Karnataka High Court: ವಿಚ್ಛೇಧನ ಪಡೆಯುವ ಎಲ್ಲಾ ಗಂಡ ಹೆಂಡತಿಗೆ ಇನ್ನೊಂದು ರೂಲ್ಸ್, ಇಷ್ಟು ಜೀವನಾಂಶ ಕಡ್ಡಾಯ.

ಪತಿಯ ವೈಯಕ್ತಿಕ ಖರ್ಚುಗಳ ಕಾರಣ ಪತ್ನಿಯ ಜೀವನಾಂಶದ ಮೊತ್ತವನ್ನು ಕಡಿತಗೊಳಿಸಲಾಗುವುದಿಲ್ಲ, ಹೈಕೋರ್ಟ್.

Karnataka High Court Verdict On Marriage Sustenance: ಭಾರತೀಯ ಕಾನೂನಿನಲ್ಲಿ ಮದುವೆ ಹಾಗೂ ಮದುವೆಯ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಅನೇಕ ನಿಯಮಾವಳಿಗಳನ್ನು ರೂಪಿಸಲಾಗುತ್ತದೆ. ಮದುವೆ ಆಗಲಿ ಅಥವಾ ವಿಚ್ಛೇದನವಾಗಲಿ ಕಾನೂನಿನ ನಿಯಮದ ಪ್ರಕಾರವೇ ನಡೆಯಬೇಕು. ಪತಿಪತ್ನಿಯ ನಡುವೆ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದಾಗ ವಿಚ್ಛೇದನ ಪಡೇಯಲು ಕೋರ್ಟ್ ಮೆಟ್ಟಿಲೇರುವುದು ಸಹಜ.

ಈಗಾಗಲೇ ಭಾರತೀಯ ನ್ಯಾಯಾಲಯವು ಸಾಕಷ್ಟು ವಿಚ್ಛೇದನ ಪ್ರಕರಣಗಳಿಗೆ ತೀರ್ಪನ್ನು ನೀಡಿದೆ. ಇನ್ನು ಭಾರತೀಯ ಕಾನೂನು ಮದುವೆ, ವಿಚ್ಛೇದನಕ್ಕೆ ಸಂಬಂಧಿಸಿದಂತೆ ಹೇಗೆ ನಿಯಮಾವಳಿಗಳನ್ನು ರೂಪಿಸಿದೆಯೋ, ಅಂತೆಯೇ ವಿಚ್ಛೇದನದ ನಂತರ ಪಡೆಯುವ ಜೀವನಾಂಶಕ್ಕೂ ನಿಯಮಗಳನ್ನು ರೂಪಿಸಿದೆ.

Karnataka High Court Verdict
Image Credit: Legiteye

ವಿಚ್ಛೇದನದ ಜೀವನಾಂಶದ ಬಗ್ಗೆ ಹೈಕೋರ್ಟ್ ಮಹತ್ವದ ತೀರ್ಪು
ವಿಚ್ಛೇದನದ ನಂತರ ಪತ್ನಿಯು ಪತಿಯಿಂದ ಜೀವನಾಂಶವನ್ನು ಪಡೆಯುವುದು ಭಾರತೀಯ ಕಾನೂನಿನಲ್ಲಿ ಮೊದಲಿನಿಂದಲೂ ಇದೆ. ಕೆಲವೊಂದು ವಿಚ್ಛೇದನದ ಪ್ರಕರಣದಲ್ಲಿ ಪತ್ನಿಯೇ ಪತಿಗೆ ಜೀವನಾಂಶವನ್ನು ನೀಡಬೇಕಾಗಿರುವ ಉದಾಹರಣೆಗಳು ಇವೆ. ಇನ್ನು ವಿಚ್ಛೇದನದ ನಂತರ ಅರ್ಹ ಪತ್ನಿಯು ಜೀವನಾಂಶವನ್ನು ಪಡೆಯುವುದು ಅವಳ ಹಕ್ಕಾಗಿರುತ್ತದೆ.

ಇನ್ನು ಪತ್ನಿಗೆ ನೀಡಲಾಗುವ ಜೀವನಾಂಶದ ಸಡಿಲಿಕೆಗೆ ಸಂಬಂಧಿಸಿದಂತೆ ಕೂಡ ಸಾಕಷ್ಟು ಪ್ರಕರಣಗಳು ಕೋರ್ಟ್ ಮೆಟ್ಟಿಲೇರುತ್ತದೆ. ಇದೀಗ ಇಂತಹದ್ದೇ ಒಂದು ಪ್ರಕರಣ ದಾಖಲಾಗಿದ್ದು, ಪತ್ನಿಗೆ ನೀಡಲಾಗತ್ತಿರುವ ಜೀವನಾಂಶದ ಮೊತ್ತ ಕಡಿತಗೊಳಿಸುವಿಕೆಯ ಬಗ್ಗೆ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

Karnataka High Court Verdict On Marriage Sustenance
Image Credit: Linkedin

ಪತಿಯ ವೈಯಕ್ತಿಕ ಖರ್ಚುಗಳ ಕಾರಣ ಪತ್ನಿಯ ಜೀವನಾಂಶದ ಮೊತ್ತವನ್ನು ಕಡಿತಗೊಳಿಸಲಾಗುವುದಿಲ್ಲ
ಈ ಪ್ರಕರಣದಲ್ಲಿ ಪತ್ನಿಯ ಜೀವನಾಂಶಕ್ಕೆ 15,000 ಹಾಗೂ ಮಕ್ಕಳ ಪೋಷಣೆಗೆ 10,000 ರೂ. ಗಳನ್ನೂ ನೀಡುವಂತೆ ಕೌಟುಂಬಿಕ ನ್ಯಾಯಾಲಯ ಆದೇಶವನ್ನು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್ ನ ಮೊರೆ ಹೋಗಿದ್ದು, ಹೈಕೋರ್ಟ್ ಈ ಬಗ್ಗೆ ತೀರ್ಪನ್ನು ನೀಡಿದೆ. ಅರ್ಜಿದಾರರು ತಾವು ಪಡೆಯುತ್ತಿರುವ ವೇತನದ ರಶೀದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಭವಿಷ್ಯ ನಿಧಿ, ಮನೆ ಬಾಡಿಗೆ, ಪೀಠೋಪಕರಣಗಳಿಗೆ ಭರಿಸುತ್ತಿರುವ ವೆಚ್ಚವನ್ನು ಪರಿಗಣಿಸಿ ಪತ್ನಿಗೆ ನೀಡಲಾಗುತ್ತಿರುವ ಜೀವನಾಂಶದ ಮೊತ್ತವನ್ನು ಕಡಿಮೆ ಮಾಡಬೇಕು ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

Join Nadunudi News WhatsApp Group

ಕರ್ನಾಟಕ ಹೈಕೋರ್ಟ್ ಈ ಅರ್ಜಿಯ ಬಗ್ಗೆ ತನಿಖೆ ನಡೆಸಿ, “ವೇತನದಿಂದ ವೃತ್ತಿಪರ ತೆರಿಗೆ, ಆದಾಯ ತೆರಿಗೆ, LIC , ಪೀಠೋಪಕರಣ ಸಂಬಂಧಿಸಿದಂತೆ ಮೊದಲಾದವು ವೈಯಕ್ತಿಕ ಪ್ರಯೋಜನಕ್ಕಾಗಿ ಕಡಿತವಾಗುತ್ತಿದೆ. ಪತಿಯ ವೈಯಕ್ತಿಕ ಖರ್ಚುಗಳ ಕಾರಣ ಪತ್ನಿಯ ಜೀವನಾಂಶದ ಮೊತ್ತವನ್ನು ಕಡಿತಗೊಳಿಸಲಾಗುವುದಿಲ್ಲ” ಎಂದು ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಹಾಗೆಯೆ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದಕ್ಕಾಗಿ ಅರ್ಜಿದಾರರಿಗೆ 15000 ರೂ. ದಂಡವನ್ನು ವಿಧಿಸಿದೆ.

Join Nadunudi News WhatsApp Group