KTM Offer: ಈಗ ಕೇವಲ 50 ಸಾವಿರಕ್ಕೆ ಮನೆಗೆ ತನ್ನಿ KTM RC 200, ಈ ಆಫರ್ ಮತ್ತೆ ಸಿಗಲ್ಲ ನೋಡಿ.

ಈಗ ಕೇವಲ 50 ಸಾವಿರಕ್ಕೆ ಮನೆಗೆ ತನ್ನಿ KTM RC 200

KTM RC 200 Bike Offer: ದೇಶಿಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಹೊಸ ಹೊಸ ಮಾದರಿಯ ಬೈಕ್ ಗಳು ಬಿಡುಗಡೆಯಾಗುತ್ತಿವೆ. ಅದರಲ್ಲೂ KTM ಬೈಕ್ ಗಳ ಮೇಲೆ ಯುವಕರು ಹೆಚ್ಚಿನ ಕ್ರೇಜ್ ಇಟ್ಟುಕೊಂಡಿರುತ್ತಾರೆ. ಸದ್ಯ ದೇಶದ ಪ್ರತಿಷ್ಠಿತ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ KTM ತನ್ನ RC 200 ಮಾದರಿಯ ಬೈಕ್ ಗಳನ್ನೂ ದೇಶಿಯ ಮಾರುಕಟ್ಟೆಯಲ್ಲಿ ವಿಶೇಷ ದರದಲ್ಲಿ ಬಿಡುಗಡೆ ಮಾಡಿದೆ.

ಈ ಜನಪ್ರಿಯ ಬೈಕ್ ಅನ್ನು ಖರೀದಿಸಲು ಬಯಸಿದರೆ ಇದರ ಬೆಲೆಯ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಕಾರಣ ಕಂಪನಿಯು ಈ ಮಾದರಿಯ ಖರೀದಿಗೆ ಆಕರ್ಷಕ ರಿಯಾಯಿತಿಯನ್ನು ಘೋಷಿಸಿದೆ. ನೀವು ಅರ್ಧಕ್ಕೂ ಕಡಿಮೆ ಬೆಲೆಗೆ ಈ ಬೈಕ್ ಅನ್ನು ಖರೀದಿಸಬಹುದಾಗಿದೆ. KTM RC 200 ಬೈಕ್ ನ ಆಫರ್ ಗಳ ಬಗ್ಗೆ ಮಾಹಿತಿ ಇಲ್ಲಿದೆ.

KTM RC 200 Bike Price In India
Image Credit: Bikewale

ಈ ಆಫರ್ ಮತ್ತೆ ಸಿಗಲ್ಲ ನೋಡಿ
ನಾವೀಗ ಈ ಲೇಖನದಲ್ಲಿ ಹೆಚ್ಚಿನಮೇಲೆಜ್ ನೀಡುವ KTM RC 200 Bike ನ ಬಗ್ಗೆ ಹೇಳಲಿದ್ದೇವೆ. KTM RC 200 199.5 cc ಲಿಕ್ವಿಡ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ, ಇದು 25.4 bhp ಮತ್ತು 19.5 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಸಾಕಷ್ಟು ಶಕ್ತಿಶಾಲಿಯಾಗಿದೆ. ಅಲ್ಲದೆ ಕಂಪನಿಯು ಈ ಬೈಕ್‌ ನಲ್ಲಿ ಹೊಸ ಏರ್‌ ಬಾಕ್ಸ್ ಮತ್ತು ರೇಡಿಯೇಟರ್ ಅನ್ನು ಬಳಸಿದೆ. ಇದರಿಂದಾಗಿ ಎಂಜಿನ್‌ ನ ಕಾರ್ಯಕ್ಷಮತೆ ಇನ್ನಷ್ಟು ಉತ್ತಮವಾಗಿದೆ.

KTM RC 200 ಗೆ ಶಕ್ತಿಶಾಲಿ ರೇಸಿಂಗ್ ಬೈಕ್‌ ನ ನೋಟವನ್ನು ನೀಡಲಾಗಿದೆ. ಇದು ಸಂಪೂರ್ಣ-ಸಮಂಜಸವಾದ ವಿನ್ಯಾಸವನ್ನು ಹೊಂದಿದೆ. ಕ್ಲಿಪ್-ಆನ್ ಹ್ಯಾಂಡಲ್‌ ಬಾರ್, ಸ್ಪೋರ್ಟಿ ಹೆಡ್‌ ಲೈಟ್‌ ಗಳು ಮತ್ತು ಎಲ್‌ ಇಡಿ ಟೈಲ್‌ ಲೈಟ್‌ ಗಳನ್ನು ಒದಗಿಸಲಾಗಿದೆ. ಇದು ಇನ್ನಷ್ಟು ಆಕರ್ಷಕವಾಗಿದೆ. ಮೈಲೇಜ್ ವಿಷಯದಲ್ಲಿಯೂ KTM RC 200 ಬಾಯಿ ಹಿಂದಿಲ್ಲ. ಸ್ಪೋರ್ಟ್ಸ್ ಬೈಕ್ ಖರೀದಿಸಲು ನೀವು ಬಯಸಿದರೆ, KTM RC 200 ನಿಮಗೆ ಉತ್ತಮ ಆಯ್ಕೆಯಾಗಿದೆ. ಈ ಬೈಕ್ ಪ್ರತಿ ಲೀಟರ್‌ ಗೆ ಸುಮಾರು 35 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

KTM RC 200 Bike Offer
Image Credit: Bikewale

ಈಗ ಕೇವಲ 50 ಸಾವಿರಕ್ಕೆ ಮನೆಗೆ ತನ್ನಿ KTM RC 200
KTM RC 200 ನಲ್ಲಿ ಇದು ಅಗಲವಾದ ಟೈರ್‌ಗಳು ಮತ್ತು ಉತ್ತಮವಾದ ಸಸ್ಪೆನ್ಶನ್ ವ್ಯವಸ್ಥೆಯನ್ನು ಸಹ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ, KTM RC 200 ಗೆ ಎರಡೂ ಬದಿಗಳಲ್ಲಿ ಡಿಸ್ಕ್ ಬ್ರೇಕ್ ಮತ್ತು ಡ್ಯುಯಲ್ ಚಾನೆಲ್ ABS ವ್ಯವಸ್ಥೆಯನ್ನು ಒದಗಿಸಲಾಗಿದೆ, ಇದು ತುರ್ತು ಬ್ರೇಕಿಂಗ್ ಸಮಯದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

Join Nadunudi News WhatsApp Group

ಇನ್ನು ಬೆಲೆಯ ಬಗ್ಗೆ ಹೇಳುವುದಾದರೆ, ಈ ಬೈಕ್ ಶೋ ರೂಂನಲ್ಲಿ ಸುಮಾರು 2 ಲಕ್ಷ ರೂ. ಆಗಿದೆ. ಆದರೆ ಈ ಬೈಕ್ ಕ್ವಿಕರ್ ನಲ್ಲಿ ಕೇವಲ 50 ಸಾವಿರ ರೂ.ಗೆ ಮಾರಾಟವಾಗುತ್ತಿದ್ದು, ಬೈಕ್ 2018 ರ ಮಾಡೆಲ್ ಆಗಿದ್ದು ಸುಸ್ಥಿತಿಯಲ್ಲಿದ್ದು, ಬೈಕ್ ಕೇವಲ 9,857 ಕಿ.ಮೀ ಓಡಿದೆ.

KTM RC 200 Bike Price And Feature
Image Credit: Bikewale

Join Nadunudi News WhatsApp Group