ತಿದೆ.

Jote Joteyali Serial Climax
Image Credit: news18

ಶೀಘ್ರದಲ್ಲಿ ಅಂತ್ಯವಾಗಲಿದೆ ಜೀ ವಾಹಿನಿಯ ಜೊತೆ ಜೊತೆಯಲಿ
ಇನ್ನು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಮೇಘ ಶೆಟ್ಟಿ (Megha Shetty) ಹಾಗೂ ಹರೀಶ್ ರಾಜ್ (Harish Raj) ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸತತ ನಾಲ್ಕು ವರ್ಷಗಳ ಕಾಲ ಜೊತೆ ಜೊತೆಯಲಿ ಧಾರಾವಾಹಿ ಪ್ರಸಾರವಾಗಿ ವಿಕ್ಷರನ್ನು ಸೆಳೆದಿದೆ.

ಇದೀಗ ಜೊತೆ ಜೊತೆಯಲಿ ಧಾರಾವಾಹಿ ಮುಕ್ತಾಯ ಹಂತಕ್ಕೆ ತಲುಪಿದೆ. ಈ ಕುರಿತು ಧಾರಾವಾಹಿ ಪ್ರಿಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಅಂತ್ಯಗೊಳ್ಳಲು ಕಾರಣ ಏನು ಎನ್ನುವ ಬಗ್ಗೆ ತಿಳಿಯೋಣ.

ಜೊತೆ ಜೊತೆಯಲಿ ಧಾರಾವಾಹಿ ಅಂತ್ಯಗೊಳ್ಳಲು ಕಾರಣ
*ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಈ ಹಿಂದೆ ಅನಿರುದ್ದ್ (Anirudh) ಅವರು ಮುಖ್ಯ ಪಾತ್ರ ನಿರ್ವಹಿಸುತ್ತಿದ್ದರು. ಯಾವುದೊ ಕಾರಣದಿಂದಾಗಿ ಅನುರುದ್ದ್ ಹಾಗೂ ಧಾರಾವಾಹಿ ತಂಡದ ನಡುವೆ ವಿವಾದ ಉಂಟಾಗಿ ಅನಿರುದ್ದ್ ತಂಡದಿಂದ ಹೊರಗೆ ಬಂದಿದ್ದರು.

Join Nadunudi News WhatsApp Group

In a few days, people's favorite serial will be ending.
Image Credit: pinterest

*ಅನಿರುದ್ದ್ ಧಾರಾವಾಹಿಯಿಂದ  ಹೊರ ನಡೆದ ಬಳಿಕ ಧಾರಾವಾಹಿಯ ಟಿ ಆರ್ ಪಿ ಕಡಿಮೆ ಆಗಿತ್ತು. ನಂತರ ಹರೀಶ್ ರಾಜ್ ಅನಿರುದ್ ಅವರ ಸ್ಥಾನಕ್ಕೆ ಬಂದಿದ್ದರು. ಆದರೂ ಸಹ ಮೊದಲಿನ ಟಿ ಆರ್ ಆರ್ಪಿ ಧಾರಾವಾಹಿಗೆ ಸಿಗಲಿಲ್ಲ.
*ಇನ್ನು ಧಾರಾವಾಹಿಯಲ್ಲಿ ನಟಿಸುವ ಪ್ರಮುಖ ಪಾತ್ರದಾರಿಗಳು ಇದೀಗ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಇನ್ನು ಸಿನಿಮಾಗಳಲ್ಲಿ ನಟಿಸುವ ಸಲುವಾಗಿ ಧಾರಾವಾಹಿಯಲ್ಲಿ ನಟಿಸಲು ಡೇಟ್ ಸರಿಯಾಗಿ ಕೊಡದ ಕಾರಣ ಧಾರಾವಾಹಿಯನ್ನು ಅಂತ್ಯಗೊಳಿಸಲು ತಂಡ ನಿರ್ಧರಿಸಿದೆ ಎನ್ನಲಾಗುತ್ತಿದೆ.

Join Nadunudi News WhatsApp Group