ಸಾಲಾರ್ ಚಿತ್ರಕ್ಕೆ ಕೆಜಿಎಫ್ ತಾತ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ, ಶಾಕಿಂಗ್ ಸಂಭಾವನೆ ನೋಡಿ.

ಕನ್ನಡ ಚಿತ್ರರಂಗವನ್ನ ಬಹಳ ಎತ್ತರಕ್ಕೆ ತೆಗೆದುಕೊಂಡ ಹೋದ ಚಿತ್ರರವೆಂದರೆ ಅದೂ ಕೆಜಿಎಫ್ ಚಿತ್ರವೆಂದು ಹೇಳಬಹುದು. ಹೌದು ಇಡೀ ಜಗತ್ತೇ ಈ ಚಿತ್ರವನ್ನ ಮೆಚ್ಚಿಕೊಂಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸದ್ಯ ದೇಶದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ 3 ನೇ ಸ್ಥಾನದಲ್ಲಿ ಇದೆ. ಇನ್ನು ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸುದ್ದಿಯಲ್ಲಿ ಇರುವ ವಿಷಯ ಏನು ಅಂದರೆ ಅದೂ ಕೆಜಿಎಫ್ ತಾತನ ವಿಷಯವೆಂದು ಹೇಳಬಹುದು. ಹೌದು ಕೆಜಿಎಫ್ ಮೊದಲ ಭಾಗ ಮತ್ತು ಎರಡನೆಯ ಭಾಗದಲ್ಲಿ ಕಾಣಿಸಿಕೊಂಡ ತಾತನನ್ನ ಸಾಮಾನ್ಯವಾಗಿ ಎಲ್ಲರೂ ನೋಡೇ ಇರುತ್ತಾರೆ. ಕೆಜಿಎಫ್ ಸಿನಿಮಾದಲ್ಲಿ ತಾತನ ಪಾತ್ರವನ್ನ ಮಾಡಿದ ಇವರ ಹೆಸರು ಕೃಷ್ಣಾಜಿ.

ಈ ಹಿಂದೆ ಹಲವು ಸಿನೆಮಾಗಳಲ್ಲಿ ಕಾಣಿಸಿಕೊಂಡ ಇವರಿಗೆ ಬಹಳ ಒಳ್ಳೆಯ ಹೆಸರನ್ನ ತಂದುಕೊಟ್ಟ ಸಿನಿಮಾ ಅಂದರೆ ಅದು ಕೆಜಿಎಫ್ ಆಗಿದೆ. ಈ ಚಿತ್ರರಾದ ನಂತರ ಇವರನ್ನ ಕೆಜಿಎಫ್ ತಾತ ಎಂದು ಕರೆಯಲು ಆರಂಭ ಮಾಡಿದ್ದಾರೆ. ಇನ್ನು ಕೆಜಿಎಫ್ ತಾತನಿಗೆ ಈಗ ಇನ್ನೊಂದು ದೊಡ್ಡ ಅದೃಷ್ಟ ಒಲಿದು ಬಂದಿದೆ. ಹೌದು ಕೆಜಿಎಫ್ ತಾತ ಪ್ರಭಾಸ್ ನಟನೆಯ ಸಾಲಾರ್ ಚಿತ್ರದಲ್ಲಿ ಕೂಡ ನಟನೆಯನ್ನ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಸಾಲಾರ್ ಚಿತ್ರಕ್ಕೆ ಕೆಜಿಎಫ್ ತಾತಾ ಪಡೆದ ಸಂಭಾವನೆಯ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

KGF old man

ಹಾಗಾದರೆ ಸಲಾರ ಚಿತ್ರಕೆಕೆ ಕೆಜಿಎಫ್ ತಾತ ಪಡೆದ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ. ಸ್ನೇಹಿತರೆ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಕೆಜಿಎಫ್ ತಾತನಿಗೆ ಕೆಜಿಎಫ್ ಚಿತ್ರದಲ್ಲಿ ನೀಡಿದ ಸಂಭಾವನೆಯ ಮೊತ್ತವನ್ನೇ ಸಾಲಾರ್ ಚಿತ್ರದಲ್ಲಿ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಸಲಾರ ಚಿತ್ರದಲ್ಲಿ ಕೂಡ ಇವರು ಬಹಳ ಒಳ್ಳೆಯ ಪಾತ್ರವನ್ನ ಮಾಡುತ್ತಿದ್ದು ಇವರಿಗೆ ಬಹಳ ದೊಡ್ಡ ಮೊತ್ತದ ಸಂಭಾವನೆಯನ್ನ ಪ್ರಶಾಂತ್ ನೀಲ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹೌದು ಕೆಜಿಎಫ್ ತಾತನಿಗೆ ಕೆಜಿಎಫ್ ಚಿತ್ರದಲ್ಲಿ ನಟಿಸಲು ಅಂದಾಜು 4 ಲಕ್ಷ ರೂಪಾಯಿಯನ್ನ ನೀಡಲಾಗಿದ್ದು ಸಾಲಾರ್ ಚಿತ್ರದಲ್ಲಿ ನಟಿಸಲು ಕೂಡ 4 ಲಕ್ಷ ರೂಪಾಯಿಯನ್ನ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಕೆಜಿಎಫ್ ಮತ್ತು ಸಾಲಾರ್ ಚಿತ್ರ ಕೃಷ್ಣಾಜಿ ಅವರ ಜೀವನವನ್ನ ಬದಲಾಯಿಸಿದ್ದು ಇವರನ್ನ ಪ್ರತಿಯೊಬ್ಬರೂ ಗುರುತು ಹಿಡಿಯುವಂತೆ ಆಗಿದೆ. ಸ್ನೇಹಿತರೆ ಕೆಜಿಎಫ್ ಮೊದಲ ಭಾಗ ಮತ್ತು ಎರಡನೆಯ ಭಾಗದಲ್ಲಿ ನಟಿಸಿದ ಈ ತಾತನ ನಟನೆಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Join Nadunudi News WhatsApp Group

KGF old man

Join Nadunudi News WhatsApp Group