Kantara Copyright: ಕಾಂತಾರ ಚಿತ್ರಕ್ಕೆ ಮತ್ತೆ ಆಘಾತ ನೀಡಿದ ಕೋರ್ಟ್, ಚಿತ್ರದ ಮತ್ತೆ ಬಂತು ತಡೆಯಾಜ್ಞೆ.

ವರಾಹ ರೂಪಂ ಹಾಡನ್ನ ಬಳಸದಂತೆ ಮತ್ತೆ ಕಾಂತಾರ ಚಿತ್ರಕ್ಕೆ ತಡೆಯಾಜ್ಞೆ ನೀಡಿದೆ ಕೇರಳ ಕೋರ್ಟ್.

Kantara Copyright Case: ರಿಷಬ್ ಶೆಟ್ಟಿ (Rishabh Shetty) ನಟಿಸಿ ನಿರ್ದೇಶಿಸಿರುವ ಕನ್ನಡದ ಕಾಂತಾರ ಚಿತ್ರ (Kantara Movie) ಬಿಡುಗಡೆಗೊಂಡು ನಾಲ್ಕೈದು ತಿಂಗಳು ಕಳೆದರು ಕೂಡ ಕಾಂತಾರ ಚಿತ್ರದ ಖ್ಯಾತಿ ಇನ್ನು ಕಡಿಮೆಯಾಗಿಲ್ಲ. ಇನ್ನು ಕೂಡ ಕಾಂತಾರ ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳು ಬರುತ್ತಲೇ ಇದೆ.

ವಿಶ್ವದಾದ್ಯಂತ ಕಾಂತಾರ ಚಿತ್ರ ಭರ್ಜರಿ ದಾಖಲೆ ಬರೆದಿದೆ. ಇನ್ನು ಕಾಂತಾರ ಚಿತ್ರ ಕನ್ನಡದ ಜೊತೆಗೆ ಎಲ್ಲಾ ಭಾಷೆಯಲ್ಲೂ ಕೂಡ ರಿಲೀಸ್ ಆಗಿದೆ. ಇದೀಗ ಕಾಂತಾರ ಚಿತ್ರದ ಕುರಿತು ಮತ್ತೊಂದು ಮಾಹಿತಿ ಲಭಿಸಿದೆ. ಈ ಬಗ್ಗೆ ಮಾಹಿತಿ ತಿಳಿಯೋಣ.

Kerala court has again restrained Kantara film from using Varaha Rupam song.
Image Credit: koimoi

ವಿವಾದಕ್ಕೆ ಒಳಗಾಯಿತ್ತು ಕಾಂತಾರ ಚಿತ್ರದ ವರಾಹ ರೂಪಂ ಹಾಡು
ಇನ್ನು ಕಾಂತಾರ ಚಿತ್ರ ಕಳೆದ ಸೆಪ್ಟೆಂಬರ್ 30 ರಂದು ತೆರೆಕಂಡಿತ್ತು. ಆದರೆ ಕಾಂತಾರ ಚಿತ್ರ ಬಿಡುಗಡೆಗೂ ಮುನ್ನ ಒಂದಿಷ್ಟು ವಿವಾದಗಳಿಗೆ ಸಿಲುಕಿತ್ತು. ಕಾಂತಾರ ಚಿತ್ರದ ವರಾಹ ರೂಪಂ ಹಾಡಿನ ವಿರುದ್ಧ ಕಾನೂನು ಹೋರಾಟ ನಡೆದಿತ್ತು. ಈ ಎಲ್ಲ ವಿವಾದಗಳನ್ನು ಬದಿಗೊತ್ತಿ ಕಾಂತಾರ ಚಿತ್ರ ಬಿಡುಗಡೆಗೊಂಡು ಅದ್ಭುತ ಪ್ರದರ್ಶನ ಕಂಡಿತ್ತು. ಇನ್ನು ಇದೀಗ ಓಟಿಟಿಯಲ್ಲಿ ಬಿಡುಗಡೆಯಾಗುವ ಕಾಂತಾರ ಚಿತ್ರಕ್ಕೆ ಕೋರ್ಟ್ ನಿಂದ ತಡೆಯಾಜ್ಞೆ ಬಂದಿದೆ.

A Kerala court has issued an injunction against the use of the Varaha Rupam song in the film Kantara
Image Credit: thenewsminute

ವರಾಹ ರೂಪಂ ಹಾಡು ಬಳಸದಂತೆ ತಡೆಯಾಜ್ಞೆ
ಕಾಂತಾರ ಚಿತ್ರದ ವರಾಹ ರೂಪಂ ಹಾಡನು ನವರಸಂ ಹಾಡಿನಿಂದ ನಕಲು ಮಾಡುವ ಮೂಲಕ ಹಕ್ಕುಸ್ವಾಮ್ಯ ಕಾನೂನನ್ನು ಉಲ್ಲಂಘಿಸಿದ್ದಾರೆ ಎಂದು ಜನಪ್ರಿಯ ಮ್ಯೂಸಿಕ್ ಬ್ಯಾಂಡ್ ಥೈಕುಡಮ್ ಬ್ರಿಡ್ಜ್ ಕಾಂತಾರ ಚಿತ್ರದ ವಿರುದ್ಧ ದೂರು ನೀಡಲಾಗಿತ್ತು. ಕಾಂತಾರ ಚಿತ್ರದಲ್ಲಿ ವರಾಹ ರೂಪಂ ಹಾಡು ಸಾಕಷ್ಟು ವಿವಾದಗಳನ್ನು ಸ್ರಷ್ಟಿಸಿತ್ತು.

ಇದೀಗ ಥಿಯೇಟರ್ ಹಾಗೂ ಓಟಿಟಿಯಲ್ಲಿ ಕಾಂತಾರ ಚಿತ್ರದ ವರಾಹ ರೂಪಂ ಹಾಡು ಬಳಸದಂತೆ ಕೇರಳದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆಯನ್ನು ಹೊರಡಿಸಿದೆ. ಚಿತ್ರಮಂದಿರ, ಓಟಿಟಿ ಹಾಗೂ ಡಿಜಿಟಲ್ ಸ್ಟ್ರೀಮಿಂಗ್ ಪ್ಲಾಟ್ ಫೋರ್ಮ್ ಗಳಲ್ಲಿ ಹಾಡನ್ನು ಬಳಸದಂತೆ ತಡೆಯಾಜ್ಞೆಯನ್ನು ಕೋರ್ಟ್ ಹೊರಡಿಸಿದೆ.

Join Nadunudi News WhatsApp Group

Join Nadunudi News WhatsApp Group