Voter Id Update: ವೋಟರ್ ಕಾರ್ಡ್ ಇಲ್ಲದಿದ್ದರೂ ಈಗ ಮತ ಹಾಕಬಹುದು, ಚುನಾವಣಾ ಆಯೋಗದ ಹೊಸ ನಿಯಮ.

ವೋಟರ್ ಕಾರ್ಡ್ ಇಲ್ಲದೆ ಇದ್ದರೆ ಪರ್ಯಾಯ ದಾಖಲೆಗಳ ಮೂಲಕ ಮತವನ್ನ ಹಾಕಬಹುದು.

Voter ID For Election: ರಾಜ್ಯದಲ್ಲಿ ಇನ್ನೇನು ಚುನಾವಣೆ ಹತ್ತಿರವಾಗುತ್ತಿದೆ. ರಾಜಕೀಯ ಮುಖಂಡರು ತಮ್ಮ ತಮ್ಮ ಪಕ್ಷದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಬಾರಿ ರಾಜಕೀಯ ಪ್ರಚಾರದಲ್ಲಿ ಸ್ಟಾರ್ ನಟರ ಪ್ರಚಾರ ಕೂಡ ಇದೆ. ಸ್ಯಾಂಡಲ್ ವುಡ್ ಸ್ಟಾರ್ ನಟ ಸುದೀಪ್ ಇದೀಗ ಬಿಜಿಪಿ ಸೇರ್ಪಡೆಗೊಂಡಿದ್ದಾರೆ.

ಇನ್ನು ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಯಲ್ಲಿದೆ. ಇದೀಗ ಲಭಿಸಿರುವ ಮಾಹಿತಿಯ ಪ್ರಕಾರ ನೀವು ವೋಟರ್ ಐಡಿ ಇಲ್ಲದೆಯೂ ಕೂಡ ನಿಮ್ಮ ಮತವನ್ನು ಚಲಾಯಿಸಬಹುದು. ಹೇಗೆ ಎನ್ನುದರ ಬಗ್ಗೆ ಮಾಹಿತಿ ತಿಳಿಯೋಣ.

If you don't have a voter card, you can vote using some necessary documents
Image Credit: newindianexpress

ಗುರುತಿನ ಚೀಟಿ ಇಲ್ಲದಿದ್ದರೂ ಮತ ಚಲಾಯಿಸಬಹುದು
ಇನ್ನು 18 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಯು ಕೂಡ ಮತ ಚಲಾಯಿಸುವ ಹಕ್ಕನ್ನು ಹೊಂದಿರುತ್ತಾರೆ. ಇನ್ನು ಮೇ 10 ರಂದು ಚುನಾವಣಾ ದಿನಾಂಕ ನಿಗದಿಯಾಗಿದೆ. ಹಾಗೆಯೆ ಮೇ 13 ರಂದು ಫಲಿತಾಂಶ ಕೂಡ ಪ್ರಕಟವಾಗಲಿದೆ. ಚುನಾವಣೆಯ ಕಾರಣ ಚುನಾವಣಾ ನೀತಿ ಸಂಹಿತೆ ಕೂಡ ಜಾರಿಯಾಗಿದೆ.

ಇನ್ನು ನೀವು ಮತ ಚಲಾಯಿಸಲು ನಿಮಗೆ ವೋಟರ್ ಐಡಿ (Voter ID) ಅವಶ್ಯಕವಾಗಿರುತ್ತದೆ. ಆದರೆ ಈ ಬಾರಿ ನೀವು ವೋಟರ್ ಐಡಿಯಾ ಬದಲಾಗಿ ಕೆಲವು ದಾಖಲೆಗಳನ್ನು ನೀಡುವ ಮೂಲಕ ನಿಮ್ಮ ಮತವನ್ನು ಹಾಕಬಹುದಾಗಿದೆ. ವೋಟರ್ ಐಡಿ ಬದಲಾಗಿ ಯಾವ ದಾಖಲೆಯ ಮೂಲಕ ಮತ ಚಲಾಯಿಸಬಹುದು ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.

If you do not have a voter card, you can cast your vote using some identity cards
Image Credit: india

ವೋಟರ್ ಐಡಿ ಬದಲಾಗಿ ಬಳಸಬಹುದಾದ ಪರ್ಯಾಯ ದಾಖಲೆಗಳು
ಆಧಾರ್ ಕಾರ್ಡ್, MGNREGA ಜಾಬ್ ಕಾರ್ಡ್, ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಪಾಸ್ ಬುಕ್, ಕಾರ್ಮಿಕ ಸಚಿವಾಲಯ ನೀಡಿರುವ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, NPR ಅಡಿಯಲ್ಲಿ RGI ನೀಡಿರುವ ಸ್ಮಾರ್ಟ್ ಕಾರ್ಡ್, ಪಾಸ್ ಪೋರ್ಟ್, ಪಿಂಚಣಿ ದಾಖಲೆಗಳು, ಸಾರ್ವಜನಿಕ ಸೀಮಿತ ಕಂಪನಿಗಳು ನೀಡಿರುವ ಸೇವಾ ಗುರುತಿನ ಚೀಟಿಗಳನ್ನೂ ನೀಡುವ ಮೂಲಕ ನೀವು ನಿಮ್ಮ ಮತವನ್ನು ಚಲಾಯಿಸಬಹುದು.

Join Nadunudi News WhatsApp Group

Join Nadunudi News WhatsApp Group