Monsoon Rain: ರಾಜ್ಯದಲ್ಲಿ ಅಬ್ಬರಿಸಿದ ಮುಂಗಾರು, ಮುಂದಿನ 4 ದಿನ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ

ಮುಂದಿನ 4 ದಿನ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಆಗಲಿದೆ.

Monsoon Rain In Karnataka: ಸದ್ಯ ಮೇ ತಿಂಗಳು ಮುಗಿದು ಜೂನ್ ತಿಂಗಳು ಆರಂಭವಾಗಿದೆ. ಜನಸಾಮಾನ್ಯರು ಮಳೆಯ ನಿರೀಕ್ಷೆಯಲ್ಲಿದ್ದಾರೆ ಎನ್ನಬಹುದು. ಕೆಲ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ ಕೆಲವೊಂದೆ ಪ್ರದೇಶದಲ್ಲಿ ಇನ್ನು ವರುಣ ಪ್ರವೇಶ ಆಗಿಲ್ಲ ಎನ್ನಬಹುದು. ಜೂನ್ ನಲ್ಲಿ ರಾಜ್ಯದಲ್ಲೂ ಮುಂಗಾರು ಆಗಮನ ಆಗಲಿದೆ.

ಜೂನ್ ಮೊದಲ ದಿನದಲ್ಲಿ ಕೆಲವಡೆ ಮಳೆ ಸುರಿದಿದೆ. ಮುಂಗಾರಿನ ಆಗಮನ ರಾಜ್ಯಕ್ಕೆ ಆಗಿದೆ. ಮುಂಗಾರು ಮಳೆ ರಾಜ್ಯದಲ್ಲಿ ಅಬ್ಬರಿಸುತ್ತಿದೆ. ಜನಸಾಮನ್ಯರು ಮಳೆಯ ಬರುವಿಕೆಯಿಂದಾಗಿ ಖುಷಿ ಪಡುತ್ತಿದ್ದಾರೆ. ರೈತರಿಗಂತೂ ಎಲ್ಲಿಲ್ಲದ ಸಂತೋಷವಾಗಿದೆ.

Monsoon Rain In Karnataka
Image Credit: Live Mint

ರಾಜ್ಯದಲ್ಲಿ ಅಬ್ಬರಿಸಿದ ಮುಂಗಾರು
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಗಾರಿನ ಆರ್ಭಟ ಜೋರಾಗಿದೆ. ಇಂದಿನಿಂದ ಮುಂದಿನ ನಾಲ್ಕು ದಿನಗಳ ಕಾಲ ಮುಂಗಾರು ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲೂ ಭಾರಿ ಮಳೆಯಾಗಿದೆ. ಅಲ್ಲದೆ ಮಹಾಲಕ್ಷ್ಮಿ ಲೇಔಟ್ ನ ಮಾರುತಿ ನಗರದ ಮುಖ್ಯರಸ್ತೆಯಲ್ಲಿ ಮರ ಉರುಳಿ ಬಿದ್ದ ಪರಿಣಾಮ ಕಾರಿನ ಮುಂಭಾಗ ಭಾಗಶಃ ಜಖಂಗೊಂಡಿದ್ದು, ಚಾಲಕ ಕಾರು ನಿಲ್ಲಿಸಿ ತೆರಳಿದ ಬಳಿಕ ಮರ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಮುಂದಿನ 4 ದಿನ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ
ಹೊಸನಗರ, ಶಾಂತಿನಗರ, ಯಶವಂತಪುರ, ಹೆಬ್ಬಾಳ, ಮೆಜೆಸ್ಟಿಕ್, ರಾಜಾಜಿನಗರ, ಬನಶಂಕರ ಸಿಟಿ ಮಾರುಕಟ್ಟೆ ಸೇರಿದಂತೆ ನಗರದ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ಮೆಜೆಸ್ಟಿಕ್ ರಾಜಾಜಿನಗರ ಮಲ್ಲೇಶ್ವರಂ, ಶಾಂತಿನಗರ, ವಿಧಾನಸೌಧ ಟೌನ್ ಹಾಲ್ ಕೆಆರ್ ಮಾರುಕಟ್ಟೆ ಶಾಂತಿನಗರ, ವಿಧಾನಸೌಧ, ಕಾರ್ಪೊರೇಷನ್ ಶಿವಾಜಿನಗರ, ಜಯನಗರ, ಸದಾಶಿವನಗರ, ಹೆಬ್ಬಾಳ, ಯಲಹಂಕ ವಿಜಯನಗರ, ಮೈಸೂರು ರಸ್ತೆ, ಕೆಂಗೇರಿ, ಮಾಗಡಿ ರಸ್ತೆ, ಮಡಿವಾಳ, ಕೋರಮಂಗಲ, ಹೊಸೂರು ರಸ್ತೆ, ಕೆಆರ್ ಪುರಂ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮಳೆಯಿಂದಾಗಿ ರಸ್ತೆಗಳು ಜಲಾವೃತವಾಗಿದ್ದು, ವಾಹನಗಳು ಜಲಾವೃತವಾಗಿ ವಾಹನ ಸವಾರರು ಪರದಾಡುವಂತಾಗಿದೆ.

ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ 8 ಜಿಲ್ಲೆಗಳಲ್ಲಿ ಮುಂದಿನ 4 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಳದಿ ಮತ್ತು ಕಿತ್ತಳೆ ಅಲರ್ಟ್ ಘೋಷಿಸಲಾಗಿದೆ.

Join Nadunudi News WhatsApp Group

Karnataka Weather Update
Image Credit: Hindustan Times

Join Nadunudi News WhatsApp Group