ಕುಬ್ಜ ಶೂಟಿಂಗ್ ನಲ್ಲಿ ದೊಡ್ಡ ಅನಾಹುತ, ಉಪೇಂದ್ರ ಅವರ ತಲೆಗೆ ಗಾಯ, ಈಗ ಹೇಗಿದ್ದಾರೆ ನೋಡಿ.

ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ದೇಶಕರಲ್ಲಿ ಅಗ್ರ ಸ್ಥಾನದಲ್ಲಿ ಇರುವವರು ಅಂದರೆ ರಿಯಲ್ ಸ್ಟಾರ್ ಉಪೇಂದ್ರ ಎಂದು ಹೇಳಿದರೆ ತಪ್ಪಾಗಲ್ಲ. ಬರಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ದೇಶದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿರುವ ಉಪೇಂದ್ರ ಅವರ ಚಿತ್ರವನ್ನ ನೋಡಲು ಜನರು ಕಾಯುತ್ತ ಇರುತ್ತಾರೆ ಈ ಎಂದು ಹೇಳಬಹುದು. ಉಪೇಂದ್ರ ಅವರ ಯಾವುದೇ ಚಿತ್ರ ಬಿಡುಗಡೆಯಾದರೂ ಅದೂ ಬಹುತೇಕ ಎಲ್ಲಾ ಚಿತ್ರ ಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವನ್ನ ಕಾಣುತ್ತದೆ ಎಂದು ಹೇಳಬಹುದು. ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ನಟನೆಯನ್ನ ಮಾಡಿರುವ ಉಪೇಂದ್ರ ಅವರು ವಿದೇಶದಲ್ಲಿ ಕೂಡ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಜನರು ಕಳೆವು ತಿಂಗಳುಗಳಿಂದ ಕಾಯುತ್ತಿರುವ ಉಪೇಂದ್ರ ಅವರ ಚಿತ್ರವೆಂದರೆ ಅದೂ ಕುಬ್ಜ ಚಿತ್ರವೆಂದು ಹೇಳಿದರೆ ತಪ್ಪಾಗಲ್ಲ. ಹೌದು ಕುಬ್ಜ ಚಿತ್ರದ ಶೂಟಿಂಗ್ ಬಹಳ ವೇಗವಾಗಿ ನಡೆಯುತ್ತಿದ್ದು ಇನ್ನೇನು ಎರಡು ಅಥವಾ ಮೂರೂ ತಿಂಗಳಲ್ಲಿ ಚಿತ್ರ ತೆರೆಯ ಮೇಲೆ ಬರಲಿದೆ ಎಂದು ಹೇಳಬಹುದು. ಇನ್ನು ಅಭಿಮಾನಿಗಳು ಚಿತ್ರದ ಮೇಲೆ ಬಹಳ ನಿರೀಕ್ಷೆಯನ್ನ ಇಟ್ಟುಕೊಂಡಿದ್ದು ಚಿತ್ರ ಕೆಲವು ದಾಖಲೆಗಳಲ್ಲ ಧೂಳಿಪಟ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು.

Kubza kannada movie

ಇನ್ನು ಜನರಿಗೆ ಈಗ ಶಾಕಿಂಗ್ ಸುದ್ದಿ ಬಂದಿದ್ದು ಕುಬ್ಜ ಚಿತ್ರದ ಶೂಟಿಂಗ್ ನಲ್ಲಿ ದೊಡ್ಡ ಅನಾಹುತವೇ ಆಗಿದೆ ಎಂದು ಹೇಳಬಹುದು. ಈ ಅಪಘಾತದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಗಾಯ ಆಗಿದ್ದು ಈ ಸುದ್ದಿ ಸದ್ಯ ಜನರಿಗೆ ಆಘಾತವನ್ನ ಉಂಟುಮಾಡಿದೆ ಎಂದು ಹೇಳಬಹುದು. ಹಾಗಾದರೆ ಶೂಟಿಂಗ್ ಸ್ಥಳದಲ್ಲಿ ನಡೆದಿದ್ದೇನು ಮತ್ತು ಉಪೇಂದ್ರ ಅವರು ಈಗ ಹೇಗಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ಅನ್ಮಗೆ ತಿಳಿಸಿ.

ಹೌದು ಸ್ನೇಹಿತರೆ ಕುಬ್ಜ ಚಿತ್ರದ ಶೂಟಿಂಗ್ ಸಮಯದಲ್ಲಿ ದೊಡ್ಡ ಅಪಘಾತವಾಗಿದ್ದು ಈ ಅಪಘಾತದಲ್ಲಿ ಉಪೇಂದ್ರ ಅವರ ತಲೆಗೆ ಬಲವಾದ ಗಾಯವಾಗಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ತಲೆಗೆ ರಾಡ್ ನಿಂದ ಪೆಟ್ಟು ಬಿದ್ದಿರುವ ಕಾರಣ ತಲೆಗೆ ಬಲವಾದ ಗಾಯವಾಗಿದೆ ಎಂದು ತಿಳಿದು ಬಂದಿದೆ. ಇನ್ನು ತಲೆಗೆ ಗಾಯವಾದರೂ ಉಪೇಂದ್ರ ಅವರು ಶೂಟಿಂಗ್ ಅರ್ಧಕ್ಕೆ ನಿಲ್ಲಿಸದೆ ತಮ್ಮ ಶೂಟಿಂಗ್ ಪೂರ್ಣಮಾಡಿ ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಮಿನರ್ವ ಮಿಲ್ ನಲ್ಲಿ ಶೂಟಿಂಗ್ ನಡೆಸುವಾಗ ಉಪೇಂದ್ರ ತಲೆಗೆ ಪೆಟ್ಟುಬಿದ್ದಿದೆ ಎನ್ನಲಾಗಿದೆ.

Join Nadunudi News WhatsApp Group

Kubza kannada movie

ಚಿತ್ರದಲ್ಲಿ ಫೈಟಿಂಗ್ ದೃಶ್ಯವನ್ನ ಚಿತ್ರೀಕರಣ ಮಾಡುತ್ತಿದ್ದ ಸಮಯದಲ್ಲಿ ಉಪೇಂದ್ರ ಅವರ ತಲೆಗೆ ಗಾಯವಾಗಿದ್ದು ಯಾವುದೇ ರೀತಿ ಭಯಪಡುವ ಅಗತ್ಯ ಇಲ್ಲವೆಂದು ಚಿತ್ರತಂಡ ತಿಳಿಸಿದೆ. ಶೂಟಿಂಗ್ ಅಂದಮೇಲೆ ಇದೆಲ್ಲ ಆಗುತ್ತದೆ ಮತ್ತು ಭಯಪಡುವ ಅಗತ್ಯ ಇಲ್ಲ ಎಂದು ಚಿತ್ರತಂಡ ಹೇಳಿದೆ. ಕುಬ್ಜ ಚಿತ್ರದ ಶೂಟಿಂಗ್ ಕೆಲವು ಸಮಯದಿಂದ ಬರದಿಂದ ನಡೆಯುತ್ತಿದ್ದು ಹಲವು ಸಮಯದ ನಂತರ ಮತ್ತೆ ಉಪೇಂದ್ರ ಅವರು ತೆರೆಯ ಮೇಲೆ ಬರಲಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group