Subsidy Loan: ಹಸು ಮತ್ತು ಕುರಿ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ ಬಡ್ಡಿ ಇಲ್ಲದೆ ಸಾಲ, ಇಂದೇ ಅರ್ಜಿ ಹಾಕಿ.

ರೈತರಿಗಾಗಿ ಕೇಂದ್ರ ಸರ್ಕಾರ ನೀಡುತ್ತಿದೆ 3 ಲಕ್ಷ ಸಾಲ ಸೌಲಭ್ಯ

KCC Subsidy Loan For Farmers: ಸಾಮಾನ್ಯವಾಗಿ ರೈತರು ಕೃಷಿಯನ್ನು ಅವಲಂಭಿಸಿರುತ್ತಾರೆ. ವರ್ಷವಿಡೀ ರೈತರಿಗೆ ಕೃಷಿ ಮಾಡಲು ಆಗುವುದಿಲ್ಲ. ವರ್ಷದಲ್ಲಿ ಕೆಲ ಮಾಸದಲ್ಲಿ ಮಾತ್ರ ರೈತರು ಕೃಷಿಯನ್ನು ಮಾಡಿ ಆದಾಯವನ್ನು ಗಳಿಸುತ್ತಾರೆ. ಇನ್ನು ಕೆಲವರು ಕೃಷಿ ಜೊತೆಗೆ ಬೇರೆ ರೀತಿಯ ವ್ಯವಹಾರವನ್ನು ಮಾಡುತ್ತಾರೆ.

ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಕುರಿ, ಹಂದಿ, ಮೀನು ಸೇರಿದಂತೆ ವಿವಿದ ರೀತಿಯ ಉಪಕಸುಬನ್ನು ಅವಲಂಭಿಸಿರುತ್ತಾರೆ. ಸದ್ಯ ಸರ್ಕಾರ ಇಂತವರಿಗೆ ಸಹಾಯ ಮಾಡಲು ಹೊಸ ಯೋಜನೆಯನ್ನು ರೂಪಿಸಲು ನಿರ್ಧರಿಸಿದೆ.

KCC Subsidy Loan For Farmers
Image Credit: Farmonline

ಹಸು ಮತ್ತು ಕುರಿ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ ಬಡ್ಡಿ ಇಲ್ಲದೆ ಸಾಲ
ರೈತರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆ ಜಾರಿಗೊಳಿಸಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಇದು ದೇಶದಾದ್ಯಂತ ರೈತರಿಗೆ ಲಭ್ಯವಿದೆ. ಹಿಡುವಳಿದಾರ ರೈತರು, ಭೂ ಮಾಲೀಕರು, ಶೇರು ಬೆಳೆಗಾರರು ಈ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.

ಈ ಯೋಜನೆಯ ಮೂಲಕ, ರೈತರು ತಮ್ಮ ಕೃಷಿ ಅಗತ್ಯಗಳನ್ನು ಪೂರೈಸಲು ಸುಲಭವಾಗಿ ಸಾಲವನ್ನು ಪಡೆಯಬಹುದು. Kisan Credit Card ನ ಮೂಲಕ ನೀವು ಹೈನುಗಾರಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ ಕುರಿ, ಹಂದಿ, ಮೀನು ಸೇರಿದಂತೆ ವಿವಿದ ರೀತಿಯ ಸಾಕಾಣಿಕೆಯನ್ನು ಮಾಡಲು ಸಾಲ ಸೌಲಭ್ಯವನ್ನು ಪಡೆಯಬಹುದು.

KCC Subsidy Loan
Image Credit: ABP News

ರೈತರಿಗಾಗಿ ಕೇಂದ್ರ ಸರ್ಕಾರ ನೀಡುತ್ತಿದೆ 3 ಲಕ್ಷ ಸಾಲ ಸೌಲಭ್ಯ
Kisan Credit Card ನ ಮೂಲಕ ರೈತರು 3 ಲಕ್ಷದ ವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇನ್ನು 1 .6 ಲಕ್ಷ ರೂ. ಗಳ ಸಾಲವನ್ನು ಪಡೆಯಲು ರೈತರು ಯಾವುದೇ ರೀತಿಯ ದಾಖಲೆಯನ್ನು ನೀಡುವ ಅಗತ್ಯ ಇರುವುದಿಲ್ಲ. ಯಾವುದೇ ಹಣಕಾಸು ಸಂಸ್ಥೆ ಅಥವಾ ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯಬಹುದು. Kisan Credit Card ನ ಮೂಲಕ ಸಾಲದ ಬಡ್ಡಿದರ ಕೇವಲ 4 % ಇರುತ್ತದೆ. Kisan Credit Card ಇಲ್ಲದೆ ಸಾಲ ಪಡೆಯಲು ನೀವು 7 % ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

Join Nadunudi News WhatsApp Group

ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯಲು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್‌ ನಂತಹ ಯಾವುದೇ ಗುರುತಿನ ಪುರಾವೆ ಬ್ಯಾಂಕ್ ನೀಡಿ ಸಾಲವನ್ನು ಪಡೆಯಬಹುದು. Axis bank , HDFC Bank , SBI ಬ್ಯಾಂಕ್ ನಿಮಗೆ Kisan Credit Card ಯೋಜನೆಯಡಿ ಸಾಲ ಸೌಲಭ್ಯವನ್ನು ನೀಡುತ್ತದೆ. ಕಂದಾಯ ಅಧಿಕಾರಿಗಳು ನೀಡಿದ ಭೂಮಿಯ ಪುರಾವೆ, ಸಾಗುವಳಿ ವಿಧಾನ, ಸಾಗುವಳಿ ಮಾಡಿದ ಬೆಳೆಗಳ ವಿಸ್ತೀರ್ಣ, ಸಾಲ ಮಿತಿಗೆ ಭದ್ರತಾ ದಾಖಲೆಗಳು ಸಾಲ ಪಡೆಯಲು ಅಗತ್ಯವಾಗಿದೆ.

Join Nadunudi News WhatsApp Group