Karnataka High Court: ಬ್ಯಾಂಕ್ ಸಾಲ ಕೊಡುವ ಮುನ್ನ ಈ ದಾಖಲೆ ಅಡಮಾನವಾಗಿ ಇಟ್ಟುಕೊಳ್ಳುವಂತಿಲ್ಲ, ಹೈಕೋರ್ಟ್ ಹೊಸ ರೂಲ್ಸ್

ಇನ್ಮುಂದೆ ಈ ದಾಖಲೆ ಅಡಮಾನವಾಗಿ ಇಟ್ಟುಕೊಂಡು ಸಾಲ ಕೊಡುವಂತಿಲ್ಲ, ಎಲ್ಲಾ ಬ್ಯಾಂಕುಗಳಿಗೆ ಹೊಸ ರೂಲ್ಸ್

Karnataka High Court: ಕರ್ನಾಟಕ ಹೈಕೋರ್ಟ್ (High Court) ಹೊಸ ಹೊಸ ಪ್ರಕರಣದ ತನಿಖೆ ನಡೆಸಿ ಆದೇಶವನ್ನು ಹೊರಡಿಸುತ್ತದೆ. ಸದ್ಯ ಕರ್ನಾಟಕ ಹೈಕೋರ್ಟ್ ಬ್ಯಾಂಕ್ ನೀಡುವ ಸಾಲಕ್ಕೆ ಸಂಬಂಧಿಸಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. ಬ್ಯಾಂಕ್ ಸಾಲ ನೀಡುವ ಸಮಯದಲ್ಲಿ ಅಡಮಾನವಾಗಿರಿಸಿಕೊಳ್ಳುವ ದಾಖಲೆಗಳ ಬಗ್ಗೆ ಹೈಕೋರ್ಟ್ ಮುಖ್ಯವಾದ ಆದೇಶವನ್ನು ಹೊರಡಿಸಿದೆ. ಇದೀಗ ನಾವು ಕರ್ನಾಟಕ ಹೈಕೋರ್ಟ್ ನೀಡುವ ಹೊಸ ಆದೇಶದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಯೋಣ.

Karnataka High Court Verdict
Image Credit: Thehansindia

ಇನ್ನುಮುಂದೆ ಬ್ಯಾಂಕ್ ಗಳು ಪಾಸ್ ಪೋರ್ಟ್, OCI Card ಅನ್ನು ಅಡಮಾನವಾಗಿ ಇರಿಸಿಕೊಳ್ಳುವಂತಿಲ್ಲ
ಭಾರತದಲ್ಲಿ ಹುಟ್ಟಿ ಭಾರತೀಯ ಒಸಿಐ ಕಾರ್ಡ್ ಹೊಂದಿರುವ ಯುನೈಟೆಡ್ ಕಿಂಗ್‌ ಡಂ ಪ್ರಜೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ನಾಗಪ್ರಸನ್ನ ಅವರು ತನಿಖೆ ನಡೆಸಿದ್ದಾರೆ. ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಇಬ್ಬರು ಗೃಹ ಸಾಲ ಪಡೆದಿದ್ದರು. ಸಾಲಕ್ಕೆ ಭದ್ರತೆಯಾಗಿ ಪಾಸ್ ಪೋರ್ಟ್ ಹಾಗೂ ಒಸಿಐ ಕಾರ್ಡ್ ಬ್ಯಾಂಕ್ ಗೆ ನೀಡಿದ್ದರು. ಆದಾಗ್ಯೂ ಸಾಲವನ್ನು ಪಾವತಿಸದ ಕಾರಣ ಬ್ಯಾಂಕ್ ಅವರ ವಿರುದ್ಧ ವಂಚನೆ ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿತ್ತು.

ಬ್ಯಾಂಕ್ ನ ಕ್ರಮ ಪ್ರಶ್ನಿಸಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಯುನೈಟೆಡ್ ಕಿಂಗ್‌ ಡಂ ನಾಗರಿಕರ ಪರವಾಗಿ ಹಾಜರಾದ ವಕೀಲರು, “ಪಾಸ್‌ಪೋರ್ಟ್ ಮತ್ತು OCI ದಾಖಲೆಗಳನ್ನು ಉಳಿಸಿಕೊಳ್ಳಲು ಬ್ಯಾಂಕ್‌ ಗೆ ಅಧಿಕಾರವಿಲ್ಲ. UK ಸರ್ಕಾರ ನೀಡಿದ ಪಾಸ್‌ ಪೋರ್ಟ್ ಅನ್ನು ತಡೆಹಿಡಿಯುವ ಅಥವಾ ಉಳಿಸಿಕೊಳ್ಳುವ ಅಧಿಕಾರ ಬ್ಯಾಂಕ್‌ ಗಳಿಗೆ ಇರುವುದಿಲ್ಲ. ಅಂತೆಯೇ OCI ಕಾರ್ಡ್‌ಗಳು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿವೆ. ಅವುಗಳನ್ನು ಬ್ಯಾಂಕಿನಿಂದ ನಿಯಂತ್ರಿಸಲಾಗುವುದಿಲ್ಲ ಎಂದು ವಾದ ನಡೆಸಿದ್ದಾರೆ.

High Court New Order On bank
Image Credit: Theweek

ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ
ಬ್ಯಾಂಕ್ ವಕೀಲರು, “ಸಾಲಗಾರರೇ ಸ್ವಯಂಪ್ರೇರಣೆಯಿಂದ ತಮ್ಮ ದಾಖಲೆಗಳನ್ನು ಸಾಲದ ಭದ್ರತೆಗಾಗಿ ಒತ್ತೆ ಇಟ್ಟಿದ್ದಾರೆ” ಎಂದು ವಾದಿಸಿದರು. ವಾದ ಪ್ರತಿಪಾದಗಳನ್ನು ಗಮನಿಸಿದ ನ್ಯಾಯಾಲಯವು, “ಯುಕೆ ಪ್ರಜೆಗೆ ಯುಕೆ ಸರ್ಕಾರ ಪಾಸ್‌ ಪೋರ್ಟ್ ನೀಡಿದ್ದು, ಅದನ್ನು ಭಾರತದ ಯಾವುದೇ ಕಾನೂನಿನ ಅಡಿಯಲ್ಲಿ ನೀಡಲಾಗಿಲ್ಲ. ಇನ್ನು ಅರ್ಜಿದಾರರು ಭಾರತದಲ್ಲಿ ಉಳಿದುಕೊಳ್ಳಲು ಒಸಿಐ ಕಾರ್ಡ್ ನೀಡಲಾಗಿದೆ.

ಒಸಿಐ ಕಾರ್ಡ್ ಮತ್ತು ಪಾಸ್‌ ಪೋರ್ಟ್ ಅನ್ನು ಬ್ಯಾಂಕ್ ಅಧಿಕಾರಿಗಳಲ್ಲಿ ಒತ್ತೆ ಇಡುವುದಾಗಿ ಅರ್ಜಿದಾರರು ಒಪ್ಪಂದದ ಮೂಲಕ ನೀಡಿದ್ದರೂ ಸಹ, ಅವುಗಳನ್ನು 15 ದಿನಗಳಿಗಿಂತ ಹೆಚ್ಚು ಕಾಲ ಇಟ್ಟುಕೊಳ್ಳುವ ಯಾವುದೇ ಅಧಿಕಾರ ಬ್ಯಾಂಕ್‌ ಗೆ ಇಲ್ಲ” ಹೈಕೋರ್ಟ್ ಆದೇಶ ಹೊರಡಿಸಿದೆ. ಯಾವುದೇ ವ್ಯಕ್ತಿ ಸ್ವಯಂಪ್ರೇರಣೆಯಿಂದ ನೀಡಿದರೂ ಸಹ, ಬ್ಯಾಂಕ್‌ ಗಳು ಪಾಸ್‌ ಪೋರ್ಟ್‌ ಗಳು ಮತ್ತು ಭಾರತೀಯ ಸಾಗರೋತ್ತರ ನಾಗರಿಕರ (OCI) ಕಾರ್ಡ್‌ಗಳನ್ನು ಸಾಲಗಳಿಗೆ ಭದ್ರತೆಯಾಗಿ ಒತ್ತೆ ಇಡುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟನೆ ನೀಡಿದೆ.

Join Nadunudi News WhatsApp Group

Join Nadunudi News WhatsApp Group