Actress Prema: ಕ್ಯಾನ್ಸರ್ ಮತ್ತು ಎರಡನೇ ಮದುವೆಯ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಪ್ರೇಮ.

ಎರಡನೆಯ ಮದುವೆ ಮತ್ತು ಕ್ಯಾನ್ಸರ್ ಬಗ್ಗೆ ಹರಿದಾಡಿದ್ದ ಸುಳ್ಳು ಸುದ್ದಿಯ ಬಗ್ಗೆ ನಟಿ ಪ್ರೇಮ ಸ್ಪಷ್ಟನೆ ನೀಡಿದ್ದಾರೆ.

Actress Prema About Second Marriage: ಕನ್ನಡ ಚಿತ್ರರಂಗದ ಖ್ಯಾತ ನಟಿ ಪ್ರೇಮಾ (Prema) ಮತ್ತೆ ಚಿತ್ರರಂಗಕ್ಕೆ ತಿರುಗಿ ಬಂದಿದ್ದಾರೆ. ಹಲವು ವರ್ಷಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದ ನಟಿ ಪ್ರೇಮ ಅವರನ್ನು ತೆರೆ ಮೇಲೆ ನೋಡದೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ನಟಿ ಪ್ರೇಮಾ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ನಟನೆಯ ಮೂಲಕ ಹೊಸ ಛಾಪು ಮೂಡಿಸಿದ್ದಾರೆ. ಇನ್ನು ನಟಿ ಪ್ರೇಮಾ ಇತ್ತೀಚಿನ ಸಂದರ್ಶನ ಒಂದರಲ್ಲಿ ಹಲವು ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾರೆ.

Actress Prema About Second Marriage
Image Source: Hindusthan times

 

ಎರಡನೇ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಪ್ರೇಮಾ
ನಟಿ ಪ್ರೇಮಾ ಅವರು ತಮ್ಮ ಎರಡನೇ ಮದುವೆಯ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಎರಡು ಮದುವೆ ಆಗುವುದು ಅದು ನನ್ನ ವಯಕ್ತಿಕ ನಿರ್ಧಾರ. ಮದುವೆ ಆಗಬೇಕು ಎನ್ನುವುದು ನಾನು ನಿರ್ಧರಿಸಬೇಕು.

ಹೌದು ಜೀವನದಲ್ಲಿ ಮದುವೆ ಇರಬೇಕು. ಒಂದು ವೇಳೆ ಒಳ್ಳೆಯ ಹುಡುಗ ಸಿಕ್ಕರೆ ಕಂಡಿತಾ ಮದುವೆ ಆಗುತ್ತೇನೆ. ಅದರಲ್ಲಿ ತಪ್ಪೇನಿದೆ. 70 ವರ್ಷ ವಯಸ್ಸಿನಲ್ಲೂ ಮದುವೆ ಆಗುತ್ತಾರೆ, ತಪ್ಪೇನಿದೆ. ಇದು ನನ್ನ ಜೀವನ. ನನ್ನ ಜೀವನ ಹೇಗಿರಬೇಕು ಎನ್ನುವುದು ನನಗೆ ಗೊತ್ತು ಎಂದಿದ್ದಾರೆ.

Join Nadunudi News WhatsApp Group

Actress Prema About Second Marriage
Image Source: News18

ಕ್ಯಾನ್ಸರ್ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಪ್ರೇಮಾ
ಕೆಲವು ವರ್ಷಗಳ ಹಿಂದೆ ನಟಿ ಪ್ರೇಮ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಇದಕ್ಕೆ ನಟಿ ಪ್ರೇಮಾ ಅವರು ಸ್ಪಷ್ಟನೆ ನೀಡಿದ್ದಾರೆ. ನಿಜ ಹೇಳಬೇಕು ಅನಾದರೆ ನಾನು ಡಿಪ್ರೆಷನ್ ಗೆ ಹೋಗಿದ್ದೆ. ನಾನು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ನಲ್ಲಿ ಕೆಲ ದಿನಗಳ ಕಾಲ ಇದ್ದಿದ್ದೇ. ಆ ಸಮಯದಲ್ಲಿ ಇಲ್ಲಿ ಅಂತಹ ವದಂತಿಗಳನ್ನು ಸೃಷ್ಟಿಸಿ ಹಬ್ಬಿಸಿದರು.

ನಾನು ಕ್ಯಾನ್ಸರ್ ಚಿಕೆತ್ಸೆಗೆ ವಿದೇಶಕ್ಕೆ ಹೋಗಿದ್ದೇನೆ ಅಂತ ಸಹ ಹೇಳಿದ್ದರು. ದೇವರ ದಯೆಯಿಂದ ನನಗೆ ಯಾವುದೇ ಸಮಸ್ಯೆ ಇಲ್ಲ. ಕ್ಯಾನ್ಸರ್ ಎನ್ನುವ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ನಟಿ ಪ್ರೇಮಾ ಹೇಳಿದ್ದಾರೆ.

Actress Prema About Second Marriage
Image Source: Filmibeat

Join Nadunudi News WhatsApp Group