Kia SUV: 7 ಲಕ್ಷದ ಈ KIA SUV ಕಾರ್ ಖರೀದಿಸಲು ಮುಗಿಬಿದ್ದ ಜನರು, ಭರ್ಜರಿ 4 ಲಕ್ಷ ಮಾರಾಟ

ಬಿಡುಗಡೆಯಾಗಿ 4 ವರ್ಷಕ್ಕೆ 4 ಲಕ್ಷ ಯೂನಿಟ್ ಮಾರಾಟಗೊಂಡ KIA Sonet

Kia Sonet SUV Price And Features: ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಮಾದರಿಯ ಕಾರ್ ಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಕೊರಿಯಾ ಮೂಲದ Kia ಕಂಪನಿ ಬಿಡುಗಡೆ ಮಾಡಿದ Sonet SUV ಬಾರಿ ಸದ್ದು ಮಾಡುತ್ತಿದೆ. ಕಂಪನಿಯ ಜನಪ್ರಿಯ SUV Sonet ದೊಡ್ಡ ಸಂಖ್ಯೆಯಲ್ಲಿ ಗ್ರಾಹಕರನ್ನು ಸೆಳೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸೊನೆಟ್ ಮಾದರಿಯನ್ನು ಖರೀದಿಸುತ್ತಿದ್ದಾರೆ. ಇದೀಗ ನಾವು ಈ KIA SUV ಕಾರ್ ನ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

Kia Sonet SUV Price And Features
Image Credit: Timesnownews

ಬಿಡುಗಡೆಯಾಗಿ 4 ವರ್ಷಕ್ಕೆ 4 ಲಕ್ಷ ಯೂನಿಟ್ ಮಾರಾಟಗೊಂಡ KIA SUV
ಹೌದು ಈ ಕಾರ್ ಬಿಡುಗಡೆಯಾಗಿ 4 ವರ್ಷ ಕಳೆಯುವ ಮೊದಲೇ 4,00,000 ಯುನಿಟ್ ಗಳಷ್ಟು ಮಾರಾಟಗೊಂಡಿದೆ. ಅದರಲ್ಲಿ 3,17,754 ಯುನಿಟ್ SUV ಗಳನ್ನು ಭಾರತದ ಮಾರುಕಟ್ಟೆಯಲ್ಲಿ, ಇನ್ನುಳಿದ 85,814 ಯುನಿಟ್ ಕಾರುಗಳನ್ನು ವಿದೇಶಕ್ಕೆ ರಫ್ತು ಮಾಡಲಾಗಿದೆ.

7 ಲಕ್ಷದ ಈ KIA SUV ಕಾರ್ ಖರೀದಿಸಲು ಮುಗಿಬಿದ್ದ ಜನ
ಸದ್ಯ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಕಿಯಾ ಸೋನೆಟ್ SUV ಬೆಲೆ 7.99 ಲಕ್ಷದಿಂದ 15.75 ಲಕ್ಷ ಆಗಿದೆ. ಈ KIA Sonet SUV, Pewter Olive, Glacier White Pearl, Clear White ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತದೆ.

Kia Sonet SUV Price In India
Image Credit: Timesnownews

Kia Sonet SUV Engine Capacity
Kia Sonet SUV ಪೆಟ್ರೋಲ್ ಹಾಗೂ ಡೀಸೆಲ್ ಪವರ್‌ಟ್ರೇನ್ ಆಯ್ಕೆಯನ್ನು ಪಡೆದುಕೊಂಡಿದೆ. ಇದರಲ್ಲಿ 1 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 120 ps ಗರಿಷ್ಠ ಪವರ್ ಹಾಗೂ 172 nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.2 ಲೀಟರ್ ಪೆಟ್ರೋಲ್ ಎಂಜಿನ್ 83 ps ಪವರ್ ಮತ್ತು 115 nm ಪೀಕ್ ಟಾರ್ಕ್ ಹೊರಹಾಕುತ್ತದೆ. ಹಾಗೆ 1.5 ಲೀಟರ್ ಎಂಜಿನ್ 116 ps ಪವರ್ ಮತ್ತು 250 nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಮ್ಯಾನುವಲ್, 6-ಸ್ಪೀಡ್ ಆಟೋಮೆಟಿಕ್, 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ. Kia Sonet ಪೆಟ್ರೋಲ್ ಮಾದರಿ ಪ್ರತಿ ಲೀಟರ್ ಗೆ 19 ಕಿಲೋಮೀಟರ್, ಹಾಗೆ ಡಿಸೇಲ್ ಮಾದರಿ ಪ್ರತಿ ಲೀಟರ್ ಗೆ 22 ಕಿಲೋಮೀಟರ್ ಮೈಲೇಜ್ ನೀಡುತ್ತದೆ.
Kia Sonet SUV Features
*6 Airbag
*ESC, ADAS, TPMS
*360-degree camera
*Front And Rear Parking Sensors
*10.25-inch touchscreen infotainment display
*Sunroof
* wireless phone charger

Join Nadunudi News WhatsApp Group

Kia Sonet SUV Features
Image Credit: Timesnownews

Join Nadunudi News WhatsApp Group