Kinetic Luna: ಸಿಂಗಲ್ ಚಾರ್ಜ್ ನಲ್ಲಿ ಭರ್ಜರಿ 104km ಮೈಲೇಜ್, 500 ರೂಪಾಯಿಗೆ ಬುಕ್ ಮಾಡಿ ಲೂನಾ ಸ್ಕೂಟರ್

ಸಿಂಗಲ್ ಚಾರ್ಜ್ ನಲ್ಲಿ ಭರ್ಜರಿ 104km ಮೈಲೇಜ್ ನೀಡುವ ಎಲೆಕ್ಟ್ರಿಕ್ ಲೂನಾ

Kinetic E-Luna: ಮಾರುಕಟ್ಟೆಯಲ್ಲಿ 80 ರ ದಶಕದಲ್ಲಿ Kinetic Luna ಸ್ಕೂಟರ್ ಟಾಯ್ರಕ ಕಂಪನಿಯು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ಆ ಸಮಯದಲ್ಲಿ ಜನರು ಹೆಚ್ಚಾಗಿ Kinetic Luna ಸ್ಕೂಟರ್ ಗಳನ್ನೂ ಹೆಚ್ಚಾಗಿ ಬಳಸುತಿದ್ದರು.

ಆದರೆ 90 ರ ದಶಕದ ನಂತರ ಮಾರುಕಟ್ಟೆಯಲ್ಲಿ ನೂತನ ಮಾದರಿಯ ವಿಭಿನ್ನ ವಿನ್ಯಾಸದ ಸ್ಕೂಟರ್ ಗಳು ಲಾಂಚ್ ಆಗುವ ಮೂಲಕ Kinetic Luna ಸ್ಕೂಟರ್ ಬೇಡಿಕೆ ಮಾರುಕಟ್ಟೆಯಲ್ಲಿ ಕುಗ್ಗಿತ್ತು ಎನ್ನಬಹುದು. ಸದ್ಯ ಹಲವು ವರ್ಷಗಳ ನಂತರ ಮತ್ತೆ Kinetic Luna ಸ್ಕೂಟರ್ ಮಾರುಕಟ್ಟೆಯಲ್ಲಿ ಪರಿಚಯವಾಗಯುತ್ತಿದೆ. ಈ ಬಾರಿ Kinetic Luna ಎಲೆಕ್ಟ್ರಿಕ್ ರೂಪಾಂತರದಲ್ಲಿ ಮಾರುಕಟ್ಟೆಯ್ನು ಪ್ರವೇಶಿಸಲಿದೆ.

Kinetic E-Luna Price
Image Credit: Team BHP

Kinetic E-Luna ಸ್ಕೂಟರ್
ಮಾರುಕಟ್ಟೆಯಲ್ಲಿ Kinetic Luna ಕಂಪನಿಯು ನೂತನವಾಗಿ Kinetic E-Luna ಸ್ಕೂಟರ್ ಅನ್ನು ಪರಿಚಯಿಸಿದೆ. ಕೇವಲ ರೂ. 500 ರೂ. ಗಳನ್ನೂ ಪಾವತಿಸುವ ಮೂಲಕ ಈ ಸ್ಕೂಟರ್ ಬುಕಿಂಗ್ ಮಾಡಿಕೊಳ್ಳಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ Electric ಮಾದರಿಗಳು ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದೆ. ಹೀಗಾಗಿ Kinetic E-Luna ಸ್ಕೂಟರ್ ವಿವಿಧ ಎಲೆಕ್ಟ್ರಿಕ್ ರೂಪಾಂತರಗಳಿಗೆ ಬಾರಿ ಪೈಪೋಟಿ ನೀಡಲಿದೆ. ಇದೀಗ ಅವು ನೂತನ ಮಾದರಿಯ Kinetic E-Luna ಮೊಪೆಡೊ ಬಗ್ಗೆ ಸಂಪೂರ್ಣ ವಿವರ ತಿಳಿದುಕೊಳ್ಳೋಣ.

ಸಿಂಗಲ್ ಚಾರ್ಜ್ ನಲ್ಲಿ ಭರ್ಜರಿ 104km ಮೈಲೇಜ್
ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮೊಪೆಡೊ ವಿಭಾಗದಲ್ಲಿ Kinetic Luna ಸಾಕಷ್ಟು ಮಾದರಿಯ ಮೊಪೆಡಿಗಳನ್ನು 1970 ರಲ್ಲಿಯೇ ಪರಿಚಯಿಸಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ನೂತನವಾಗಿ ವಿಭಿನ್ನ ವಿನ್ಯಾಸ, ಅತ್ಯಾಧುನಿಕ ವವೈಶಿಷ್ಟ್ಯಗಳೊಂದಿಗೆ ಭರ್ಜರಿಯಾಗಿ Kinetic E-Luna ಮೊಪೆಡೊವನ್ನು ಪರಿಚಯಿಸಿದೆ.

Kinetic E-Luna Price And Mileage
Image Credit: DNP India

Kinetic E-Luna ಎಲೆಕ್ಟ್ರಿಕ್ ಸ್ಕೂಟರ್ ಅನ್ನು ರೂ. 94,990 ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸ್ಕೂಟರ್ ನಲ್ಲಿ 2.27 kWh ಸಾಮರ್ಥ್ಯದ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಲಾಗಿದ್ದು, ಇದು 2.8 bhp ಗರಿಷ್ಠ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಹಬ್ ಎಲೆಕ್ಟ್ರಿಕ್ ಮೋಟಾರ್ ಆಗಿದೆ. ಇದು ಪೂರ್ಣ ಚಾರ್ಜ್‌ನಲ್ಲಿ 104 ಕಿಲೋಮೀಟರ್‌ ಗಳ ವ್ಯಾಪ್ತಿಯನ್ನು ನೀಡಲಿದೆ ಮತ್ತು ಗಂಟೆಗೆ 60 ಕಿಮೀ ವೇಗವನ್ನು ಪಡೆಯುತ್ತದೆ.

Join Nadunudi News WhatsApp Group

Join Nadunudi News WhatsApp Group