High Court Rule: ಯಾವುದೇ ವಾಹನ ಇದ್ದವರು 90 ದಿನದಲ್ಲಿ ಈ ಕೆಲಸ ಮಾಡುವುದು ಕಡ್ಡಾಯ, ಹೈಕೋರ್ಟ್ ಆದೇಶ.

ವಾಹನ ಇದ್ದವರು 90 ದಿನದ ಒಳಗೆ ಈ ಕೆಲಸ ಮಾಡುವುದು ಕಡ್ಡಾಯವಾಗಿದೆ.

Karnataka High Court Verdict About HSRP: ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಹಳೆಯ ವಾಹನಗಳ ನೋಂದಣಿಯ ಬಗ್ಗೆ ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ವಾಹನಗಳ ನಿಯಂತ್ರಕ್ಕಾಗಿ ಹೊಸ ಹೊಸ ನಿಯಮವನ್ನು ಜಾರಿಗೊಳಿಸುತ್ತಿದೆ.

ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ಮಹತ್ವದ ಆದೇಶವನ್ನು ಹೊರಡಿಸಿತ್ತು. ಇನ್ನು 2019 ಏಪ್ರಿಲ್ 1 ರ ನಂತರ ನೋಂದಣಿಯಾಗಿರುವ ವಾಹನಗಳಲ್ಲಿ ಈಗಾಗಲೇ ಅತಿ ಸುರಕ್ಷತೆಯ ನೋಂದಣಿ ಫಲಕವನ್ನು ಅಳವಡಿಸಲಾಗಿದೆ. ಹೀಗಾಗಿ 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾದ ವಾಹನಗಳಿಗೆ HSRP ಕಡ್ಡಾಗೊಳಿಸಿದೆ. ಸದ್ಯ ಸರ್ಕಾರದ ಈ ಆದೇಶದ ತಡೆಗೆ ಹೈಕೋರ್ಟ್ ನಕಾರ ವ್ಯಕ್ತಪಡಿಸಿದೆ.

HSRP Number Plate Latest Update
Image Credit: medium

ನವೆಂಬರ್ 17 ರೊಳಗೆ HSRP ನಂಬರ್ ಪ್ಲೇಟ್ ಕಡ್ಡಾಯ
ಸಾರಿಗೆ ಇಲಾಖೆಯ ಆದೇಶದ ಪ್ರಕಾರ, ವಾಹನ ಮಾಲೀಕರು 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳನ್ನು ನವೆಂಬರ್ 17 ರೊಳಗೆ High Security Registration Plate ಅಳವಡಿಸಿಕೊಳ್ಳುವಂತೆ ಆದೇಶ ನೀಡಲಾಗಿದೆ. ವಾಹನಗಳಿಗೆ HSRP ಯನ್ನು ಕಡ್ಡಾಯಗೊಳಿಸಲಾಗಿದೆ. ನಿಗದಿತ ಅವಧಿಯೊಳಗೆ ಅಂದರೆ ನವೆಂಬರ್ 17 ರೊಳಗೆ 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ HSRP ಅಳವಡಿಕೆ ಕಡ್ಡಾಯವಾಗಿದೆ.

ಸರ್ಕಾರದ ನಿಯಮದ ತಡೆಯನ್ನು ನಿರಾಕರಿಸಿದ ಹೈಕೋರ್ಟ್
ನವೆಂಬರ್ 17 ರ ವರೆಗೆ 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ HSRP ಅಳವಡಿಕೆಯ ಕಡ್ಡಾಯಗೊಳಿಸಿದ ಆದೇಶಕ್ಕೆ ತಡೆ ನೀಡುವಂತೆ Karnataka High Court ಗೆ ಮನವಿ ಸಲ್ಲಿಸಲಾಗಿದೆ. ಇದೀಗ ಅರ್ಜಿಯ ತನಿಖೆ ನಡೆಸಿದ ನ್ಯಾಯಾಲಯ ಸರ್ಕಾರದ ಅಧಿಸೂಚನೆಗೆ ತಡೆ ನೀಡಲು ನಿರಾಕರಿಸಿದೆ.

High Court about HSRP Number plate
Image Credit: spinny

ಹೈಕೋರ್ಟ್ ಗೆ ಸಲ್ಲಿಸಿರುವ ಎಲ್ಲ ಅರ್ಜಿದಾರರು HSRP ಜಾರಿಯ್ಲಲಿ ಪಾಲ್ಗೊಳ್ಳಲು ವಾಹನ ಉತ್ಪಾದಕರ ಒಪ್ಪಿಗೆಯೊಂದಿಗೆ ಅವಕಾಶ ನೀಡಬೇಕು. ಇದು ಅರ್ಜಿ ಕುರಿತ ಅಂತಿಮ ತೀರ್ಮಾನದ ಆದೇಶಕ್ಕೆ ಒಳಪಡುತ್ತದೆ ಎದು ಕೋರ್ಟ್ ಆದೇಶ ಹೊರಡಿಸಿದೆ. 2019 ರ ಏಪ್ರಿಲ್ 1 ಕ್ಕಿಂತ ಹಿಂದೆ ನೋಂದಣಿಯಾದ ವಾಹನಗಳು ಇನ್ನು 90 ದಿನಗಳಲ್ಲಿ  HSRP ಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚನೆ ನೀಡಿದೆ.

Join Nadunudi News WhatsApp Group

HSRP ನೋಂದಣಿ ಹೇಗೆ ಸಾಧ್ಯ..?
HSRP ಅಳವಡಿಸದಿದ್ದರೆ ಅಂತಹ ವಾಹನದ ಮಾಲೀಕರಿಗೆ 500 ರಿಂದ 1000 ದಂಡ ವಿಧಿಸಲಾಗುತ್ತದೆ. ಈ ಬಗ್ಗೆ ಸಾರಿಗೆ ಇಲಾಖೆ ವಾಹನ ಮಾಲೀಕರಿಗೆ ಎಚ್ಚರಿಕೆ ನೀಡಿದೆ. ವಾಹನಗಳ ಮಾಲೀಕರು ಶೋರೂಮ್ ಅಥವಾ ಡೀಲರ್ ಗಳಲ್ಲಿ HSRP ನಂಬರ್ ಪ್ಲೇಟ್ ಗಾಗಿ ಮನವಿ ಸಲ್ಲಿಸಬಹುದು. ನಾಲ್ಕು ಚಕ್ರ ವಾಹನಗಳಿಗೆ 400 ರಿಂದ 500 ರೂ. ಹಾಗೂ ದ್ವಿಚಕ್ರ ವಾಹನಗಳಿಗೆ 250 ರಿಂದ 300 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಇನ್ನು https:transport.karnataka.gov.in ಅಥವಾ www.siam.in ಗೆ ಭೇಟಿ ನೀಡುವ ಮೂಲಕ HSRP ಅನ್ನು ನೋಂದಣಿ ಮಾಡಿಕೊಳ್ಳಬಹುದು.

Join Nadunudi News WhatsApp Group