Kia Sonet: ಈ KIA SUV ಕಾರ್ ಈಗ ತೆರಿಗೆ ಮುಕ್ತವಾಗಿದೆ, ಕಾರ್ ಖರೀದಿಯ ಮೇಲೆ ಭರ್ಜರಿ 1.6 ಲಕ್ಷ ರೂ. ಉಳಿತಾಯ.

ಈ KIA SUV ಕಾರ್ ಖರೀದಿಯ ಮೇಲೆ ಭರ್ಜರಿ 1.6 ಲಕ್ಷ ರೂ. ಉಳಿತಾಯ.

Kia Sonet SUV Without Tax: ಭಾರತೀಯ ಮಾರುಕಟ್ಟೆಯಲ್ಲಿ ಹಲವಾರು ಮಾದರಿಯ ಕಾರ್ ಗಳು ಗ್ರಾಹಕರಿಗೆ ಲಭ್ಯವಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ Kia ಕಂಪನಿಯ Sonet SUV ಬಾರಿ ಸದ್ದು ಮಾಡುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಸೊನೆಟ್ ಮಾದರಿಯನ್ನು ಖರೀದಿಸುತ್ತಿದ್ದಾರೆ.

ಸದ್ಯ ಕೀಯ ಸೊನೆಟ್ ಖರೀದಿದಾರರಿಗೆ ಭರ್ಜರಿ ಆಫರ್ ಬಂದೊದಗಿದೆ. ನೀವು ಕೀಯ ಸೊನೆಟ್ ಮಾದರಿಯನ್ನು ಯಾವುದೇ ತೆರಿಗೆ ಇಲ್ಲದೆ ಖರೀದಿಸಬಹುದು. ತೆರಿಗೆ ರಹಿತ ಸೊನೆಟ್ ಖರೀದಿಸಿದರೆ ನೀವು ಹೆಚ್ಚು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ತೆರಿಗೆ ಮುಕ್ತವಾಗಿರುವ ಕಿಯಾ ಸೊನೆಟ್ ಮಾದರಿಯ ಬಗ್ಗೆ ವಿವರ ಇಲ್ಲಿದೆ ನೋಡಿ.

Kia Sonet SUV Without Tax
Image Credit: Business Today

ಕಾರ್ ಖರೀದಿಯ ಮೇಲೆ ಭರ್ಜರಿ 1 .6 ಲಕ್ಷ ರೂ ಉಳಿತಾಯ
ಇನ್ನು ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸೈನಿಕರಿಗೆ ಕ್ಯಾಂಟೀನ್ ಸೌಲಭ್ಯ ನೀಡಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಎಲ್ಲಾ ರೀತಿಯ ವಸ್ತುಗಳು ಈ ಕ್ಯಾಂಟೀನ್ ನಲ್ಲಿ ಸೈನಿಕರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ. ಈ ಕ್ಯಾಂಟೀನ್‌ ನಲ್ಲಿ ಸೈನಿಕರಿಗೆ ಚಾಕಲೇಟ್‌ ನಿಂದ ಕಾರ್‌ ಗಳವರೆಗೆ ಎಲ್ಲವೂ ಲಭ್ಯವಿದೆ. ಇದೀಗ ಈ ಕ್ಯಾಂಟೀನ್ ನಲ್ಲಿ ಕಿಯಾ ಸೋನೆಟ್ ಕೂಡ ಮಾರಾಟಕ್ಕೆ ಬಂದಿದೆ. ಈ ಕಾರಣಕ್ಕಾಗಿ ಕಿಯಾ ಸೋನೆಟ್ SUV ಸೈನಿಕರಿಗೆ ಸಾಕಷ್ಟು ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.

ಕಿಯಾ ಸೋನೆಟ್‌ ನ 11 ರೂಪಾಂತರಗಳು ಇಲ್ಲಿ ಮಾರಾಟವಾಗಲಿವೆ. ಮತ್ತು ಅದರ ಬೆಲೆಯ ಮೇಲೆ 28% GST ಬದಲಿಗೆ 14% ಮಾತ್ರ ಅನ್ವಯಿಸುತ್ತದೆ. ಇನ್ನು ಸಾಮಾನ್ಯರಿಗೆ ಇದರ ಕಡಿಮೆ ವೆರಿಯಂಟ್ ನ ಎಕ್ಸ್ ಶೋ ರೂಂ ಬೆಲೆ 7 ಲಕ್ಷ 99 ಸಾವಿರ ರೂ. ಆಗಿದೆ. ಇನ್ನು ಕ್ಯಾಂಟೀನ್‌ ನಲ್ಲಿ 7,06,254 ರೂ.ಗೆ ಲಭ್ಯವಿರುತ್ತದೆ. ಅಂದರೆ ನೀವು ಇದರಲ್ಲಿ 92,746 ರೂ.ಗಳನ್ನು ಉಳಿಸಬಹುದು. ಆದಾಗ್ಯೂ, ಈ SUV ಯ ವಿವಿಧ ರೂಪಾಂತರಗಳಲ್ಲಿ ನೀವು ಸರಿಸುಮಾರು 1,60,353 ರೂ. ಗಳನ್ನು ಉಳಿಸಬಹುದು. ಈ ಆಫರ್ ಸೈನಿಕರಿಗೆ ಮಾತ್ರ ಲಭ್ಯವಿರುತ್ತದೆ.

Kia Sonet SUV Price In India
Image Credit: Business-standard

KIA SUV ಕಾರ್ ಈಗ ತೆರಿಗೆ ಮುಕ್ತವಾಗಿದೆ
ಕಿಯಾ ಸೋನೆಟ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಈ ಎಂಜಿನ್ 82 bhp ಪವರ್ ಮತ್ತು 115 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದಲ್ಲದೆ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಸಹ ನೀಡಲಾಗುತ್ತದೆ, ಇದು 114 bhp ಮತ್ತು 250 ನ್ಯೂಟನ್ ಮೀಟರ್‌ಗಳ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಕಿಯಾ ಸೋನೆಟ್ ನಲ್ಲಿ 6 ಏರ್‌ ಬ್ಯಾಗ್‌ ಗಳು, ಟೈರ್ ಒತ್ತಡ ಮಾನಿಟರಿಂಗ್ ಸಿಸ್ಟಮ್, ಹಿಲ್ ಸ್ಟಾರ್ಟ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಡಿಪಾರ್ಚರ್ ವಾರ್ನಿಂಗ್, ಡಿಕ್ಕಿ ಅಸಿಸ್ಟೆಂಟ್, ಹೈ ಬೀಮ್‌ ನಂತಹ ವೈಶಿಷ್ಟ್ಯಗಳನ್ನು ನೀವು ನೋಡಬಹುದು.

Join Nadunudi News WhatsApp Group

Kia Sonet SUV Price And Feature
Image Credit: Overdrive

Join Nadunudi News WhatsApp Group