Kawasaki India: ಬಡವರು ಖರೀದಿಸಬಹುದು ಖಾವಾಸಾಕಿ ಬೈಕ್, 45 Km ಮೈಲೇಜ್ ಕೊಡುವ ಖಾವಾಸಾಕಿ ಬಜೆಟ್ ಬೈಕ್ ಲಾಂಚ್

ಅಗ್ಗದ ಬೆಲೆಗೆ ಖಾವಾಸಾಕಿ ಬೈಕ್ ಲಾಂಚ್, 45 km ಮೈಲೇಜ್

Kawasaki W175 Street Bike Launch: ಬೈಕ್ ಪ್ರಿಯರಿಗೆ ಸುವರ್ಣ ಅವಕಾಶವೊಂದು ಕೈ ಸೇರಲಿದೆ. ಅದೇನೆಂದರೆ, ಕವಾಸಕಿ ಇಂಡಿಯಾ ಕಂಪನಿಯಾ ಹೊಸ ಮಾದರಿಯ ಬೈಕ್ ವೊಂದು ದೇಶಿಯ ಮಾರುಕಟ್ಟೆಯನ್ನು ಆಳಲು ಬರುತ್ತಿದೆ. ಕವಾಸಕಿ ಇಂಡಿಯಾ (Kawasaki India)ಕಂಪನಿಯು ಡಬ್ಲ್ಯೂ175 ಸ್ಟ್ರೀಟ್ ಮಾದರಿಯ ನವೀಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದೆ,

ಹೊಸ ಬೈಕ್ ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ರೆಟ್ರೋ ಕ್ಲಾಸಿಕ್ ಶೈಲಿಯೊಂದಿಗೆ ಗ್ರಾಹಕರನ್ನು ಸೆಳೆಯುತ್ತಿರುವ ಕವಾಸಕಿ ಡಬ್ಲ್ಯೂ175 ಸ್ಟ್ರೀಟ್ (Kawasaki India w175 Street ) ಮಾದರಿಯು ಹೊಸ ನವೀಕರಣದೊಂದಿಗೆ ಗ್ರಾಹಕರಿಗೆ ಪರಿಚಯ ಆಗಲಿದೆ.

Kawasaki W175 Street Bike Launch
Image Credit: Team BHP

Kawasaki W175 Street Bike feature

ಕವಾಸಕಿ ಡಬ್ಲ್ಯೂ175 ಸ್ಟ್ರೀಟ್ ಮಾದರಿಯಲ್ಲಿ ಕೆಲವು ಬದಲಾವಣೆಗಳೊಂದಿಗೆ ನವೀಕೃತ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು 152ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಮತ್ತು 12.1 ಲೀಟರ್ ಸಾಮರ್ಥ್ಯದ ಫ್ಯೂಲ್ ಟ್ಯಾಂಕ್ ಹೊಂದಿದ್ದು, ಈ ಬೈಕ್ ಒಟ್ಟಾರೆ 135.5 ಕೆ.ಜಿ ತೂಕ ಹೊಂದಿದೆ ಹೊಸ ವಿನ್ಯಾಸದ ಅಲಾಯ್ ವ್ಹೀಲ್ ಸೇರಿದಂತೆ ವಿವಿಧ ಹೊಸ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಇದರಲ್ಲಿ ಪ್ರಕಾಶಮಾನವಾಗಿರುವ ರೌಂಡ್ ಹಾಲೋಜೆನ್ ಹೆಡ್ ಲ್ಯಾಂಪ್, ಟಿಯರ್ ಡ್ರಾಫ್ ವಿನ್ಯಾಸದ ಫ್ಯೂಲ್ ಟ್ಯಾಂಕ್ ಸೇರಿದಂತೆ ಟ್ಯೂಬ್ ಲೆಸ್ ಟೈರ್ ವೈಶಿಷ್ಟ್ಯತೆಯ 17 ಇಂಚಿನ ಅಲಾಯ್ ವ್ಹೀಲ್ ಗಳನ್ನು ನೀಡಲಾಗಿದೆ.

ಹೊಸ ಬೈಕಿನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆ ಡಬಲ್ ಕ್ರೇಡಲ್ ಫ್ರೇಮ್ ಸೆಟಪ್ ಹೊಂದಿದ್ದು, ಬೈಕಿನ ಮುಂಭಾಗದಲ್ಲಿ ಕನ್ವೆಷನಲ್ ಫೋರ್ಕ್ ಸಸ್ಷೆಂಷನ್ ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಸಸ್ಷೆಂಷನ್ ನೀಡಲಾಗಿದೆ. ಇನ್ನು ಹೊಸ ಬೈಕಿನಲ್ಲಿ ಉತ್ತಮ ಗುಣಮಟ್ಟದ ಅನಲಾಗ್ ಇನ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲ್ ಸಿಡಿ ಡಿಜಿಟಲ್ ಮೀಟರ್ ನೀಡಲಾಗಿದ್ದು, ಇದು ಕ್ಯಾಂಡಿ ಎಮರ್ಲಾಡ್ ಗ್ರೀನ್ ಮತ್ತು ಮೆಟಾಲಿಕ್ ಮೂನ್ ಡಸ್ಟ್ ಗ್ರೇ ಬಣ್ಣಗಳ ಆಯ್ಕೆ ಹೊಂದಿದೆ.

Join Nadunudi News WhatsApp Group

Kawasaki W175 Street Bike Price
Image Credit: Jagran

Kawasaki W175 Street Bike Mileage

ಕವಾಸಕಿ ಕಂಪನಿಯು ಡಬ್ಲ್ಯೂ175 ಸ್ಟ್ರೀಟ್ ಬೈಕಿನಲ್ಲಿ 177 ಸಿಸಿ ಸಿಂಗಲ್ ಸಿಲಿಂಡರ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್‌ ಜೋಡಿಸಿದ್ದು, ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ 12.82 ಹಾರ್ಸ್ ಪವರ್ ಮತ್ತು 13.3 ಎನ್‌ಎಂ ಟಾರ್ಕ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇದರಲ್ಲಿ ಸುರಕ್ಷತೆಗಾಗಿ ಸಿಂಗಲ್ ಚಾನಲ್ ಎಬಿಎಸ್ ಸೇರಿದಂತೆ ಮುಂಭಾಗ ಚಕ್ರದಲ್ಲಿ 245 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಬದಿಯಲ್ಲಿ 110 ಎಂಎಂ ಡ್ರಮ್ ಬ್ರೇಕ್ ನೀಡಲಾಗಿದೆ. ಹಾಗು ಈ ಬೈಕ್ ನ ಮೈಲೇಜ್ 45 ಕಿಲೋ ಮೀಟರ್ ಎಂದು ಕಂಪನಿ ಹೇಳಿಕೊಂಡಿದೆ.

Kawasaki W175 Street Bike Price
ಪ್ರೀಮಿಯಂ ಬೈಕ್ ಮಾದರಿಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಕವಾಸಕಿ ಕಂಪನಿಯು ಕಳೆದ ವರ್ಷವಷ್ಟೇ ತನ್ನ ಕಡಿಮೆ ಬೆಲೆಯ ಡಬ್ಲ್ಯೂ175 ಸ್ಟ್ರೀಟ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿತ್ತು. ಕವಾಸಕಿ ಡಬ್ಲ್ಯೂ175 ಬೈಕ್ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.35 ಲಕ್ಷ ಬೆಲೆ ಹೊಂದಿದೆ.

Join Nadunudi News WhatsApp Group