Swarna Bandhu: ರಾಜ್ಯದಲ್ಲಿ ಜಾರಿಗೆ ಬಂತು ಸ್ವರ್ಣ ಬಂಧು ಯೋಜನೆ, ಪ್ರತಿ ಮನೆಗೆ ಬರಲಿದ್ದಾರೆ ಬ್ಯಾಂಕ್ ಸಿಬ್ಬಂಧಿ.

ಕರ್ನಾಟಕದಲ್ಲಿ ಸದ್ಯದಲ್ಲೇ KBL Swarna Bandhu Yojana ಜಾರಿಯಾಗಲಿದೆ.

KBL Swarna Bandhu Yojana: ಸದ್ಯ ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೇರಿಗೆ. ಜನರು ಹಣದುಬ್ಬರತೆಯ ಪರಿಸ್ಥಿಯನ್ನು ಎದುರಿಸುವುದರ ಜೊತೆಗೆ ಚಿನ್ನದ ಬೆಳೆಯ ಏರಿಕೆಯನ್ನು ಕೂಡ ಎದುರಿಸಬೇಕಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿನ ಚಿನ್ನದ ಬೇಡಿಕೆಯು ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯನ್ನು ಹೆಚ್ಚಿಸಿದೆ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಹಳದಿ ಲೋಹ ಜನರ ಕೈಗೆ ಸಿಗದಂತಾಗಿದೆ.

2023 ರ ಆರಂಭದಿಂದ ಚಿನ್ನದ ಬೆಲೆ ಹೆಚ್ಚಿನ ಏರಿಕೆ ಕಾಣುತ್ತಿದೆ. ಇದೀಗ ಚಿನ್ನದ ಬೆಲೆಯ ಏರಿಕೆಯ ನಡುವೆ ರಾಜ್ಯ ಸರ್ಕಾರ ಜನರಿಗೆ ಹೊಸ ಸೌಲಭ್ಯವನ್ನು ನೀಡಲು ಮುಂದಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಇದೀಗ ರಾಜ್ಯದಲ್ಲಿ ಹೊಸ ಯೋಜನೆಯನ್ನು ರೂಪಿಸಲು ನಿರ್ಧರಿಸಿಲಾಗಿದೆ.

KBL Swarna Bandhu Yojana
Image Credit: Thehindubusinessline

ರಾಜ್ಯದಲ್ಲಿ ಜಾರಿಗೆ ಬಂತು ಸ್ವರ್ಣ ಬಂಧು ಯೋಜನೆ
Karnataka Bank ಇದೀಗ Gold Loan ಸೌಲಭ್ಯವನ್ನು ನೀಡಲು ಮುಂದಾಗಿದೆ. ಈ ಮೂಲಕ ಗ್ರಾಹಕರಿಗೆ ವಿಶೇಷ ಸೌಲಭ್ಯ ನೀಡಲಿದೆ. ಆಕರ್ಷಕ ಬಡ್ಡಿದರ, ಸಂಪೂರ್ಣ ಡಿಜಿಟಲ್ ವ್ಯವಸ್ಥೆಯೊಂದಿಗೆ KBL Swarna Bandhu ಹೆಸರಿನಲ್ಲಿ ಹೊಸ ಯೋಜನೆ ಜಾರಿಯಾಗಲಿದೆ. ಮೊದಲ ಹಂತದಲ್ಲಿ Karnataka Bank ಆಯ್ದ ಶಾಖೆಗಳಲ್ಲಿ ಈ ಸೌಲಭ್ಯವನ್ನು ನೀಡಲು ಮುಂದಾಗಿದೆ. ಮುಂದಿನ ದಿನಗಲ್ಲಿ ಹಂತ ಹಂತವಾಗಿ ಕರ್ನಾಟಕದ ಎಲ್ಲ ಶಾಖೆಗಳಿಗೂ ಈ ಸೌಲಭ್ಯವನ್ನು ನೀಡಲಿದೆ.

KBL Swarna Bandhu Yojana
ಕರ್ನಾಟಕದಲ್ಲಿ ಸದ್ಯದಲ್ಲೇ KBL Swarna Bandhu Yojana ಜಾರಿಯಾಗಲಿದೆ. ಈ ಯೋಜನೆಯಡಿ ಗ್ರಾಹಕರಿಗೆ ಮನೆ ಬಾಗಿಲಿಗೆ ಗೋಲ್ಡ್ ಲೋನ್ ಸೌಲಭ್ಯ ತಲುಪಲಿದೆ. ಮನೆ ಬಾಗಿಲಿಗೆ ಚಿನ್ನದ ಸಾಲ ಸೌಲಭ್ಯವನ್ನು ಕಾರ್ಯಗತಗೊಳಿಸಲು, ಕರ್ಣಾಟಕ ಬ್ಯಾಂಕ್, ಮಣಿಪಾಲ್ ಗ್ರೂಪ್‌ನಿಂದ ಬೆಂಬಲಿತವಾದ ಚಿನ್ನದ ಸಾಲಗಳ ಸಂಗ್ರಾಹಕ ವೇದಿಕೆಯಾದ Sahi Bandu ಜೊತೆಗೆ ಪಾಲುದಾರಿಕೆ ಹೊಂದಿದೆ.

Door step Gold loan facility
Image Credit: Axisbank

ಮನೆ ಬಾಗಿಲಿಗೆ ಬರಲಿದೆ ಚಿನ್ನದ ಸಾಲ
Door Step Gold Loan ಉತ್ಪನ್ನವು ದೃಢವಾದ ಮತ್ತು ಆರೋಗ್ಯಕರವಾದ ಗೋಲ್ಡ್ ಲೋನ್ ಪೋರ್ಟ್‌ಫೋಲಿಯೊವನ್ನು ರಚಿಸುವ ಬ್ಯಾಂಕಿನ ಗುರಿಯತ್ತ ಒಂದು ದೊಡ್ಡ ಹೆಜ್ಜೆಯಾಗಿದೆ. ತಂತ್ರಜ್ಞಾನ ಸೇವೆಗಳು ಮತ್ತು ಡೋರ್ ಸ್ಟೆಪ್ ಸೇವಾ ಚೌಕಟ್ಟಿನ ಮೇಲೆ ಹತೋಟಿ ಸಾಧಿಸುವ ಮೂಲಕ , ಕರ್ಣಾಟಕ ಬ್ಯಾಂಕ್ ಮುಂದಿನ ದಿನಗಳಲ್ಲಿ ಗುಣಮಟ್ಟದ ಚಿನ್ನದ ಸಾಲ ಪೋರ್ಟ್‌ಫೋಲಿಯೊದತ್ತ ಗಮನಹರಿಸುವ ಗುರಿಯನ್ನು ಹೊಂದಿದೆ.

Join Nadunudi News WhatsApp Group

Join Nadunudi News WhatsApp Group