Congress Free Guarantee: ರಾಜ್ಯದ 5 ಗ್ಯಾರೆಂಟಿ ಯೋಜನೆಗಳು ಬಂದ್, ಸಿದ್ದರಾಮಯ್ಯ ಸರ್ಕಾರದಿಂದ ಸ್ಪಷ್ಟನೆ.

ರಾಜ್ಯದಲ್ಲಿ ಬಂದ್ ಆಗುತ್ತಾ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು

Congress Free Guarantee Close: ಸದ್ಯ ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಸಮಯದಲ್ಲಿ ಘೋಷಣೆಯಾದ ಐದು ಉಚಿತ ಗ್ಯಾರಂಟಿ ಯೋಜನೆಗಳ ಬಗ್ಗೆ ಎಲ್ಲರಿಗು ತಿಳಿದೇ ಇದೆ. ರಾಜ್ಯದ ಅರ್ಹ ಜನರು ಐದು ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ. ಸದ್ಯ ಮೊನ್ನೆಯಷ್ಟೇ ಲೋಕಸಭಾ ಚುನಾವಣಾ 2024 ರ ಫಲಿತಾಂಶ ಪ್ರಕಟವಾಗಿದೆ.

ಈ ಲೋಕಸಭಾ ಚುನಾವಣೆಯಲ್ಲಿ BJP ಪಕ್ಷವು Congress ಗಿಂತ ಹೆಚ್ಚು ಸ್ಥಾನವನ್ನು ಗಳಿಸುವ ಮೂಲಕ ಮುನ್ನಡೆ ಪಡೆದಿದೆ. ದೇಶದಲ್ಲಿ ಮತ್ತೊಮ್ಮೆ BJP ಸರ್ಕಾರ ರಚನೆಯಾಗಲಿದೆ. ಐದು ಉಚಿತ ಗ್ಯಾರಂಟಿ ಘೋಷಣೆಯಾದರು ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗಲಿದೆ. ಗ್ಯಾರಂಟಿ ಘೋಷಣೆಗಳು ಯಾವುದೇ ಕೆಲಸಕ್ಕೆ ಬಂದಿಲ್ಲ ಎಂದು ಕಾಂಗ್ರೆಸ್ ಕೆಲ ಸಚಿವರು ಹೇಳಿಕೆ ನೀಡುತ್ತಿದ್ದಾರೆ.

ಇದರಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಉಚಿತ 5 ಗ್ಯಾರಂಟಿಗಳು ಬಂದ್ ಆಗುತ್ತಾ…? ಎನ್ನುವ ಚರ್ಚೆ ನಡೆಯುತ್ತಿದೆ. ಸದ್ಯ ಎಲ್ಲೆಡೆ ಉಚಿತ ಗ್ಯಾರಂಟಿ ಕ್ಲೋಸ್ ಆಗುವ ಬಗ್ಗೆ ಸುದ್ದಿ ವೈರಲ್ ಆಗುತ್ತಿದೆ. ಈ ವೈರಲ್ ಸುದ್ದಿಗೆ ಕಾಂಗ್ರೆಸ್ ಸರ್ಕಾರ ಯಾವ ರೀತಿ ಸ್ಪಷ್ಟನೆ ನೀಡುತ್ತದೆ ಎನ್ನುವ ಬಗ್ಗೆ ನೋಡೋಣ.

congress guarantee schemes update
Image Credit: Original Source

ರಾಜ್ಯದ 5 ಗ್ಯಾರೆಂಟಿ ಯೋಜನೆಗಳು ಬಂದ್
ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಾಧ್ಯವಾಗದ ಕೆಲ ಸಚಿವರು, ಗ್ಯಾರಂಟಿ ಯೋಜನೆಗಳು ಇದಕ್ಕೆ ಫಲ ನೀಡಲಿಲ್ಲ ಎಂಬ ಅಚ್ಚರಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮುಚ್ಚಲಾಗುವುದು ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಿದ್ದರು. ಈಗ ಕಾಂಗ್ರೆಸ್ ನಾಯಕರ ಈ ಹೇಳಿಕೆಗಳು ಗ್ಯಾರಂಟಿ ಯೋಜನೆಗಳು ಮುಚ್ಚಿಹೋಗುವ ಅನುಮಾನವನ್ನು ಹುಟ್ಟುಹಾಕುತ್ತಿವೆ.

ಸಿದ್ದರಾಮಯ್ಯ ಸರ್ಕಾರದಿಂದ ಸ್ಪಷ್ಟನೆ ಸಿಗುತ್ತಾ…?
ಲೋಕಸಭೆ ಚುನಾವಣೆಗೆ ನಾವು ನೀಡಿದ ಐದು ಗ್ಯಾರಂಟಿ ಯೋಜನೆಗಳು ಕೈಹಿಡಿಯಲಿಲ್ಲ. ಕಡಿಮೆ ಕ್ಷೇತ್ರಗಳಲ್ಲಿ ಗೆಲ್ಲಿಸಿರುವ ಜನರಿಗೆ ಗ್ಯಾರಂಟಿ ಯೋಜನೆಗಳು ಅಗತ್ಯವಿಲ್ಲ ಎಂದು ಜನರು ನಿರ್ಧರಿಸಿದ್ದಾರೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದ್ದಾರೆ. ಹಾಗೆಯೆ ಸಚಿವ ಚಲುವರಾಯಸ್ವಾಮಿ ಮಾತನಾಡಿ, ‘ಗ್ಯಾರಂಟಿ ಯೋಜನೆಗಳನ್ನು ನೀಡಿದರೂ ಈ ಚುನಾವಣೆಯಲ್ಲಿ ಜನ ನಮ್ಮನ್ನು ಬೆಂಬಲಿಸಲಿಲ್ಲ.

Join Nadunudi News WhatsApp Group

karnataka congress schemes guarantee cancellation
Image Credit: Original Source

ಒಟ್ಟಿನಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು ವರ್ಕೌಟ್ ಆಗಿಲ್ಲ ಎನ್ನುವ ಸಚಿವರ ಈ ಮಾತುಗಳು ಮತದಾರರಲ್ಲಿ ಉಚಿತ ಗ್ಯಾರಂಟಿ ಯೋಜನೆಗಳು ಮುಚ್ಚಿ ಹೋಗಬಹುದು ಎಂಬ ಆತಂಕ ಮೂಡಿಸಿದೆ. ಅಷ್ಟಕ್ಕೂ ಕಾಂಗ್ರೆಸ್ ಸಚಿವರು ಹೇಳುತ್ತಿರುವ ರೀತಿ ಉಚಿತ ಗ್ಯಾರಂಟಿಗಳು ಬಂದ್ ಆಗುತ್ತಾ ಎನ್ನುವ ಬಗ್ಗೆ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಬೇಕಿದೆ. ಉಚಿತ ಗ್ಯಾರಂಟಿಗಳು ರಾಜ್ಯದಲ್ಲಿ ಮುಂದುವರಿಯುತ್ತಾ ಅಥವಾ ಬಂದ್ ಆಗುತ್ತಾ ಎನ್ನುವುದಕ್ಕೆ ಸ್ಪಷ್ಟ ಮಾಹಿತಿ ಸಿಗುವವರೆಗೆ ಕಾದು ನೋಡಬೇಕಿದೆ.

Join Nadunudi News WhatsApp Group