Sarala Vivaha: ಇನ್ಮುಂದೆ ಮದುವೆಯಾಗಲು ಸರ್ಕಾರದಿಂದಲೇ ಸಿಗಲಿದೆ 50,000 ರೂ ಉಚಿತ, ಷರತ್ತುಗಳು ಅನ್ವಯ.

ಇನ್ಮುಂದೆ ಮದುವೆಯಾಗಲು ಸರ್ಕಾರದಿಂದಲೇ ಸಿಗಲಿದೆ 50000 ರೂ. ಉಚಿತ

Karnataka Govt Sarala Vivaha Yojana 2024: ಸದ್ಯ ರಾಜ್ಯದಲ್ಲಿ ಸಿದ್ದರಾಮಯ್ಯ (Siddaramaiah) ಸರ್ಕಾರ ಜನರಿಗಾಗಿ ವಿವಿಧ ಕಲ್ಯಾಣ ಯೋಜನೆಗಳನ್ನು ಪರಿಚಯಿಸುತ್ತಿದೆ. ಆರೋಗ್ಯ ಯೋಜನೆ, ಸ್ವಂತ ಉದ್ಯೋಗಕ್ಕಾಗಿ, ರೈತರಿಗಾಗಿ ಹೀಗೆ ಸಾಕಷ್ಟು ವರ್ಗದವರಿಗೆ ಸಹಾಯವಾಗಲು State Govt ನೂತನ ಯೋಜನೆಗಳನ್ನು ಜಾರಿಗೊಳಿಸುತ್ತ ಇರುತ್ತದೆ. ಇದೀಗ ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಮದುವೆಯ ಕನಿಸಿಗೆ ಸಹಾಯವಾಗಲು ವಿಶೇಷ ಯೋಜನೆಯನ್ನು ಪರಿಚಯಿಸಿದೆ.

ರಾಜ್ಯ ಸರ್ಕಾರ ಈ ವಿಶೇಷ ಯೋಜನೆಯಡಿ ಮದುವೆಯಾಗುವ ಗಂಡು ಹೆಣ್ಣು ಸಹಾಯಧನವನ್ನು ಪಡೆದುಕೊಳ್ಳಬಹುದು. ಇದೀಗ ನಾವು ಈ ಲೇಖನದಲ್ಲಿ ರಾಜ್ಯ ಸರ್ಕಾರ ಈ ವಿಶೇಷ ಯೋಜನೆ ಯಾವುದು…? ಯೋಜನೆಯಡಿ ಎಷ್ಟು ಸಹಾಯಧನ ಸಿಗಲಿದೆ…? ಯೋಜನೆಯ ಪ್ರಯೋಜನ ಪಡೆಯಲು ಏನೆಲ್ಲಾ ಅರ್ಹತೆಗಳಿರಬೇಕು ಅನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Karnataka Govt Sarala Vivaha Yojana
Image Credit: easemywatch

ಇನ್ಮುಂದೆ ಮದುವೆಯಾಗಲು ಸರ್ಕಾರದಿಂದಲೇ ಸಿಗಲಿದೆ 50,000 ರೂ. ಉಚಿತ
ಬಡ ಹಾಗೂ ಹಿಂದುಳಿದ ವರ್ಗದ ವಿವಾಹದ ಕನಸಿಗಾಗಿ ಇದೀಗ ಸರಳ ವಿವಾಹ ಯೋಜನೆ ಜಾರಿಯಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಈ ಯೋಜನೆ ಅತ್ಯಂತ ಸಹಾಯಕವಾಗಿದೆ. ಈ Sarla Vivaha ಯೋಜನೆಗಾಗಿ ರಾಜ್ಯದ ಮುಖ್ಯ ಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು ಸಾಮೂಹಿಕ ವಿವಾಹಗಳ ಟ್ರಸ್ಟ್ ಗಳ ಜೊತೆ ಕೈಜೋಡಿಸಿದ್ದಾರೆ. ಸರಳ ವಿವಾಹ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ದಂಪತಿಗಳಿಗೆ 50,000 ರೂಪಾಯಿಯನ್ನ ನೇರವಾಗಿ ಅವರ ಖಾತೆಗೆ DBT ಮಾಡಲಾಗುತ್ತದೆ.

ಸಾಮೂಹಿಕ ವಿವಾಹ ಆದ ನಂತರ ಮದುವೆ ಮಾಡಿಸಿರುವವರ ಬಳಿ ಪ್ರಮಾಣ ಪತ್ರ ಫೋಟೋ ಮೊದಲಾದ ದಾಖಲೆಗಳನ್ನು ಪಡೆದುಕೊಂಡು ಅರ್ಜಿ ಸಲ್ಲಿಸಿ ಸರ್ಕಾರದಿಂದ ಸಿಗುವ 50 ಸಾವಿರ ಸಹಾಯಧನವನ್ನು ಪಡೆದುಕೊಳ್ಳಬಹುದು. ಮುಖ್ಯವಾಗಿ ನೀವು ಎಲ್ಲಿ ಸಾಮೂಹಿಕ ವಿವಾಹ ಆಗುತ್ತಿರೋ ಅಂತಹ ಸಂಘ ಸಂಸ್ಥೆಗಳ ಜಿಲ್ಲಾ ನೋಂದಣಿ ಕಚೇರಿಗಳಲ್ಲಿ ಸಾಮೂಹಿಕ ವಿವಾಹ ನಡೆಸುವುದಾಗಿ ನೋಂದಾಯಿಸಿಕೊಳ್ಳಬೇಕು.

Sarala Vivaha Yojana
Image Credit: The hans India

ಸರಳ ವಿವಾಹ ಯೋಜನೆಯ ಲಾಭ ಪಡೆಯಲು ಈ ಷರತ್ತುಗಳು ಅನ್ವಯ
•ಮದುವೆ ಆಗುವ ದಂಪತಿಗಳು ಕರ್ನಾಟಕಕ್ಕೆ ಸೇರಿದವರಾಗಿರಬೇಕು.

Join Nadunudi News WhatsApp Group

•ಪರಿಶಿಷ್ಟ ಜಾತಿ ಹಾಗೂ ಪಂಗಡದವರಾಗಿರಬೇಕು.

•ಕನಿಷ್ಠ 10 ಜೋಡಿ ಇರುವ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿರಬೇಕು.

•ಮದುವೆಯಾಗುವ ಹುಡುಗನಿಗೆ ಕನಿಷ್ಠ 21 ವರ್ಷ ಹಾಗೂ ಹುಡುಗಿಗೆ 18 ವರ್ಷ ತುಂಬಿರಬೇಕು.

•ಕುಟುಂಬದ ವಾರ್ಷಿಕ ಆದಾಯ ಎರಡು ಲಕ್ಷ ಮೀರಿರಬಾರದು.

•ಮೊದಲನೇ ಮದುವೆ ಆಗುವ ಜೋಡಿಗೆ ಮಾತ್ರ ಈ ಪ್ರಯೋಜನ ದೊರೆಯಲಿದೆ, 2 ಅಥವಾ 3 ಮದುವೆ ಆಗುವವರಿಗೆ ಸಿಗುವುದಿಲ್ಲ.

Join Nadunudi News WhatsApp Group