Jr. NTR: ಜೂನಿಯರ್ NTR ಧರಿಸುವ ವಾಚ್ ಬೆಲೆ ಎಷ್ಟು ಗೊತ್ತಾ…? ಈ ದುಬಾರಿ ವಾಚ್ ಕೆಲವರ ಬಳಿ ಮಾತ್ರ ಇದೆ

ಜೂನಿಯರ್ NTR ಧರಿಸುವ ವಾಚ್ ಬೆಲೆ ಎಷ್ಟು ಗೊತ್ತಾ...? ದುಬಾರಿ ವಾಚ್

Jr. NTR Expensive Watch: ಸಾಮಾನ್ಯವಾಗಿ ಸ್ಟಾರ್ ಸೆಲೆಬ್ರೆಟಿಗಳು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಆಗಾಗ ಸೆಲೆಬ್ರೆಟಿಗಳು ತಾವು ಬಳಸುವ ದುಬಾರಿ ವಾಚ್ ಗಳ ವಿಚಾರವಾಗಿ ಹೈಲೈಟ್ ಆಗುತ್ತಾ ಇರುತ್ತಾರೆ. ಇನ್ನು ಸ್ಟಾರ್ ನಟರು ಹೆಚ್ಚಾಗಿ ತಾವು ಧರಿಸುವ ದುಬಾರಿ ವಾಚ್ ವಿಚಾರವಾಗಿ ಎಲ್ಲರ ಗಮನ ಸೆಳೆಯುತ್ತಾರೆ.

ಯಾವುದೇ ಸಿನಿಮಾ ಇವೆಂಟ್ ಗೆ ಭಾಗಿಯಾಗುವಾಗ ನಟರು ಅತ್ಯಂತ ದುಬಾರಿ ವಾಚ್ ಗಳನ್ನ ಧರಿಸುವುದು ಸಹಜ. ಸದ್ಯ ಸ್ಟಾರ್ ನಟ ಜೂನಿಯರ್ NTR ಇದೀಗ ಅತ್ಯಂತ ದುಬಾರಿ ಬೆಲೆಯ ವಾಚ್ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಜೂನಿಯರ್ NTR ಧರಿಸಿದ ವಾಚ್ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈ ವಾಚ್ ಬೆಲೆಯ ಬಗ್ಗೆ ತಿಳಿದರೆ ನೀವು ಅಚ್ಚರಿ ಪಡುವುದಂತೂ ನಿಜ.

Jr. NTR Expensive Watch
Image Credit: Telugustop

ಜೂನಿಯರ್ NTR ಧರಿಸುವ ವಾಚ್ ಬೆಲೆ ಎಷ್ಟು ಗೊತ್ತಾ…?
ಸದ್ಯ ದೇವರ ಚಿತ್ರದ ಶೂಟಿಂಗ್ ನಲ್ಲಿ ಜೂನಿಯರ್ ಎನ್ ಟಿಆರ್ ಬ್ಯುಸಿಯಾಗಿದ್ದಾರೆ. ಅಕ್ಟೋಬರ್ 10 ರಂದು ಚಿತ್ರ ಥಿಯೇಟರ್‌ ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಈಗಾಗಲೇ ಘೋಷಿಸಿದೆ. ಜೂನಿಯರ್ NTR ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಇನ್ನು ನಿನ್ನೆ ಟಿಲ್ಲು ಸ್ಕ್ವೇರ್ ಚಿತ್ರದ ಸಕ್ಸಸ್ ಮೀಟ್ ನಡೆಯಿತು.

ಈ ಕಾರ್ಯಕ್ರಮಕ್ಕೆ ಜೂನಿಯರ್ ಎನ್ ಟಿಆರ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಎನ್‌ಟಿಆರ್ ದೇವರ ಚಿತ್ರವು ನಿಮ್ಮೆಲ್ಲರ ಕಾಲರ್ ಅನ್ನು ಎತ್ತುವಂತೆ ಮಾಡುತ್ತದೆ. ಸ್ವಲ್ಪ ತಡವಾದರೂ ಎಲ್ಲರಿಗೂ ಈ ಚಿತ್ರ ಇಷ್ಟವಾಗುತ್ತದೆ ಎಂದರು. ಇನ್ನು ಕಾರ್ಯಕ್ರಮದಲ್ಲಿ ಜೂನಿಯರ್ ಎನ್ ಟಿಆರ್ ಧರಿಸಿದ ವಾಚ್ ಎಲ್ಲರ ಗಮನ ಸೆಳೆದಿದೆ ಅಷ್ಟಕ್ಕೂ ಜೂನಿಯರ್ NTR ಧರಿಸುವ ವಾಚ್ ಬೆಲೆ ಎಷ್ಟು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ .

Jr. NTR Expensive Watch Price
Image Credit: Telugustop

ಈ ದುಬಾರಿ ವಾಚ್ ಕೆಲವರ ಬಳಿ ಮಾತ್ರ ಇದೆ
ಸ್ಕ್ವೇರ್ ಚಿತ್ರದ ಸಕ್ಸಸ್ ಮೀಟ್ ನಲ್ಲಿ ತಾರಕ್ ಧರಿಸಿದ್ದ ವಾಚ್ ಎಲ್ಲರ ಗಮನ ಸೆಳೆಯಿತು. ಅದರಲ್ಲೂ ವಾಚ್ ಬೆಲೆ ಕೇಳಿದಾಗ ಎಲ್ಲರೂ ದಂಗಾಗಿ ಹೋಗಿದ್ದಾರೆ. ತಾರಕ್ ಧರಿಸಿರುವ ವಾಚ್ ‘ಓಡೋಮರ್ ಪಿಗೆಟ್ ರಾಯಲ್ ಓಕ್’ ಬ್ರಾಂಡ್‌ ಗೆ ಸೇರಿದೆ. ಇದರ ಬೆಲೆ 1,89,000 ಡಾಲರ್. ಅಂದರೆ ಭಾರತೀಯ ಕರೆನ್ಸಿ ಪ್ರಕಾರ 1,57,32,455 ರೂ. ಆಗಿದೆ.

Join Nadunudi News WhatsApp Group

ಈ ಗಡಿಯಾರವು ವಿಭಿನ್ನ ಮಾಡೆಲ್ ಗಳನ್ನು ಹೊಂದಿದೆ. ಮಾಡೆಲ್ ಅವಲಂಬಿಸಿ ಬೆಲೆಗಳು ಬದಲಾಗುತ್ತವೆ. ಈ ದುಬಾರಿ ವಾಚ್ ಕೆಲವರ ಬಳಿ ಮಾತ್ರ ಇದೆ. ಈಗಾಗಲೇ ಜುಂಯ್ರ್ NTR ಬಳಿ ಕೋಟ್ಯಾಂತರ ಮೌಲ್ಯದ ವಾಚ್ ಗಳಿದ್ದು, ಇದೀಗ ಮತ್ತೊಂದು ವಾಚ್ ನ ಬಗ್ಗೆ ಸುದ್ದಿ ವೈರಾಲ್ ಆಗಿದೆ. ಸೋಶಿಯಲ್ ಮಿಡಿಯದಲ್ಲಂತೂ ಜೂನಿಯರ್ NTR ಅವರ ವಾಚ್ ಫೋಟೋ ಬಾರಿ ವೈರಲ್ ಆಗುತ್ತಿದೆ.

Jr. NTR Latest News
Image Credit: Siasat

Join Nadunudi News WhatsApp Group