K.L Rahul: ಕನ್ನಡಿಗರಿಗೆ ದಿಡೀರ್ ಬೇಸರದ ಸುದ್ದಿ, ಈ ಕಾರಣಕ್ಕೆ T20 ವರ್ಲ್ಡ್ ಕಪ್ ನಿಂದ ರಾಹುಲ್ ಹೊರಕ್ಕೆ.

ಈ ಒಂದು ಕಾರಣಕ್ಕೆ T20 ವಿಶ್ವಕಪ್ ನಿಂದ ಹೊರಬಿದ್ದ KL ರಾಹುಲ್

K.L Rahul And Hardik Pandya: ಇನ್ನು IPL 2024 ನಡೆಯುತ್ತಿರುವ ವೇಳೆ T20 2024 ಗಾಗಿ ಕೂಡ ಕಾಯುವಿಕೆ ಹೆಚ್ಚಾಗಿದೆ. ಜೂನ್ ನಲ್ಲಿ T20 2024 ಆರಂಭಗೊಳ್ಳಲಿದೆ. ಈ ಪಂದ್ಯಕ್ಕಾಗಿ ICC ಭಾರತ ತಂಡಕ್ಕೆ ಬಲಿಷ್ಠ ತಂಡವನ್ನು ರೆಡಿ ಮಾಡಲು ಆಟಗಾರರನ್ನು ಹುಡುಕುತ್ತಿದೆ. ಈಗಾಗಲೇ ಕೆಲ ಆಟಗಾರರ ಆಯ್ಕೆಯನ್ನು ಮಾಡಿರುವ ICC ಒಂದಿಷ್ಟು ಸ್ಟಾರ್ ಆಟಗಾರರನ್ನು ಕೈಬಿಟ್ಟಿದೆ ಎನ್ನುವ ಬಗ್ಗೆ ಮಾಹಿತಿ ಕೇಳಿಬರುತ್ತಿದೆ.

ಹಾಗೆಯೆ IPL ನಲ್ಲಿ ತಂಡದ ಆಟರಗಾರ ಸ್ಥಾನ ಬದಲಾದಂತೆಯೇ ಈ ಬಾರಿ T20 ಯಲ್ಲಿ ಕೂಡ ಹಲವು ನಾಯಕರ ಸ್ಥಾನ ಬದಲಾಗಲಿದೆ. ಈ ಬಾರಿಯ T20 ಯಲಿ ಕೆ ಎಲ್ ರಾಹುಲ್ ಸ್ಥಾನ ಕೈತಪ್ಪ ಹೋಗಲಿದೆ ಎನ್ನುವ ಬಗ್ಗೆ ವರದಿಯಾಗಿದೆ.

K.L Rahul And Hardik Pandya
Image Credit: Dnaindia

ಕನ್ನಡಿಗರಿಗೆ ದಿಡೀರ್ ಬೇಸರದ ಸುದ್ದಿ
ಈ ಬಾರಿ ಟಿಎಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಚೇಂಜ್ ಆಗುವುದರ ಜೊತೆಗೆ ಟೀಮ್ ಇಂಡಿಯಾದ ಉಪನಾಯಕ ಸ್ಥಾನವು ಬದಲಾಗಲಿದೆ. ಭಾರತ ತಂಡದ ಉಪನಾಯಕರಾಗಿದ್ದ ಕೆಎಲ್ ರಾಹುಲ್ ಇಂದು ಆ ಸ್ಥಾನವನ್ನು ಉಳಿಸಿಕೊಳ್ಳುವುದು ಅನುಮಾನವಿದೆ. ಉಪನಾಯಕನ ಸ್ಥಾನದ ಹೊರತಾಗಿ ಕೆ ಎಲ್ ರಾಹುಲ್ ಈ ಬಾರಿ T20 ಪಂದ್ಯದಲ್ಲಿ ತಂಡದಲ್ಲಿ ಇರುವ ಸಾಧ್ಯತೆ ಕೂಡ ಕಡಿಮೆ ಇದೆ ಎನ್ನಲಾಗುತ್ತಿದೆ.

ಈ ಕಾರಣಕ್ಕೆ T20 ವರ್ಲ್ಡ್ ಕಪ್ ನಿಂದ ರಾಹುಲ್ ಹೊರಕ್ಕೆ
ರಾಹುಲ್ ಅವರ ನಿಧಾನಗತಿಯ ಬ್ಯಾಟಿಂಗ್ ಅವರ ದಾರಿಗೆ ಮುಳುವಾಗಿದೆ ಎನ್ನಲಾಗುತ್ತಿದೆ. ಹಾರ್ದಿಕ್ ಪಾಂಡ್ಯ ಅವರ ಆತ ಕೂಡ ಹೇಳಿಕೊಳ್ಳುವಂತದ್ದಲ್ಲ. ಅವರು ಸಹ ಸ್ಥಿರವಾಗಿ ಆಡಲು ಹೆಣಗಾಡುತ್ತಿದ್ದಾರೆ. ಆದರೆ, ತಂಡದಲ್ಲಿ ಸ್ಥಾನ ನೀಡಿದ್ದು ಏಕೆ ಎಂಬ ಪ್ರಶ್ನೆಗಳು ಎದ್ದಿವೆ. ಪ್ರಸ್ತುತ ಐಪಿಎಲ್ ತಂಡದ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ಹಾರ್ದಿಕ್ ಪಾಂಡ್ಯ ತಮ್ಮ ಪ್ರದರ್ಶನದಲ್ಲಿ ಸ್ಥಿರತೆಯನ್ನು ಕಂಡುಕೊಂಡಿಲ್ಲ. ಅಲ್ಲದೆ ತಂಡದ ಪ್ರದರ್ಶನವೂ ಸ್ಥಿರವಾಗಿಲ್ಲ. ಆರಂಭಿಕ ಪಂದ್ಯಗಳಲ್ಲಿ ಪವರ್ ಪ್ಲೇನಲ್ಲಿ ಬೌಲಿಂಗ್ ಮಾಡುತ್ತಿದ್ದ ಪಾಂಡ್ಯ ಕೈ ಸುಟ್ಟುಕೊಂಡಿದ್ದರು.

K.L Rahul And Hardik Pandya IPL 2024
Image Credit: Hindustantimes

ವಿಕೆಟ್ ಪಡೆಯುವುದು ಲಾಂಗ್ ಶಾಟ್ ಆಗಿದ್ದು, ರನ್ ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ. ಐಪಿಎಲ್‌ ನಲ್ಲಿ ಆಡಿದ 9 ಪಂದ್ಯಗಳಲ್ಲಿ ಕೇವಲ 197 ರನ್ ಗಳಿಸಿದ್ದಾರೆ. ಅವರ ಸರಾಸರಿ 24.63 ಮತ್ತು ಸ್ಟ್ರೈಕ್ ರೇಟ್ 151.53 ಆಗಿದೆ. ಇನ್ನು ಕೆಎಲ್ ರಾಹುಲ್ ಅಂಕಿ-ಅಂಶ ನೋಡಿದರೆ 9 ಪಂದ್ಯಗಳನ್ನಾಡಿದ್ದು 378 ರನ್ ಗಳಿಸಿದ್ದಾರೆ. 144.27 ಸ್ಟ್ರೈಕ್ ರೇಟ್‌ ನಲ್ಲಿ ಬ್ಯಾಟಿಂಗ್ ಮಾಡುವಾಗ ಅವರ ಸರಾಸರಿ 42.00 ಆಗಿದೆ. ಅವರು ಇಲ್ಲಿಯವರೆಗೆ ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಅಂದರೆ ಸ್ಟ್ರೈಕ್ ರೇಟ್ ಹೊರತುಪಡಿಸಿ ಎಲ್ಲಾ ಅಂಶಗಳಲ್ಲಿ ಕೆಎಲ್ ರಾಹುಲ್ ಹಾರ್ದಿಕ್ ಗಿಂತ ಉತ್ತಮ. ಇದಾದ ಬಳಿಕವೂ ರಾಹುಲ್ ತಂಡದಿಂದ ಹೊರಗುಳಿದಿದ್ದು, ಹಾರ್ದಿಕ್ ಗೆ ಅವಕಾಶ ನೀಡಲಾಗಿತ್ತು. ಇದನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

Join Nadunudi News WhatsApp Group

K.L Rahul T20 World Cup
Image Credit: Crickettimes

Join Nadunudi News WhatsApp Group