Kia SUV EV: ಟಾಟಾ ಕಾರಿಗೆ ಪೈಪೋಟಿ ಕೊಡಲು ಬಂತು ಹೊಸ KIA SUV ಎಲೆಕ್ಟ್ರಿಕ್ ಕಾರ್, 450 Km ಮೈಲೇಜ್.

450 Km ಮೈಲೇಜ್ ನೀಡಲಿದೆ ಹೊಸ KIA SUV ಎಲೆಕ್ಟ್ರಿಕ್ ಕಾರ್

Kia SUV EV3 Launch In India: ಭಾರತೀಯ ಮಾರುಕಟ್ಟೆಯಲ್ಲಿ Kia ಕಂಪನಿ ಕೂಡ ಅನೇಕ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ಉನ್ನತ ಸ್ಥಾನದಲ್ಲಿದೆ. ಕೀಯ ಕಂಪನಿಯು ಈಗಾಗಲೇ ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಕಾರ್ ಗಳನ್ನೂ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

ಸದ್ಯ ಮಾರುಕಟ್ಟೆಯಲ್ಲಿ Kia ನೂತನ EV ಬಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ದಕ್ಷಿಣ ಕೊರಿಯಾದ ತಯಾರಕ ಕಿಯಾ ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ. ಕಿಯಾ ಎಲೆಕ್ಟ್ರಿಕ್ ಕಾರುಗಳ ಮೇಲೆ ಹೆಚ್ಚು ಗಮನ ಹರಿಸಿದೆ. ಕಂಪನಿಯು 2030 ರ ವೇಳೆಗೆ ಬಿಡುಗಡೆ ಮಾಡಬಹುದಾದ ಹಲವಾರು ಪರಿಕಲ್ಪನೆಯ ಮಾದರಿಗಳನ್ನು ಬಿಡುಗಡೆ ಮಾಡಿದೆ.

Kia SUV EV3 Launch In India
Image Credit: Carandbike

ಟಾಟಾ ಕಾರಿಗೆ ಪೈಪೋಟಿ ಕೊಡಲು ಬಂತು ಹೊಸ KIA SUV ಎಲೆಕ್ಟ್ರಿಕ್ ಕಾರ್
ಸದ್ಯ ಕೀಯ ಹೊಸ ಕಾಂಪ್ಯಾಕ್ಟ್ SUV EV3 ಅನ್ನು ಸಹ ಪರಿಚಯಿಸಿದೆ. ಈ ಮಾದರಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕಂಪನಿಯು ಈ ಕಾರಿನ ಟೀಸರ್ ಅನ್ನು ತನ್ನ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಬಿಡುಗಡೆ ಮಾಡಿದೆ. ಈ ನೂತನ ಮಾದರಿಯ ಬಗ್ಗೆ ತಿಳಿಯಲು ಈ ಲೇಖನವನ್ನು ಓದಿ.

Kia EV3 ಅನ್ನು ಈ ವರ್ಷದ ಅಂತ್ಯದೊಳಗೆ ತರಬಹುದು. ಮೇ 23ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಕಾರಿನ ಬಗ್ಗೆ ಸಾಕಷ್ಟು ಮಾಹಿತಿ ನೀಡಬಹುದು. Kia EV3 ಅನ್ನು ಭಾರತದಲ್ಲಿಯೂ ತರಲಾಗುತ್ತಿದೆ. ಇದರ ಆಗಮನವು ಟಾಟಾ ನೆಕ್ಸಾನ್ EV ಮತ್ತು ಮಹೀಂದ್ರ XUV 400 ಗೆ ಬಾರಿ ಪೈಪೋಟಿ ನೀಡಲಿದೆ.

Kia SUV EV3 Price In India
Image Credit: Carbuzz

450 Km ಮೈಲೇಜ್, ಕಡಿಮೆ ಬೆಲೆ
Kia EV3 ಮಾರುಕಟ್ಟೆಯಲ್ಲಿ 35000 ರಿಂದ 50000 ಡಾಲರ್‌ ಗಳವರೆಗೆ ಇರುತ್ತದೆ. ಅಂದರೆ ಈ ಕಾರು ಭಾರತದಲ್ಲಿ 30 ಲಕ್ಷ ರೂ. ಗೆ ಮಾರಾಟವಾಗಲಿದೆ. ಆದಾಗ್ಯೂ, ಅದರ ವೈಶಿಷ್ಟ್ಯಗಳನ್ನು ಕಡಿಮೆ ಮಾಡಿದರೆ ಅದರ ಬೆಲೆ ಕಡಿಮೆಯಾಗಬಹುದು. ಭಾರತೀಯ ಮಾರುಕಟ್ಟೆಯಲ್ಲಿ ಕೈಗೆಟುಕುವಂತೆ ಮಾಡಲು ಕಂಪನಿಯು ಇದಕ್ಕೆ ಸಾಕಷ್ಟು ಹೊಸ ವಿಷಯಗಳನ್ನು ಸೇರಿಸಬಹುದು.

Join Nadunudi News WhatsApp Group

ಎಸ್‌ಯುವಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಸಾಕಷ್ಟು ಬೇಡಿಕೆಯಿದೆ. ಇದೀಗ ಬಿಡುಗಡೆಯಾದರೆ ಭಾರತದಲ್ಲಿ ಹೆಚ್ಚು ಮಾರಾಟವಾಗಲಿದೆ. ಇದು 40 ರಿಂದ 45 ಕಿಲೋವ್ಯಾಟ್ ಗಂಟೆಗಳ ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ನೊಂದಿಗೆ ಬರಲಿದೆ. ಈ ಬ್ಯಾಟರಿ ಪ್ಯಾಕ್ ಮೂಲಕ, ನೀವು ಒಂದೇ ಚಾರ್ಜ್ ನಲ್ಲಿ 400 ರಿಂದ 450 ಕಿಲೋಮೀಟರ್ ಮೈಲೇಜ್ ಅನ್ನು ಪಡೆಯಬಹದು. ದೀರ್ಘ ಪ್ರಯಾಣಕ್ಕೆ ಈ EV ಉತ್ತಮ ಆಯ್ಕೆ ಎನ್ನಬಹುದು.

Kia SUV EV3 Price And Feature
Image Credit: Kayfreesm

Join Nadunudi News WhatsApp Group