Kona Ev Offer: 452 Km ಮೈಲೇಜ್ ಕೊಡುವ ಈ ಕಾರಿಗೆ ಮೇಲೆ ಭರ್ಜರಿ 4 ಲಕ್ಷ ಡಿಸ್ಕೌಂಟ್, ಇಂದೇ ಬುಕ್ ಮಾಡಿ.

ಈಗ ಕೇವಲ 4 ಲಕ್ಷಕ್ಕೆ ಖರೀದಿ ಮಾಡಬಹುದು 452 Km ಮೈಲೇಜ್ ಕೊಡುವ ಈ ಎಲೆಕ್ಟ್ರಿಕ್ ಕಾರ್

Hyundai Kona Electric Car Discount: ಭಾರತದ ಪ್ರಸಿದ್ಧ ಆಟೋಮೊಬೈಲ್ ತಯಾರಕ ಹುಂಡೈ (Hyundai) ತನ್ನ ಎಲೆಕ್ಟ್ರಿಕ್ ಕಾರ್ ಹ್ಯುಂಡೈ ಕೋನಾ ಮೇಲೆ ಏಪ್ರಿಲ್ 2024 ರಲ್ಲಿ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಎಲೆಕ್ಟ್ರಿಕ್ ಕಾರನ್ನು ಬಾರಿ ರಿಯಾಯಿತಿಯೊಂದಿಗೆ ನಿಮ್ಮದಾಗಿಸಿಕೊಳ್ಳಬಹುದು.  2024 ರ ಏಪ್ರಿಲ್ ನಲ್ಲಿ ಇದೀಗ Hyundai ಕಾರ್ ಖರೀದಿಗೆ ಉತ್ತಮ ಕೊಡುಗೆಯನ್ನು ನೀಡುವ ಮೂಲಕ ಗ್ರಾಹಕರಿಗೆ ಒಂದೊಳ್ಳೆ ಅವಕಾಶವನ್ನ ನೀಡಿದೆ. ಹುಂಡೈ ಪರಿಚಯಿಸಿರುವ ಆಫರ್ ಬಗ್ಗೆ ಡಿಟೈಲ್ಸ್ ಇಲ್ಲಿದೆ.

Hyundai Kona Electric Car
Image Credit: Autocarindia

452 Km ಮೈಲೇಜ್ ಕೊಡುವ ಈ ಕಾರಿಗೆ ಮೇಲೆ ಭರ್ಜರಿ 4 ಲಕ್ಷ ಡಿಸ್ಕೌಂಟ್
ಏಪ್ರಿಲ್ ತಿಂಗಳಲ್ಲಿ ತನ್ನ ಕಾರುಗಳ ಮೇಲೆ ಹುಂಡೈ ಭಾರೀ ರಿಯಾಯಿತಿಯನ್ನು ನೀಡುತ್ತಿದೆ. ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರ್ ಅನ್ನು ಇದೀಗ ಗ್ರಾಹಕರು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಹುಂಡೈ ತನ್ನ ಎಲೆಕ್ಟ್ರಿಕ್ ಕಾರ್ ಗಳ ಮೇಲೆ ರೂ. 4,00,000 ರಿಯಾಯಿತಿ ನೀಡುತ್ತಿದೆ.

ಇದು ಹ್ಯುಂಡೈ ಕೋನಾದಲ್ಲಿ ಲಭ್ಯವಿರುವ ಅತಿದೊಡ್ಡ ರಿಯಾಯಿತಿಯಾಗಿದೆ. ನೀವು ಹೊಸ ಎಲೆಕ್ಟ್ರಿಕ್ ಕಾರನ್ನು ಖರೀದಿಸಲು ಬಯಸಿದರೆ, ನೀವು ಏಪ್ರಿಲ್ 31 ರ ವರೆಗೆ ಈ ರಿಯಾಯಿತಿಯೊಂದಿಗೆ ಹುಂಡೈ ಕೋನಾವನ್ನು ಖರೀದಿಸಬಹುದು. ಇದರ ಎಲೆಕ್ಟ್ರಿಕ್ ಮಾದರಿಯ ಬೆಲೆ 23.84 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು 24 ಲಕ್ಷದವರೆಗೆ ಹೋಗುತ್ತದೆ. ನಿಮ್ಮ ಬಜೆಟ್‌ ಗೆ ಅನುಗುಣವಾಗಿ ನೀವು ಈ ಕಾರನ್ನು ಖರೀದಿಸಬಹುದು.

Hyundai Kona Electric Car Discount
Image Credit: Autocarindia

452 Km ಮೈಲೇಜ್ ಕಾರಿಗೆ ಹೆಚ್ಚಿದೆ ಬೇಡಿಕೆ
ಹ್ಯುಂಡೈ ಕೋನಾ ತುಂಬಾ ದೊಡ್ಡ ಬ್ಯಾಟರಿಯನ್ನು ಹೊಂದಿದೆ, ಇದು ಒಂದೇ ಚಾರ್ಜ್‌ ನಲ್ಲಿ 452 ಕಿಲೋಮೀಟರ್ ವರೆಗೆ ಮೈಲೇಜ್ ಅನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ಕಾರ್ ನಲ್ಲಿ ವೈರ್‌ ಲೆಸ್ ಚಾರ್ಜಿಂಗ್, ಸ್ವಯಂಚಾಲಿತ ಹವಾಮಾನ ನಿಯಂತ್ರಣ, ಕ್ರೂಸ್ ಕಂಟ್ರೋಲ್, 6 ಏರ್‌ ಬ್ಯಾಗ್‌ ಗಳು ಮತ್ತು 7-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಸಿಸ್ಟಮ್ ಅನ್ನು ನೋಡಬಹುದು. ಇದರ ಇನ್ಫೋಟೈನ್‌ ಮೆಂಟ್ ಸಿಸ್ಟಮ್ ಆಂಡ್ರಾಯ್ಡ್ ಜೊತೆಗೆ Apple CarPlay ಅನ್ನು ಬೆಂಬಲಿಸುತ್ತದೆ.

Hyundai Kona Electric Car Price
Image Credit: qz

Join Nadunudi News WhatsApp Group

Join Nadunudi News WhatsApp Group