Kodi Mutt: ಇನ್ನೊಂದು ಆಘಾತಕಾರಿ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು, ಈ ವರ್ಷ ಈ ಮೂವರ ಸಾವಾಗಲಿದೆ

ರಾಷ್ಟ್ರೀಯ ನಾಯಕರು, ಸನ್ಯಾಸಿ ಸೇರಿ ಮೂವರ ಸಾವಾಗಲಿದೆ, ಶಾಕಿಂಗ್ ಭವಿಷ್ಯ ನುಡಿದ ಶ್ರೀಗಳು

Kodi Mutt Sri: ಸದ್ಯ ಎಲ್ಲೆಡೆ ಕೊಡಿ ಮಠದ ಶ್ರೀಗಳಾದ Shivayogi Shivananda Rajendra ಸ್ವಾಮೀಜಿಯವರ ಭವಿಷ್ಯವಾಣಿಯ ಬಗ್ಗೆ ಹೆಚ್ಚು ಹೆಚ್ಚು ಮಾತುಗಳು ಕೇಳಿಬರುತ್ತಿದೆ. ಶ್ರೀಗಳು ದೇಶಕ್ಕೆ ಮುಂದೆ ಎದುರಾಗುವಂತಹ ಕಂಟಕದ ಬಗ್ಗೆ ಆಗಾಗ ಭವಿಷ್ಯವಾಣಿ ನುಡಿದು ಜನರನ್ನು ಎಚ್ಚರಿಸುತ್ತಾ ಇರುತ್ತಾರೆ.

ಈಗಾಗಲೇ ಪ್ರಕೃತಿ ವಿಕೋಪ, ರಾಷ್ಟ್ರ ಹಾಗೂ ರಾಜ್ಯ ರಾಜಕಾರಣ ಸೇರಿದಂತೆ ದೇಶದ ಪ್ರಮುಖ ವ್ಯಕ್ತಿಗಳಿಗೆ ಎದುರಾಗುವಂತಹ ಕಂಟಕದ ಬಗೆ ಮಾಹಿತಿ ನೀಡಿದ್ದರು. ಇದೀಗ ಶ್ರೀಗಳು ಮತ್ತೊಂದು ಶಾಕಿಂಗ್ ಭವಿಷ್ಯವನ್ನು ನುಡಿದಿದ್ದಾರೆ.

Kodi Mutt Sri Latest
Image Credit: Oneindia

ರಾಷ್ಟ್ರೀಯ ನಾಯಕರು, ಸನ್ಯಾಸಿ ಸೇರಿ ಮೂವರ ಸಾವಾಗಲಿದೆ
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶ್ರೀಗಳು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಇಬ್ಬರು ರಾಷ್ಟ್ರೀಯ ನಾಯಕರು ಸಾವಿನ ಅಂಚಿನಲ್ಲಿದ್ದಾರೆ ಮತ್ತು ಧಾರ್ಮಿಕ ಮುಖಂಡರೊಬ್ಬರು ಸಾವಿನ ಅಂಚಿನಲ್ಲಿದ್ದಾರೆ ಎಂದು ದೇಶದಲ್ಲಿ ಮುಂಬರುವ ಸಾವುಗಳ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದು ರಾಜಕೀಯಕ್ಕೆ ಸಂಬಂಧಿಸಿದೆ ಎಂಬುದು ಸ್ಪಷ್ಟವಾಗಿದೆ.

ಇಬ್ಬರು ರಾಷ್ಟ್ರ ಮಟ್ಟದ ನಾಯಕರ ಜೀವ ಅಪಾಯದಲ್ಲಿದೆ. ಅವರೊಂದಿಗೆ ಧಾರ್ಮಿಕ ಮುಖಂಡನಾಗಿರುವ ಸನ್ಯಾಸಿಯ ಜೀವಕ್ಕೆ ಅಪಾಯವಿದೆ. ಈ ಮೂವರಿಗೆ ಸಾವಿನ ಕಂಟಕವಿದೆ. ಹೊರ ದೇಶಗಳಲ್ಲಿನ ಕೆಲವು ಬೆಳವಣಿಗೆಗಳಿಂದ ಭಾರತಕ್ಕೂ ಯುದ್ಧದ ಭೀತಿ ಎದುರಾಗಲಿದೆ ಎಂದರು.

Kodi Mutt Sri New Prediction
Image Credit: Oneindia

ಈ ವರ್ಷದ ಬಗ್ಗೆ ಶ್ರೀಗಳ ಭವಿಷ್ಯವಾಣಿ
ಯುಗಾದಿಯ ನಂತರ ರಾಷ್ಟ್ರ ರಾಜಕಾರಣವೂ ತಿಳಿಯುತ್ತದೆ. ಯುಗಾದಿ ನಂತರ ಭವಿಷ್ಯ ಬರುತ್ತದೆ. ಒಂದು ತಿಂಗಳ ನಂತರ ಮಳೆ, ಬೆಳೆ, ರಾಜಕೀಯ, ದುಡಿಮೆ, ವ್ಯಾಪಾರ ಗೊತ್ತಾಗಲಿದೆ ಎಂದರು. ಜಾಗತಿಕ ಮಟ್ಟದಲ್ಲಿ ಸಮಸ್ಯೆ ಇದೆ.ಈ ವರ್ಷ ವಿಶ್ವದಾದ್ಯಂತ ಒಂದೆರಡು ಪ್ರಧಾನಿಗಳ ಮರಣವನ್ನು ಹೊಂದುವ ಸಾಧ್ಯತೆ ಇದೆ.

Join Nadunudi News WhatsApp Group

ಮತೀಯ ಸಮಸ್ಯೆಗಳಿಂದ ಜನರು ದುಃಖಿತರಾಗುತ್ತಾರೆ. ಪ್ರಪಂಚದ ಮಹಾನ್ ಸಂತರು ಕೊಲ್ಲಲ್ಪಡುತ್ತಾರೆ. ದೇಶದಲ್ಲಿ ಅಸ್ಥಿರತೆ, ಯುದ್ಧದ ಭೀತಿ, ಅಣುಬಾಂಬ್ ಸ್ಫೋಟದ ಸಾಧ್ಯತೆ ಇದೆ. ಮತ್ತೆ ಜಗತ್ತಿಗೆ ರೋಗ ಹರಡುವ ಸಾಧ್ಯತೆಯ ಜೊತೆಗೆ ದೊಡ್ಡ ಸುನಾಮಿ ಎದ್ದಿದೆ ಮತ್ತು ಜಗತ್ತೇ ಅಪಾಯದಲ್ಲಿದೆ. ದೇವರಲ್ಲಿ ನಂಬಿಕೆ ಇಡುವುದೊಂದೇ ಪರಿಹಾರ ಎಂದು ಈ ಹಿಂದೆ ಭವಿಷ್ಯವಾಣಿ ನುಡಿದಿದ್ದಾರೆ.

Join Nadunudi News WhatsApp Group