Juice Jacking Scam: ಜ್ಯುಸ್ ಜಾಕಿಂಗ್ ಸ್ಕ್ಯಾಮ್ ಹೇಗೆ ಆಗುತ್ತದೆ, ಇಲ್ಲಿದೆ ಮಾಹಿತಿ.

ಜ್ಯುಸ್ ಜಾಕಿಂಗ್ ಸ್ಕ್ಯಾಮ್ ಬಗ್ಗೆ ಮಾಹಿತಿ ತಿಳಿಯಿರಿ.

Juice Jacking Scam: ಇತ್ತೀಚಿಗೆ ಆನ್ಲೈನ್  ಫ್ರಾಡ್ ಗಳು ಹೆಚ್ಚಾಗಿ ನಡೆಯುತ್ತಿದೆ. ವಂಚಕರಿಂದ ಜನರು ಹೆಚ್ಚು ವಂಚನೆಗೆ ಒಳಗಾಗುತ್ತಾರೆ. ಸೈಬರ್ ಕ್ರೈಮ್(Cyber Crime) ಪ್ರಕರಣಗಳು ಇತ್ತೀಚಿಗೆ ಹೆಚ್ಚು ದಾಖಲಾಗಿವೆ. ಜನರ ವಯಕ್ತಿಕ ಮಾಹಿತಿಗಳನ್ನು ವಂಚಕರು ತಿಳಿದುಕೊಂಡು ಅವರ ಖಾತೆಗಳನ್ನು ಖಾಲಿ ಮಾಡುತ್ತಿದ್ದಾರೆ.

Learn about juice jacking scam.
Image Credit: Silicon

ಜ್ಯುಸ್ ಜಾಕಿಂಗ್ ಸ್ಕ್ಯಾಮ್
ಸಾರ್ವಜನಿಕರ ವಯಕ್ತಿಕ ಡೇಟಾ ಇನ್ನಿತರ ಅತ್ಯಮೂಖ್ಯ ಮಾಹಿತಿ ಜೊತೆಗೆ ಹಣವನ್ನು ಗೊತ್ತಾಗದಂತೆಯೇ ಅವರ ಡಿಜಿಟಲ್ ಡಿವೈಸ್ ಗಳ ಮೂಲಕ ಖಾದಿಯುವ ಜಾಲ ಜ್ಯುಸ್ ಜಾಕಿಂಗ್ ಸಕ್ರಿಯವಾಗಿದೆ. ಇಂತಹವರ ಮೋಸಗಳು ಹೇಗೆ ನಡೆಯುತ್ತವೆ. ಅದರಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವ ಮಾಹಿತಿ ತಿಳಿಯೋಣ.

ಜ್ಯುಸ್ ಜಾಕಿಂಗ್ ಸ್ಕ್ಯಾಮ್ ಹೇಗೆ ಆಗುತ್ತದೆ
ಜನರು ಸಾಮಾನ್ಯವಾಗಿ ತಮ್ಮ ಸ್ಮಾರ್ಟ್ ಫೋನ್ ಲ್ಯಾಪ್ ಟಾಪ್ ಅಥವಾ ಟ್ಯಾಬ್ಲೆಟ್ ಇತ್ಯಾದಿ ಸಾಧನಗಳ ಬ್ಯಾಟರಿ ಲೆವೆಲ್ ಕಡಿಮೆಯಾಗುತ್ತಿದ್ದಂತೆ ಚಾರ್ಜಿಂಗ್ ಪಾಯಿಂಟ್ ಗಳನ್ನೂ ಹುಡುಕುತ್ತಾರೆ. ಇಂತಹ ಚಾರ್ಜಿಂಗ್ ಪಾಯಿಂಟ್ ಗಳಲ್ಲಿ ಅಥವಾ ಕೆಲವೊಮ್ಮೆ ನಿಮ್ಮ ಮನೆ ಅಥವಾ ಕಚೇರಿಯಲ್ಲಿ ನೀವು ಇಲ್ಲದಿರುವಾಗ ನಿಮ್ಮ ಡಿವೈಸ್ ಗಳಿಂದಲೇ ಹಣ ಕಳ್ಳತನವಾಗಾಹುದು. ಇಲ್ಲದೆ ನಿಮ್ಮ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಗಳು ಸಹ ಇರುತ್ತದೆ.

Learn about juice jacking scam.
Image Credit: Thebegusarai

ಚಾರ್ಜಿಂಗ್ ಪಾಯಿಂಟ್ ಗಳಲ್ಲಿ ಮೊಬೈಲ್, ಲ್ಯಾಪ್ ಟಾಪ್ ಇನ್ನಿತರ ಡಿವೈಸ್ ಗಳನ್ನೂ ಚಾರ್ಜಿಗೆ ಹಾಕಿದಾಗ ಯು ಎಸ್ ಬಿ ಪೋರ್ಟ್ ಗಳು ಅಥವಾ ಚಾರ್ಜಿಂಗ್ ಕಿಯೋಸ್ಕ್ ಗಳಂತಹ ಸಾಧನದ ಮೂಲಕವೇ ನಿಮ್ಮ ಡಿವೈಸ್ ನಲ್ಲಿ ಮಾಹಿತಿ ಹಣ ಕಳೆದುಕೊಳ್ಳಬೇಕಾಗುತ್ತದೆ. ಹೀಗೆ ವಂಚಿಸುವುದನ್ನು ಜ್ಯುಸ್ ಜಾಕಿಂಗ್ ಎಂದು ಕರೆಯಲಾಗುತ್ತದೆ. ಈ ಜ್ಯುಸ್ ಜಾಕಿಂಗ್ ವಂಚಕರು ಇತ್ತೀಚಿಗೆ ಹಣಕಾಸು ಕ್ಷೇತ್ರದಲ್ಲಿ ನಿಹಣವಾಗಿ ವಿಸ್ತರಿಸತ್ತಿದ್ದಾರೆ ಎಂದು ಆರ್ ಬಿ ಐ ಮೂಲಗಳು ಮಾಹಿತಿ ನೀಡಿವೆ.

ಜ್ಯುಸ್ ಜಾಕಿಂಗ್ ದುರುದ್ದೇಶಪೂರಿತ ವ್ಯಕ್ತಿಗಳು ಯು ಎಸ್ ಬಿ ಪೋರ್ಟ್ ಗಳು ಅಥವಾ ಚಾರ್ಜಿಂಗ್ ಕಿಯೋಸ್ಕ್ ಗಳಂತಹ ಸಾರ್ವಜನಿಕ ಸ್ಟೇಷನ್ ಗಳನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಿಮಗೆ ತಿಳಿದಿರುವಂತೆ ಮೊಬೈಲ್ ನ ಚಾರ್ಜಿಂಗ್ ಪೋರ್ಟ್ ಅನ್ನು ಫೋಟೋ, ವಿಡಿಯೋ ಹಾಗು ಇನ್ನಿತರ ಡೇಟಾ ವರ್ಗಾವಣೆಗೆ ಈಗಾಗಲೇ ಬಳಕೆ ಆಗುತ್ತಿದೆ.

Join Nadunudi News WhatsApp Group

juice jacking scam latest news update
Image Credit: Zeenews

ವಂಚಕರಿಂದ ತಪ್ಪಿಸಿಕೊಳ್ಳುವುದು ಹೇಗೆ
ಇಂತಹ ಅಪಾಯಗಳಿಂದ ನೀವು ತಪ್ಪಿಸಿಕೊಳ್ಳಲು ಗೊತ್ತಿರುವ ವಿಶ್ವಸಾರ್ಹ ಚಾರ್ಜಿಂಗ್ ಸ್ಟೇಷನ್ ಬಳಸಬೇಕು. ಆದಷ್ಟು ಮನೆಯಲ್ಲಿಯೇ ಇಲ್ಲ ನಿಮ್ಮ ಕಚೇರಿಗಳಲ್ಲಿ ಡಿವೈಸ್ ಗಳನ್ನೂ ಫುಲ್ ಚಾರ್ಜ್ ಮಾಡಿ ಇಟ್ಟುಕೊಳ್ಳಿ. ಅನಾವಶ್ಯಕವಾಗಿ ಅವಲಂಬನೆ ತಪ್ಪಿಸಿ ಜೊತೆಗೆ ಸಾರ್ವಜನಿಕವಾಗಿ ಹಣದ ವಹಿವಾಟು, ಪಾಸ್ ವಾರ್ಡ್ ಬಳಕೆ ಆದಷ್ಟು ಕಡಿಮೆ ಮಾಡುವ ಮೂಲಕ ವಂಚಕರದಿಂದ ದೂರ ಇರಬಹುದಾಗಿದೆ.

Join Nadunudi News WhatsApp Group