Kia 9 Seater: ಸೂಪರ್ ಲುಕ್ ಮತ್ತು ಭರ್ಜರಿ ಮೈಲೇಜ್, ದೊಡ್ಡ ಕುಟುಂಬಕ್ಕಾಗಿ ಬಂತು KIA 9 ಸೀಟರ್ ಕಾರ್.

ದೊಡ್ಡ ಕುಟುಂಬಕ್ಕಾಗಿ ಬಂತು KIA 9 ಸೀಟರ್ ಕಾರ್

Kia Carnival MPV Launch In April 2024: ಭಾರತೀಯ ಆಟೋ ವಲಯದಲ್ಲಿ Kia ಕಂಪನಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ ಎಂದರೆ ತಪ್ಪಾಗಲಾರದು. ಈಗಾಗಲೇ Kia India ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತಿವೆ.

Kia ಮಾರುಕಟ್ಟೆಯಲ್ಲಿ ಇತ್ತೀಚಿಗೆ ತನ್ನ Seltos ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ. Kia seltos ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದ್ದ ಬೆನ್ನಲ್ಲೇ ಇದೀಗ Kia ಇನ್ನೊಂದು ಮಾದರಿಯನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

Kia Carnival MPV Launch
Image Credit: Cardekho

ಸೂಪರ್ ಲುಕ್ ಮತ್ತು ಭರ್ಜರಿ ಮೈಲೇಜ್
ಮಾರುಕಟ್ಟೆಯಲ್ಲಿ ಕುಟುಂಬದ ಕಾರೆಂದು ಖ್ಯಾತಿ ಗಳಿಸಿರುವ Kia Carnival ಶೀಘ್ರದಲ್ಲೇ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ. ಇತ್ತೀಚೆಗಷ್ಟೇ ಕಂಪನಿಯು ನವೀಕರಿಸಿದ ನಾಲ್ಕನೇ ತಲೆಮಾರಿನ ಕಾರ್ನಿವಲ್ MPV ಹೊರಭಾಗದ ಲುಕ್ ಅನ್ನು ಕಂಪನಿಯು ಪರಿಚಯಿಸಿದೆ. ಹೊಸ ಕಾರ್ನಿವಲ್ MPV ವಿನ್ಯಾಸದಲ್ಲಿ ಸಾಕಷ್ಟು ಅತ್ಯಾಧುನಿಕವಾಗಿದ್ದು ಮುಂಭಾಗದ L- ಆಕಾರದ LED DRL ಗಳು, ಆಕರ್ಷಕ ಹೆಡ್‌ ಲೈಟ್‌ ಗಳನ್ನು ಹೊಂದಿದೆ.

ರೇಡಿಯೇಟರ್ ಗ್ರಿಲ್ ಮೊದಲಿಗಿಂತ ಸ್ವಲ್ಪ ದೊಡ್ಡದಾಗಿದೆ. ಇದು ಮರುವಿನ್ಯಾಸಗೊಳಿಸಲಾದ ಬಂಪರ್, ಡ್ಯುಯಲ್ ಟೋನ್ ಮಿಶ್ರಲೋಹದ ಚಕ್ರಗಳನ್ನು ಪಡೆಯುತ್ತದೆ. ವಿಶಾಲತೆಯ ಭಾವವನ್ನು ಸೃಷ್ಟಿಸುವ ಸೊಗಸಾದ “ಫ್ಲೋಟಿಂಗ್ ರೂಫ್” ವಿನ್ಯಾಸವನ್ನು ಹೊಂದಿರಲಿದೆ.

Kia Carnival MPV Launch In April 2024
Image Credit: Cardekho

ದೊಡ್ಡ ಕುಟುಂಬಕ್ಕಾಗಿ ಬಂತು KIA 9 ಸೀಟರ್ ಕಾರ್
ನೂತನ Kia Carnival ನಲ್ಲಿ 9 ಆಸನಗಳ ಆಯ್ಕೆಯನ್ನು ಕಾಣಬಹುದಾಗಿದೆ. ಡ್ಯಾಶ್ ಬೋರ್ಡ್ ವಿನ್ಯಾಸ ವಿಭಿನ್ನವಾಗಿದ್ದು, Curved display, twin 12.3-inch display for infotainment and instrument cluster, AC vents, front Miror , Digital Key, Ambient Lighting, Fingerprint Sensor, Level-2 ADAS ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ. ಕಿಯಾ ಕಾರ್ನಿವಲ್ MPV ಭಾರತದಲ್ಲಿ 2.2 ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಮತ್ತು ಸ್ವಯಂಚಾಲಿತ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಲಭ್ಯವಾಗುವ ನಿರೀಕ್ಷೆಯಿದೆ.

Join Nadunudi News WhatsApp Group

ಹಳೆಯ ಮಾದರಿಗೆ ಹೋಲಿಸಿದರೆ ನೂತನ Carnival 72 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದ್ದು, ಪ್ರತಿ ಲೀಟರ್ ಗೆ 14km ಮೈಲೇಜ್ ನೀಡುತ್ತದೆ ಎನ್ನುವ ಬಗ್ಗೆ ವರದಿಯಾಗಿದೆ. ಇನ್ನು ಹೊಚ್ಚ ಹೊಸ Kia Carnival ಕಾರ್ ನ ಬೆಲೆಯ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ನೀಡಿಲ್ಲವಾದರೂ ಮಾರುಕಟ್ಟೆಯಲ್ಲಿ ಸುಮಾರು 25 ರಿಂದ 35 ಲಕ್ಷ ರೂ. ಗಳಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ. ಏಪ್ರಿಲ್ 2024 ರಲ್ಲಿ Kia Carnival ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎನ್ನುವ ಬಗ್ಗೆ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.

Kia Carnival MPV Price In India
Image Credit: Cardekho

Join Nadunudi News WhatsApp Group