Kalpana Chawla: ಸಾವಿಗೂ ಮುನ್ನ ಕಲ್ಪನಾ ಚಾವ್ಲಾ ಕೊನೆಯದಾಗಿ ಕಳುಹಿಸಿದ ಸಂದೇಶ ಏನು…? ಕಣ್ಣೀರಿಟ್ಟ ಜಗತ್ತು

ಸಾವಿಗೂ ಮುನ್ನ ಕಲ್ಪನಾ ಚಾವ್ಲಾ ಕೊನೆಯದಾಗಿ ದೇಶಕ್ಕೆ ಕಳುಹಿಸಿದ ಸಂದೇಶ ಏನು ಗೊತ್ತಾ...?

Kalpana Chawla Last Message: ಭಾರತೀಯ ಮೂಲದ ಅಮೇರಿಕನ್ ಗಗನಯಾತ್ರಿ ಮತ್ತು ಅಂತರಿಕ್ಷಯಾನ ಇಂಜನಿಯರ್ ಆಗಿರುವ Kalpana Chawla ಅವರ ಬಗ್ಗೆ ಎಲ್ಲರಿಗು ಮಾಹಿತಿ ತಿಳಿದೇ ಇದೆ. ಬಾಹ್ಯಾಕಾಶಕ್ಕೆ ಯಾನ ಮಾಡಿದ ಭಾರತೀಯ ಮೊದಲ ಮಹಿಳೆಯಾಗಿದ್ದಾರೆ. ಇನ್ನು ಬಾಹ್ಯಾಕಾಶ ನೌಕೆಯ ದುರಂತವೊಂದರಲ್ಲಿ Kalpana Chawla ಅವರು ದುರಂತ ಅಂತ್ಯ ಕಂಡಿದ್ದಾರೆ. ಕಲ್ಪನಾ ಚಾವ್ಲಾ ಅವರು ಸಾಯುವುದಕ್ಕೂ ಮುನ್ನ ತನ್ನ ದೇಶಕ್ಕೆ ಸಂದೇಶ ಕಳುಹಿಸಿದ್ದು ಅವರು ಕಳುಹಿಸಿದ ಸಂದೇಶ ಕಂಡು ಇಡೀ ದೇಶವೇ ಕಣ್ಣೀರು ಹಾಕಿತ್ತು ಎಂದು ಹೇಳಬಹುದು.

kalpana chawla last message before death
Image Credit: Original Source

ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಯಾನ ಮಾಡಿದ ಕಲ್ಪನಾ ಚಾವ್ಲಾ ಅವರ ಬಗ್ಗೆ ನಿಮಗೆಷ್ಟು ಗೊತ್ತು…?
ಕಲ್ಪನಾ ಚಾವ್ಲಾ ಮೊದಲ ಬಾರಿಗೆ 1997 ರಲ್ಲಿ ಬಾಹ್ಯಾಕಾಶ ನೌಕೆ ಕೊಲಂಬಿಯಾದಲ್ಲಿ ಮಿಷನ್ ಸ್ಪೆಷಲಿಸ್ಟ್ ಮತ್ತು ಪ್ರಾಥಮಿಕ ರೊಬೊಟಿಕ್ ಆರ್ಮ್ ಆಪರೇಟರ್ ಆಗಿ ಗಗನಯಾನ ಮಾಡಿದ್ದಾರೆ. ಆಕೆಯ ಎರಡನೇ ಬಾಹ್ಯಾಕಾಶ ಹಾರಾಟವು 2003 ರಲ್ಲಿ ಆಗಿತ್ತು. ಅದು ಕೊಲಂಬಿಯಾದ STS-107 ಅಂತಿಮ ಹಾರಾಟ.

ಆದರೆ ಫೆಬ್ರವರಿ 1 ರಂದು, ಬಾಹ್ಯಾಕಾಶ ನೌಕೆಯು ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗ, ದುರಂತ ಸಂಭವಿಸಿತು. ಆ ದುರಂತದಲ್ಲಿ ಮರಣ ಹೊಂದಿದ ಏಳು ಸಿಬ್ಬಂದಿಗಳಲ್ಲಿ ಕಲ್ಪನಾ ಚಾವ್ಲಾ ಕೂಡ ಒಬ್ಬರು. ಕಲ್ಪನಾ ಚಬ್ಲಾ ಅವರಿಗೆ ಮರಣೋತ್ತರವಾಗಿ ಕಾಂಗ್ರೆಷನಲ್ ಸ್ಪೇಸ್ ಮೆಡಲ್ ಆಫ್ ಆನರ್ ನೀಡಲಾಯಿತು. ಹಲವಾರು ಬೀದಿಗಳು, ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳಿಗೆ ಈಗ ಅವರ ಗೌರವಾರ್ಥವಾಗಿ ಹೆಸರಿಸಲಾಗಿದೆ.

kalpana chawla life story
Image Credit: Original Source

ಸಾವಿಗೂ ಮುನ್ನ ಕಲ್ಪನಾ ಚಾವ್ಲಾ ಕೊನೆಯದಾಗಿ ಕಳುಹಿಸಿದ ಸಂದೇಶ ಏನು…?
“ನಮ್ಮ ಮಿಷನ್ ಯಶಸ್ವಿಯಾಗಿದೆ ಮತ್ತು ನಾವೆಲ್ಲರೂ ಇಲ್ಲಿ ಚೆನ್ನಾಗಿದ್ದೇವೆ” ಎಂದು ಕಲ್ಪನಾ ಚಾವ್ಲಾ ಅವರು ರಾಷ್ಟ್ರಕ್ಕೆ ನೀಡಿದ ಕೊನೆಯ ಸಂದೇಶವಾಗಿತ್ತು. ಇಂಡೋ-ಅಮೆರಿಕನ್ ಗಗನಯಾತ್ರಿ, ಭಾರತದ ಹೆಮ್ಮೆಯ ಪುತ್ರಿ ಮತ್ತು ಭಾರತದಲ್ಲಿನ ಅವರ ಇಡೀ ಕುಟುಂಬವು ಕೇಳಿದ ಕೊನೆಯ ಸಂದೇಶ ಇದು. ಈ ಸಂದೇಶವು ಯಾರ ಮನಸ್ಸನ್ನು ಕರಗಿಸುತ್ತದೆ.

ಕೊಲಂಬಿಯಾದಲ್ಲಿರುವ ಗಗನಯಾತ್ರಿಗಳ ಕುಟುಂಬಗಳನ್ನು ಸಂಪರ್ಕಿಸಲು ನಾಸಾ ವ್ಯವಸ್ಥೆ ಮಾಡಿದಾಗ ಕಲ್ಪನಾ ಅವರ ಸಹೋದರಿ ದೀಪಾ ಅವರೊಂದಿಗೆ ಮಾತನಾಡಿದರು. ಆ ಸಂದರ್ಭದಲ್ಲಿ ಅವರು ಈ ಸಂದೇಶವನ್ನು ಕಳುಹಿಸಿದ್ದಾರೆ. ಕಲ್ಪನಾ ಅವರ ಸಾವು ಅವರ ಕುಟುಂಬದಲ್ಲಿ ಎರಡನೇ ದುರಂತವಾಗಿದೆ. 1990 ರಲ್ಲಿ ಕಲ್ಪನಾ ಅವರ ಹಿರಿಯ ಸಹೋದರಿ ಸುನಿತಾ ಅವರು ನೌಕಾ ಪೈಲಟ್ ಆಗಿದ್ದ ತಮ್ಮ ಪತಿ ಸುನಿಲ್ ಚೌಧರಿ ಅವರನ್ನು ಹೆಲಿಕಾಪ್ಟರ್ ಅಪಘಾತದಲ್ಲಿ ಕಳೆದುಕೊಂಡರು. ಇನ್ನು ಕಲ್ಪನಾ ಚಾವ್ಲಾ ಅವರ ಮರಣದಿಂದ ಭಾರತಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದರೆ ತಪ್ಪಾಗಲಾರದು.

Join Nadunudi News WhatsApp Group

Join Nadunudi News WhatsApp Group