Code of Conduct: ಇಂತಹ ಫೋಟೋ ಅಂಟಿಸಿದರೆ ವಾಹನ ಸೀಜ್, ವಾಹನ ಇದ್ದವರಿಗೆ ಕೇಂದ್ರದಿಂದ ಹೊಸ ನಿಯಮ,

ವಾಹನದಲ್ಲಿ ಚುನಾವಣೆಗೆ ಸಂಬಂಧಿಸಿದ ಪೋಸ್ಟ್ ಅಂಟಿಸಿದರೆ ಅಂತಹ ವಾಹನ ಸೀಜ್ ಮಾಡಲಾಗುತ್ತದೆ.

Assembly Election Rules In Karnataka: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ (Assembly Election) ಹತ್ತಿರವಾಗುತ್ತಿದೆ. ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಕಾರ್ಯಗಳು ನಡೆಯುತ್ತಿದೆ. ಇನ್ನು ಕೆಲ ಸ್ಟಾರ್ ನಟರು ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೆಲವು ಕಟ್ಟು ನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ. ಚುನಾವಣಾ ಪ್ರಚಾರ ಕಾರ್ಯಗಳು ಹೆಚ್ಚುತ್ತಿರುವ ಕಾರಣಾ ವಿಧಾನಸಭಾ ನೀತಿ ಸಂಹಿತೆ ಜಾರಿಯಾಗಿದೆ.

Assembly Election Rules In Karnataka
Image Source: Deccan Herlad

ವಿಧಾನಸಭಾ ನೀತಿ ಸಂಹಿತೆ ಜಾರಿ
ಚುನಾವಣೆಯ ದಿನಾಂಕ ಮೇ 10 ರಂದು ನಿಗಧಿಯಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಪ್ರಚಾರ ಕಾರ್ಯಗಳು ಜೋರಾಗಿಯೇ ನಡೆಯುತ್ತದೆ. ತಮ್ಮ ತಮ್ಮ ಪಕ್ಷಗಳ ಪ್ರಚಾರ ಕಾರ್ಯವನ್ನು ನಡೆಸಲು ರಾಜಕೀಯ ಮುಖಂಡರು ಸಿದ್ದರಾಗಿದ್ದಾರೆ.

ಈ ವೇಳೆ ವಿಧಾನಸಭಾ ನೀತಿ ಸಂಹಿತೆ ಜಾರಿಯಾಗಿದೆ. ವಾಹನ ಮಾಲೀಕರಿಗೆ ವಿಧಾನಸಭಾ ನೀತಿ ಸಂಹಿತೆ ಹೊಸ ನಿಯಮವನ್ನು ಜಾರಿಗೊಳಿಸಿದೆ. ಈ ನೀತಿ ಸಂಹಿತೆಯ ನಿಯಮವನ್ನು ಉಲ್ಲಂಘನೆ ಮಾಡಿದರೆ ವಾಹನ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

Assembly Election Rules In Karnataka
Image Source: India Today

ವಾಹನ ಮಾಲೀಕರಿಗೆ ಕೇಂದ್ರ ಸರ್ಕಾರದ ಹೊಸ ನಿಯಮ
ರಾಜಕೀಯ ಪಕ್ಷದ ಪ್ರಚಾರ ಕಾರ್ಯ ಮಾಡುವಾಗ ಆಟೋರಿಕ್ಷಾ ಟ್ಯಾಕ್ಸಿ, ಬಸ್ ಹಾಗೂ ಇನ್ನಿತರ ಯಾವುದೇ ವಾಹನಗಳ ಮೇಲೆ ರಾಜಕೀಯ ವ್ಯಕ್ತಿಗಳ ಭಾವಚಿತ್ರ, ಬಿತ್ತಿ ಪತ್ರಗಳು ಅಥವಾ ಯಾವುದೇ ರೀತಿಯ ಪಕ್ಷವನ್ನು ಬಿಂಬಿಸುವ ಬ್ಯಾನರ್ ಗಳು ಕಂಡು ಬಂದಲ್ಲಿ ವಾಹನಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ.

Join Nadunudi News WhatsApp Group

Assembly Election Rules In Karnataka
Image Source: India Today

ಪೂರ್ವಾನುಮತಿ ಇಲ್ಲದೆ ಯಾವುದೇ ರೀತಿಯ ಚಿತ್ರಗಳನ್ನು ಕೂಡ ವಾಹನಗಳ ಮೇಲೆ ಹಾಕುವಂತಿಲ್ಲ. ಯಾವುದೇ ರೀತಿಯ ಚಿತ್ರಗಳನ್ನು ಹಾಕಿದ್ದಲ್ಲಿ, 24 ಗಂಟೆಗಳ ಒಳಗೆ ಅದನ್ನು ತೆಗೆದುಹಾಕಬೇಕಾಗುತ್ತದೆ. ಈ ನಿಯಮವನ್ನು ಉಲ್ಲಂಘಿಸಿದರೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯ ಪ್ರಕರಣವೆಂದು ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.

Assembly Election Rules In Karnataka
Image Source: Hindusthan times

Join Nadunudi News WhatsApp Group