Kabzaa 2 Poster: ಕಬ್ಜ 2 ಚಿತ್ರದ ಬಗ್ಗೆ ಟ್ವಿಸ್ಟ್ ಕೊಟ್ಟ ಆರ್. ಚಂದ್ರು, ಜನರ ತಲೆಗೆ ಹುಳ ಬಿಟ್ಟ ಚಂದ್ರು.

ಕಬ್ಜ 2 ಚಿತ್ರದ ಪೋಸ್ಟರ್ ಅನ್ನು ಆರ್. ಚಂದ್ರು ಅವರು ಬಿಡುಗಡೆ ಮಾಡಿದ್ದಾರೆ.

Kabza 2a Update: ರಿಯಲ್ ಸ್ಟಾರ್ ಉಪೇಂದ್ರ (Upendra) ಅಭಿನಯದ ಕಬ್ಜ ಚಿತ್ರ (Kabzaa Movie) ಮಾರ್ಚ್ 17 ರಂದು ತೆರೆಯ ಮೇಲೆ ಬಂದು ಭರ್ಜರಿ ಯಶಸ್ಸು ಗಳಿಸಿದೆ. ಇನ್ನು ಕಬ್ಜ ಚಿತ್ರತಂಡ ಇದೀಗ 25 ದಿನದ ಯಶಸ್ಸಿನ ಸಂಭ್ರಮದಲ್ಲಿದ್ದಾರೆ.

ಕಬ್ಜ ಚಿತ್ರ ರಿಲೀಸ್ ಗೂ ಮುನ್ನವೇ ಬಾರಿ ಸದ್ದು ಮಾಡಿತ್ತು. ಇನ್ನು ಕಬ್ಜ ಬಿಡುಗಡೆಗೂ ಮುನ್ನವೇ ಕಬ್ಜ 2 ಬಗ್ಗೆ ಸಾಕಷ್ಟು ಅಪ್ಡೇಟ್ ಗಳು ಹರಿದಾಡಿದ್ದವು. ಇದೀಗ ಕಬ್ಜ 2 ಬಗ್ಗೆ ನಿರ್ದೇಶಕರಾದ ಆರ್. ಚಂದ್ರು (R. Chandru) ಅವರು ಅಧಿಕೃತ ಘೋಷಣೆ ಹೊರಡಿಸಿದ್ದಾರೆ.

Kabza 2a Update
Image Courtesy: India Today

ಭರ್ಜರಿ ಧಾಖಲೆ ಬರೆದ ಕನ್ನಡದ ಕಬ್ಜ
ಕನ್ನಡದ ಕಬ್ಜ ಚಿತ್ರ ಮೊದಲ ದಿನವೇ ಬರೋಬ್ಬರಿ 55 ಕೋಟಿ ಹಣ ಗಳಿಸುವ ಮೂಲಕ ಭರ್ಜರಿ ಧಾಖಲೆ ಬರೆದಿತ್ತು. ಇನ್ನು ಕಬ್ಜ ಚಿತ್ರದಲ್ಲಿ ಮೂರು ಸ್ಟಾರ್ ನಟರು ನಟಿಸಿರುವುದು ಗಮನಾರ್ಹವಾಗಿತ್ತು. ಕಿಚ್ಚ ಸುದೀಪ್ ಹಾಗೂ ಶಿವಣ್ಣ ರಿಯಲ್ ಸ್ಟಾರ್ ಗೆ ಕಬ್ಜ ಚಿತ್ರದಲ್ಲಿ ಸಾಥ್ ನೀಡಿದ್ದರು. ಇನ್ನು ಕಬ್ಜ ಚಿತ್ರ ಬಿಡುಗಡೆಗೊಂಡು 25 ದಿನಗಳನ್ನು ಪೂರೈಸಿದೆ. ಇದೀಗ ಕಬ್ಜ ಸೀಕ್ವೆಲ್ ಬಗ್ಗೆ ನಿರ್ದೇಶಕ ಆರ್ ಚಂದ್ರು ಅವರು ಮಾಹಿತಿ ನೀಡಿದ್ದಾರೆ.

Kabza 2a Update
Image Source: Filmibeat

 

View this post on Instagram

 

A post shared by R.Chandru (@rchandrumovies)

ಕಬ್ಜ ಸೀಕ್ವೆಲ್ ಪೋಸ್ಟರ್ ರಿಲೀಸ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ ಚಂದು ಕಬ್ಜ ಸೀಕ್ವೆಕ್ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಹಾಗೆಯೆ ಸೋಶಿಯಲ್ ಮೀಡಿಯಾದಲ್ಲಿ ಕಬ್ಜ 2 ಪೋಸ್ಟರ್ ಅನ್ನು ಕೂಡ ಆರ್ ಚಂದ್ರು ಹಂಚಿಕೊಂಡಿದ್ದಾರೆ. ಕಬ್ಜ ಚಿತ್ರಕ್ಕೆ ಸಹಾಯ ಸಪೋರ್ಟ್ ಮಾಡಿದ ಎಲ್ಲರಿಗು ಕೂಡ ಚಂದ್ರು ಧನ್ಯವಾದ ತಿಳಿಸಿದ್ದಾರೆ.

Join Nadunudi News WhatsApp Group

“ನಿಮ್ಮ ಪ್ರೀತಿ ವಿಶ್ವಾಸ ಬೆಂಬಲ ಮುಂದಿನ ದಿನಗಳಲ್ಲಿ ಕೂಡ ಹೀಗೆ ಇರಲಿ. ದಾರಿ ಗೊತ್ತಾಗಿದೆ. ಮೊದಲ ಚಿತ್ರದಲ್ಲಿ ಏನು ತಪ್ಪು ಇತ್ತೋ ಎಲ್ಲವನ್ನು ಸರಿ ಮಾಡಿಕೊಂಡು ಕಬ್ಜ 2 ಮಾಡುತ್ತೇನೆ. ಸುಮಾರು 35 ದೇಶದಲ್ಲಿ ಕಬ್ಜ ಚಿತ್ರವನ್ನು ರಿಲೀಸ್ ಮಾಡಿದ್ದೆ. ಇನ್ನು ಕಬ್ಜ 2 ಚಿತ್ರವನ್ನು ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುವ ಪ್ಲಾನ್ ಇದೆ. ನಿಮ್ಮೆಲ್ಲರ ಸಹಕಾರ ನಿರಂತರವಾಗಿ ಇರಲಿ. ಪ್ರೋತ್ಸಹಿಸಿದ ಎಲ್ಲರಿಗು ಕೂಡ ಧನ್ಯವಾದ” ಎಂದು ಆರ್ ಚಂದ್ರು ಹೇಳಿದ್ದಾರೆ.

Kabza 2a Update
Image Source: India Today

Join Nadunudi News WhatsApp Group