Kodi Mutt: 2024 ರ ಆರಂಭದಲ್ಲೇ ಇನ್ನೊಂದು ಸ್ಪೋಟಕ ಭವಿಷ್ಯ ನುಡಿದ ಕೊಡಿ ಸ್ವಾಮಿಗಳು, ಮತ್ತೊಂದು ಕಂಟಕ

2024 ರಲ್ಲಿ ಜಗತ್ತಿಗೆ ಎದುರಾಗುವಂತಹ ಕಂಟಕದ ಬಗ್ಗೆ ಶ್ರೀಗಳು ಭವಿಷ್ಯ ನುಡಿದಿದ್ದಾರೆ

Kodi Mutt Prophecy: ಕೊಡಿ ಮಠದ ಶ್ರೀಗಳಾದ Shivayogi Shivananda Rajendra ಸ್ವಾಮೀಜಿಯವರ ಭವಿಷ್ಯವಾಣಿಯ ಬಗ್ಗೆ ಜನರಿಗೆ ಹೆಚ್ಚು ನಂಬಿಕೆ ಇದೆ. ಶ್ರೀಗಳು ಆಗಾಗ ಮುಂದೆ ಎದುರಾಗುವಂತಹ ಅನೇಕ ಅಪಾಯಗಳ ಬಗ್ಗೆ ಸೂಚನೆ ನೀಡುತ್ತಾ ಇರುತ್ತಾರೆ.

ಈ ಹಿಂದೆ ಸಾಕಷ್ಟು ಬಾರಿ ಶ್ರೀಗಳು ಭವಿಷ್ಯವಾಣಿ ನುಡಿದ್ದರು. ಮಳೆಯ ಅಭಾವ, ಪ್ರಕೃತಿ ವಿಕೋಪ, ಭೂಕಂಪ, ಸುನಾಮಿಗಳ ಬಗ್ಗೆ ಶ್ರೀಗಳು ಎಚ್ಚರಿಕೆ ನೀಡಿದ್ದರು. ಇದರ ಜೊತೆಗೆ ಕೇಂದ್ರ ಮತ್ತು ರಾಜ್ಯದ ರಾಜಕೀಯದ ಬಗ್ಗೆ ಕೂಡ ಭವಿಷ್ಯವಾಣಿ ನುಡಿದಿದ್ದರು. ಸದ್ಯ ಶ್ರೀಗಳು ಇದೀಗ ಮತ್ತೊಂದು ಆಘಾತಕಾರಿ ಭವಿಷ್ಯವಾಣಿ ನುಡಿದಿದ್ದಾರೆ. ಹೊಸ ವರ್ಷದ ಆರಂಭದಲ್ಲಿಯೇ ಶ್ರೀಗಳ ಭವಿಷ್ಯವಾಣಿ ಜನರಲ್ಲಿ ಹೆಚ್ಚಿನ ಆತಂಕ ಮೂಡಿಸಿದೆ.

Kodi Mutt Prophecy
Image Credit: News 18

2024 ಜಗತ್ತಿಗೆ ಕಂಟಕವಾಗಲಿದೆ
ಈ ಬಾರಿ ಗದಗದಲ್ಲಿ ಕೊಡಿ ಮಠದ ಶ್ರೀಗಳು 2024 ರ ಬಗ್ಗೆ ಭವಿಷ್ಯವಾಣಿ ನುಡಿದ್ದಾರೆ. 2024 ರಲ್ಲಿ ಜಗತ್ತಿಗೆ ಎದುರಾಗುವಂತಹ ಕಂಟಕದ ಬಗ್ಗೆ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಇನ್ನಷ್ಟು ಕಷ್ಟವಾಗಲಿದೆ. ಅಕಾಲಿಕ ಮಳೆಯಿಂದ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಬಾಂಬ್ ಸ್ಫೋಟಗೊಂಡಾಗ ನೂರಾರು ಜನರು ಸಾಯುವ ಸಾಧ್ಯತೆಯಿದೆ. ಇದರೊಂದಿಗೆ ಪ್ರಕೃತಿಯಲ್ಲಿ ಭೂಕಂಪ, ಜಲ ಬಿಕ್ಕಟ್ಟು ಉಂಟಾಗಲಿದೆ ಎಂದು ಶ್ರೀಗಳು ಎಚ್ಚರಿಸಿದ್ದಾರೆ.

2024 ರ ವರ್ಷವು ಭಯಾನಕ ಅನುಭವವನ್ನು ನೀಡುತ್ತದೆ. ಈ ವರ್ಷ ವಿಶ್ವದಾದ್ಯಂತ ಒಂದೆರಡು ಪ್ರಧಾನಿಗಳ ಮರಣವನ್ನು ಹೊಂದುವ ಸಾಧ್ಯತೆ ಇದೆ. ಮತೀಯ ಸಮಸ್ಯೆಗಳಿಂದ ಜನರು ದುಃಖಿತರಾಗುತ್ತಾರೆ. ಪ್ರಪಂಚದ ಮಹಾನ್ ಸಂತರು ಕೊಲ್ಲಲ್ಪಡುತ್ತಾರೆ. ದೇಶದಲ್ಲಿ ಅಸ್ಥಿರತೆ, ಯುದ್ಧದ ಭೀತಿ, ಅಣುಬಾಂಬ್ ಸ್ಫೋಟದ ಸಾಧ್ಯತೆ ಇದೆ. ಮತ್ತೆ ಜಗತ್ತಿಗೆ ರೋಗ ಹರಡುವ ಸಾಧ್ಯತೆಯ ಜೊತೆಗೆ ದೊಡ್ಡ ಸುನಾಮಿ ಎದ್ದಿದೆ ಮತ್ತು ಜಗತ್ತೇ ಅಪಾಯದಲ್ಲಿದೆ. ದೇವರಲ್ಲಿ ನಂಬಿಕೆ ಇಡುವುದೊಂದೇ ಪರಿಹಾರ. ದೇವರ ಮೊರೆ ಹೋಗುವಂತೆ ಸಲಹೆ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group