Kinetic e -Luna: 10 ರೂ ಖರ್ಚು ಮಾಡಿದರೆ 110 Km ಚಲಿಸಬಹುದು, ಈ ಸ್ಕೂಟರ್ ಖರೀದಿಸಲು ಷೋರೂಮ್ ಮುಂದೆ ಜನಸಂದಣಿ

ಈ ಸ್ಕೂಟರ್ ಗೆ 10 ರೂ ಖರ್ಚು ಮಾಡಿದರೆ 110 Km ಚಲಿಸಬಹುದು

Kinetic Green e -Luna Launch In India: ಭಾರತೀಯ ಮಾರುಕಟ್ಟೆಗೆ ಹೊಸ ರೀತಿಯ ಎಲೆಕ್ಟ್ರಿಕ್ ವಾಹನಗಳು (Electric Scooter) ಲಗ್ಗೆ ಇಡುತ್ತಿದೆ. ಈಗಾಗಲೇ ಸಾಕಷ್ಟು ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ವಿಭಿನ್ನ ರೀತಿಯ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಿದ್ದವು.

ಇದೀಗ ಮಾರುಕಟ್ಟೆಯಲ್ಲಿ ಕೈನೆಟಿಕ್ ಕಂಪನಿಯ ನೂತನ ಎಲೆಕ್ಟ್ರಿಕ್ ಸ್ಕೂಟರ್ ಗಳು ಬಿಡುಗಡೆಗೊಳ್ಳಲಿದೆ. ಹೆಚ್ಚುತ್ತಿರುವ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಗೆ ಅನುಗುಣವಾಗಿ ಇದೀಗ ಕೈನೆಟಿಕ್ ಕಂಪನಿಯು ಮಾರುಕಟ್ಟೆಯಲ್ಲಿ ವಿಶೇಷ ಬೆಲೆಯಲ್ಲಿ ಅತ್ಯಾಧುನಿಕ ಫೀಚರ್ ನ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿದೆ.

Kinetic Green e-Luna Price
Image Credit: Autox

ಈ ಸ್ಕೂಟರ್ ಗೆ 10 ರೂ ಖರ್ಚು ಮಾಡಿದರೆ 110 Km ಚಲಿಸಬಹುದು
ಸದ್ಯ ಎಲೆಕ್ಟ್ರಿಕ್ ಸ್ಕೂಟರ್ ಗಳ ವಿಭಾಗದಲ್ಲಿ ಇದೀಗ Kinetic Green e -Luna ಎಲೆಕ್ಟ್ರಿಕ್ ಸ್ಕೂಟರ್ ಸೇರಿಕೊಂಡಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಶಕ್ತಿಯುತ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದ್ದು ವೈಶಿಷ್ಟ ವಿನ್ಯಾಸದ ಮೂಲಕ ಗ್ರಾಹಕರು ಸೆಳೆಯಲಿದೆ. ಈ ಬೈಕ್ ಕೇವಲ 10 ಪೈಸೆಯಲ್ಲಿ ಒಂದು ಕಿಲೋಮೀಟರ್ ಕ್ರಮಿಸುತ್ತದೆ. ಈ ಬೈಕ್ ಖರೀದಿಸಿದರೆ ತಿಂಗಳಿಗೆ ಪೆಟ್ರೋಲ್ ಮೇಲೆ 4721 ರೂಪಾಯಿ ಉಳಿಸಬಹುದು.

ಸಿಂಗಲ್ ಚಾರ್ಜ್ ನಲ್ಲಿ ಭರ್ಜರಿ 110 ಕಿಲೋಮೀಟರ್ ಮೈಲೇಜ್
ಈ ಬೈಕ್ ಒಂದೇ ಚಾರ್ಜ್‌ ನಲ್ಲಿ 110 ಕಿಲೋಮೀಟರ್‌ ಗಳ ವ್ಯಾಪ್ತಿಯನ್ನು ನೀಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 50 ಕಿಮೀ ಆಗಿದ್ದು, ಸಂಪೂರ್ಣವಾಗಿ ಚಾರ್ಜ್ ಮಾಡಲು 4 ಗಂಟೆ ತೆಗೆದುಕೊಳ್ಳುತ್ತದೆ. ಈ ಬೈಕ್‌ ನ ತೂಕ 96 ಕೆ.ಜಿ. ಇರಲಿದೆ. ಈ ಬೈಕ್‌ ನಲ್ಲಿ ಗ್ರಾಹಕರು 150 ಕೆಜಿಯಷ್ಟು ಲಗೇಜ್ ಲೋಡ್ ಮಾಡಬಹುದು.

Kinetic Green e -Luna Launch In India
Image Credit: Kineticgreen

ಈ ಬೈಕ್ ಅನ್ನು ಕೈನೆಟಿಕ್ ಗ್ರೀನ್ ಕಂಪನಿಯು 5 ಬಣ್ಣಗಳಲ್ಲಿ ಪರಿಚಯಿಸಿದೆ. ಗ್ರಾಹಕರು ಇ-ಲೂನಾವನ್ನು ಹಸಿರು, ಕಪ್ಪು, ಕೆಂಪು, ಹಳದಿ ಮತ್ತು ನೀಲಿ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದು. ಇನ್ನು ಬೈಕಿನ ಆರಂಭಿಕ ಎಕ್ಸ್ ಶೋ ರೂಂ ಬೆಲೆ 69,990 ರೂ. ಆಗಿದೆ. ಅಗ್ಗದ ಬೆಲೆಯಲ್ಲಿ ನೀವು ಈ ಲೂನಾ ಸ್ಕೂಟರ್ ಅನ್ನು ಖರೀದಿಸಬಹುದಾಗಿದೆ.

Join Nadunudi News WhatsApp Group

Join Nadunudi News WhatsApp Group