PM Kisan Update: ಈ ರೈತರ ಖಾತೆಗೆ ಕಿಸಾನ್ ಸಮ್ಮಾನ್ ಯೋಜನೆಯ 2000 ರೂ ಜಮಾ, ತಕ್ಷಣ ಖಾತೆ ಚೆಕ್ ಮಾಡಿಕೊಳ್ಳಿ

ಇಂದೇ ನಿಮ್ಮ ಖಾತೆಗೆ ಜಮಾ ಆಗಲಿದೆ Kisan ಯೋಜನೆಯ 2000 ರೂಪಾಯಿ.

Kisan 16th Installment Money Release On February 28th: ಕೇಂದ್ರ ಸರಕಾರ ರೈತರಿಗಾಗಿ PM Kisan ಯೋಜನೆಯನ್ನು ಪರಿಚಯಿಸಿದ್ದು, ಈ ಯೋಜನೆಯಡಿ ಆರ್ಥಿಕ ನೇರವಾಗಿ ವಾರ್ಷಿಕವಾಗಿ 6000 ರೂ. ಹಣವನ್ನು ನೀಡುತ್ತಿದೆ. ದೇಶದ ಅರ್ಹ ರೈತರು ನಾಲ್ಕು ತಿಂಗಳಿಗೊಮ್ಮೆ Kisan ಯೋಜನೆಯಡಿ 2000 ರೂ. ಹಣವನ್ನು ಪಡೆದುಕೊಳ್ಳುತ್ತಿದ್ದಾರೆ.

ಈಗಾಗಲೇ ಈ ಯೋಜನೆಯಡಿ ನವೆಂಬರ್ ನಲ್ಲಿ 15 ನೇ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಗಿದೆ. ಸದ್ಯ Kisan ಯೋಜನೆಯಡಿ 16 ನೇ ಕಂತಿನ ಹಣ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. Kisan 16 ನೇ ಕಂತಿನ ಹಣ ಬಿಡುಗಡೆಯ ದಿನಾಂಕವನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದೆ. ಯಾವ ದಿನದಂದು Kisan ಯೋಜನೆಯ 16 ನೇ ಕಂತಿನ ಹಣ ಜಮಾ ಆಗಲಿದೆ ಎನ್ನುವ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

Kisan 16th Installment Money
Image Credit: Smartprix

ಇಂದೇ ನಿಮ್ಮ ಖಾತೆಗೆ ಜಮಾ ಆಗಲಿದೆ 2000 ರೂ.
ಕಿಸಾನ್ ಯೋಜನೆಯ ಫಲಾನುಭವಿಗಳ ಸದ್ಯ Kisan ಯೋಜನೆಯ 16 ನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ. ಯೋಜನೆಯ ಹಣ ಯಾವಾಗ ಜಮಾ ಆಗುತ್ತದೆ ಎನ್ನುವ ಬಗ್ಗೆ ರೈತರು ಕುತೂಹಲರಾಗಿದ್ದಾರೆ. ಫೆಬ್ರವರಿ ಅಥವಾ ಮಾರ್ಚ್ ನಲ್ಲಿ 16 ನೇ ಕಂತಿನ ಹಣ ಜಮಾ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದರು.

ಸದ್ಯ ಕೇಂದ್ರ ಸರ್ಕಾರ 16 ನೇ ಕಂತಿನ ಹಣದ ಬಿಡುಗಡೆಗೆ ಫೆಬ್ರವರಿ ತಿಂಗಳಿನಲ್ಲಿಯೇ ದಿನಾಂಕ ನಿಗದಿ ಮಾಡಿದೆ. Kisan ಯೋಜನೆಯ ಫಲಾನುಭವಿಗಳು 16 ನೇ ಕಂತಿನ 2000 ರೂ. ಹಣವನ್ನು ಫೆಬ್ರವರಿ 28 ಅಂದರೆ ಇಂದೇ ಹಣವನ್ನು ಪಡೆಯಲಿದ್ದಾರೆ. ಇಂದು ಕೇಂದ್ರ ಸರ್ಕಾರ ರೈತರ ಖಾತೆಗೆ ನೇರವಾಗಿ 2000 ರೂ. ಜಮಾ ಮಾಡಲಿದೆ. ಪ್ರಧಾನಿ ಮೋದಿ ಅವರು ಯುವತ್ಮಲ್ ನ ಬಟನ್ ಒತ್ತುವ ಮೂಲಕ ಈ ಹಣವನ್ನು ಬಿಡುಗಡೆ ಮಾಡಲಿದ್ದಾರೆ.

Kisan 16th Installment Money Release On February 28th
Image Credit: Timesnownews

ಕಿಸಾನ್ 2000 ಹಣ ನಿಮ್ಮ ಖಾತೆಗೆ ಜಮಾ ಆಗಬೇಕಿದ್ದರೆ ಈ ಕೆಲಸಗಳು ಪೂರ್ಣಗೊಂಡಿರಬೇಕು
•ರೈತರು ಇ -ಕೆವೈಸಿ ಹಾಗೂ ಭೂ ದಾಖಲೆಗಳನ್ನು ನವೀಕರಣ ಮಾಡುವುದು ಕಡ್ಡಾಯವಾಗಿದೆ. ಭೂ ದಾಖಲೆ ನವೀಕರಣ ಆಗದ ಕಾರಣ ಸಾಕಷ್ಟು ರೈತರ ಖಾತೆಗೆ ಹಣ ಜಮಾ ಆಗುತ್ತಿಲ್ಲ.

Join Nadunudi News WhatsApp Group

•ಇನ್ನು ನೀವು ಯೋಜನೆಯ ಅರ್ಜಿ ಸಲ್ಲಿಕೆಯಲ್ಲಿ ನೀಡಿದ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇರುವುದು ಕೂಡ ಸಮಸ್ಯೆಯಾಗುತ್ತದೆ.

•ಹಾಗೆಯೆ ಆಧಾರ್ ಕಾರ್ಡ್ ಅನ್ನು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾಗೆ (National Payment Corporation of India) ಲಿಂಕ್ ಮಾಡುವುದು ಕಡ್ಡಾಯವಾಗಿದೆ. NPCI ನಿಂದ ಅನುಮೋದನೆ ಪಡೆಯುವವರೆಗೆ Kisan ಯೋಜನೆಯ ಹಣ ಜಮಾ ಆಗಲು ಸಾಧ್ಯವಿಲ್ಲ.

Join Nadunudi News WhatsApp Group