Kodi Mutt: ಇನ್ನೊಂದು ಸ್ಪೋಟಕ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು, ಮತ್ತೆ ಜನರಲ್ಲಿ ಶುರುವಾಯಿತು ಆತಂಕ

ಸ್ಫೋಟಕ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು, ನಿಜವಾಗುತ್ತ ಭವಿಷ್ಯ

Kodi Mutt Prediction: ಕೊಡಿ ಮಠದ ಶ್ರೀಗಳಾದ Shivayogi Shivananda Rajendra ಸ್ವಾಮೀಜಿಯವರು 2024 ರ ಆರಂಭದಲ್ಲಿ ಕೂಡ ಭವಿಷ್ಯವಾಣಿ ನುಡಿದಿದ್ದು ಜನರನ್ನು ಎಚ್ಚರಿಸಿದ್ದಾರೆ. ಕೊಡಿ ಮಠದ ಶ್ರೀಗಳ ಭವಿಷ್ಯವಾಣಿ ಈವರೆಗೆ ಸಾಕಷ್ಟು ನಿಜವಾಗಿದೆ. ಹೀಗಾಗಿ ಜನರು ಶ್ರೀಗಳ ಭವಿಷ್ಯವಾಣಿಯನ್ನು ನಂಬುತ್ತಾರೆ.

ಸದ್ಯ ರಾಜ್ಯದಲ್ಲಿ ಮಳೆಯ ಅಭಾವದಿಂದ ರೈತರು ಕಂಗಾಲಾಗಿದ್ದಾರೆ. ಸರಿಯಾದ ಸಮಯದಲ್ಲಿ ಮಳೆ ಬಾರದ ಕಾರಣ ರೈತರು ತಮ್ಮ ಬೆಳೆಯನ್ನು ಕಳೆದುಕೊಂಡಿದ್ದಾರೆ. ಸದ್ಯ ಈ ಬಾರಿ ಶ್ರೀಗಳ ಭವಿಷ್ಯವಾಣಿ ಬರಗಾಲದಿಂದ ಚಿಂತೆಗೀಡಾಗಿರುವ ರೈತರಿಗೆ ಸ್ಪೂರ್ತಿ ನೀಡಲಿದೆ. ಮಳೆ ಬೆಳೆಯ ಬಗ್ಗೆ ಶ್ರೀಗಳು ಮಹತ್ವದ ಭವಿಷ್ಯವಾಣಿ ನುಡಿದಿದ್ದಾರೆ.

Kodimutt Swamiji
Image Credit: Vistaranews

ಸ್ಫೋಟಕ ಭವಿಷ್ಯ ನುಡಿದ ಕೊಡಿ ಮಠದ ಶ್ರೀಗಳು
ಕೋಲಾರ ಜಿಲ್ಲೆ ಮಾಲೂರು ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೋಡಿಮಠದ ಡಾ. ಶಿವಾನಂದ ಶಿವಯೋಗಿ ಸ್ವಾಮೀಜಿ, ಯುಗಾದಿ ನಂತರ ರಾಜ್ಯದಲ್ಲಿ ಉತ್ತಮ ಬೆಳೆ ಹಾಗೂ ಮಳೆಯಾಗುವ ಲಕ್ಷಣಗಳಿವೆ ಎಂದು ಕೊಡಿ ಮಠದ ಶ್ರೀಗಳು ಮಳೆ ಬೆಳೆ ಇಲ್ಲದೆ ಕಂಗಾಲಾಗಿರುವ ರೈತರಿಗೆ ಸಮಾಧಾನಕರ ಭವಿಷ್ಯವನ್ನು ನುಡಿದಿದ್ದಾರೆ. ಇದೇ ವೇಳೆ ಯುಗಾದಿ ಕಳೆದ ನಂತರ ರಾಜ್ಯ ರಾಜಕಾರಣದ ಬಗ್ಗೆ ಹೇಳುತ್ತೇನೆ, ಇನ್ನೂ ಸಾಕಷ್ಟು ಸಮಯವಿದೆ ಎಂದರು.

ರಾಷ್ಟ್ರ ರಾಜಕಾರಣ ಯುಗಾದಿಯ ನಂತರ ತಿಳಿಯಲಿದೆ
ಗ್ಯಾರಂಟಿಗಳಿಂದ ಸರ್ಕಾರ ನಡೆಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ನಿಮಗೆ ನನಗಿಂತ ಚೆನ್ನಾಗಿ ಗೊತ್ತು. ಯುಗಾದಿಯ ನಂತರ ರಾಷ್ಟ್ರ ರಾಜಕಾರಣವೂ ತಿಳಿಯುತ್ತದೆ. ಯುಗಾದಿ ನಂತರ ಭವಿಷ್ಯ ಬರುತ್ತದೆ. ಒಂದು ತಿಂಗಳ ನಂತರ ಮಳೆ, ಬೆಳೆ, ರಾಜಕೀಯ, ದುಡಿಮೆ, ವ್ಯಾಪಾರ ಗೊತ್ತಾಗಲಿದೆ ಎಂದರು.

ಜಾಗತಿಕ ಮಟ್ಟದಲ್ಲಿ ಸಮಸ್ಯೆ ಇದೆ. ಅಗ್ನಿ ಅನಾಹುತ, ಜಲ ವಿಪತ್ತು, ಯುದ್ಧ ಇರುತ್ತದೆ. ಅನೇಕ ಸಾವು ನೋವುಗಳು ಸಂಭವಿಸುತ್ತವೆ. ಮತಾಂದತೆ ಹೆಚ್ಚುತ್ತದೆ. ಬಾಂಬ್ ಸ್ಫೋಟಗಳು ಮತ್ತು ಭೂಕಂಪಗಳು ಸಂಭವಿಸುತ್ತವೆ. ಧಾರ್ಮಿಕ ಮುಖಂಡನ ಸಾವು ಕೂಡ ಸಂಭವಿಸುತ್ತದೆ ಎಂದು ಕೊಡಿ ಮಠದ ಶ್ರೀಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

Join Nadunudi News WhatsApp Group

kodi mutt swamiji predictions about state and national politics
Image Credit: Publictv

2024 ಜಗತ್ತಿಗೆ ಕಂಟಕವಾಗಲಿದೆ
2024 ರ ವರ್ಷವು ಭಯಾನಕ ಅನುಭವವನ್ನು ನೀಡುತ್ತದೆ. ಈ ವರ್ಷ ವಿಶ್ವದಾದ್ಯಂತ ಒಂದೆರಡು ಪ್ರಧಾನಿಗಳ ಮರಣವನ್ನು ಹೊಂದುವ ಸಾಧ್ಯತೆ ಇದೆ. ಮತೀಯ ಸಮಸ್ಯೆಗಳಿಂದ ಜನರು ದುಃಖಿತರಾಗುತ್ತಾರೆ. ಪ್ರಪಂಚದ ಮಹಾನ್ ಸಂತರು ಕೊಲ್ಲಲ್ಪಡುತ್ತಾರೆ. ದೇಶದಲ್ಲಿ ಅಸ್ಥಿರತೆ, ಯುದ್ಧದ ಭೀತಿ, ಅಣುಬಾಂಬ್ ಸ್ಫೋಟದ ಸಾಧ್ಯತೆ ಇದೆ. ಮತ್ತೆ ಜಗತ್ತಿಗೆ ರೋಗ ಹರಡುವ ಸಾಧ್ಯತೆಯ ಜೊತೆಗೆ ದೊಡ್ಡ ಸುನಾಮಿ ಎದ್ದಿದೆ ಮತ್ತು ಜಗತ್ತೇ ಅಪಾಯದಲ್ಲಿದೆ. ದೇವರಲ್ಲಿ ನಂಬಿಕೆ ಇಡುವುದೊಂದೇ ಪರಿಹಾರ ಎಂದು ಈ ಹಿಂದೆ ಭವಿಷ್ಯವಾಣಿ ನುಡಿದಿದ್ದರು.

Join Nadunudi News WhatsApp Group