Khushbu Sundar: ನನ್ನ ಪತಿ ಹಿಂದೂ, ಆದರೆ ನಾನೂ ಇನ್ನೂ ಮುಸ್ಲಿಂ ಎಂದು ಹೇಳಿದ ನಟಿ ಖುಷಬು.

ಕೆ ಆರ್ ಕೆ ಟ್ವೀಟ್ ಗೆ ನಟಿ ಖುಷಬು ಸುಂದರ್ ಅವರು ತಿರುಗೇಟು ನೀಡಿದ್ದಾರೆ.

Actress Khusbhu Sundar Tweet: ಬಹುಭಾಷಾ ನಟಿ ಖುಷ್ಬೂ ಸುಂದರ್ (Khushbu Sundar) ಇದೀಗ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ಹಿರಿಯ ನಟಿ ಖುಷ್ಬೂ ಸುಂದರ್ ಅವರು ಸಾಕಷ್ಟು ವಿವಾದಗಳಲ್ಲಿಯೇ ಸುದ್ದಿಯಲ್ಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಸಹ ನಟಿ ಖುಷ್ಬೂ ಸುಂದರ್ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸಹ ನಟಿ ಖುಷ್ಬೂ ಸುಂದರ್ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. 
Actress Khushbu Sundar said that my husband is a Hindu and I am a Muslim
Image Credit: dnaindia
ಖುಷ್ಬೂ ಸುಂದರ್ ಅವರ ಬಗ್ಗೆ ಟ್ವೀಟ್ ಮಾಡಿದ ಕೆ.ಆರ್.ಕೆ ಅಲಿಯಾಸ್ ಕಮಾಲ್ ಆರ್ ಖಾನ್
ಕೆ.ಆರ್.ಕೆ ಅಲಿಯಾಸ್ ಕಮಾಲ್ ಆರ್ ಖಾನ್ ಅವರು ಬಾಲಿವುಡ್ ಚಿತ್ರರಂಗದ ಬಗ್ಗೆ ಯಾವಾಗಲೂ ಕೊಂಕುಗಳನ್ನು ಬರೆಯುತ್ತಾರೆ. ತನ್ನದೇ ಆದ ರೀತಿಯಲ್ಲಿ ಪ್ರಶ್ನೆ ಮಾಡುವ ಇವರು ಈ ಬಾರಿ ನಟಿ ಖುಷ್ಬೂ ಅವರ ಮದುವೆ ಕುರಿತು ಹಾಗು ಅವರ ನಿಜವಾದ ಹೆಸರ ಕುರಿತು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ನಟಿ ಖುಷ್ಬೂ ಸಹ ಪ್ರತಿಕ್ರಿಯೆ ನೀಡಿದ್ದಾರೆ.

ಕೆ.ಆರ್.ಕೆ ಅಲಿಯಾಸ್ ಕಮಾಲ್ ಆರ್ ಖಾನ್ ಟ್ವೀಟ್ 
ನಟಿ ಖುಷ್ಬೂ ಅವರ ಮಾಡುವೆ ಮತ್ತು ಮತಾಂತರದ ಕುರಿತಾಗಿ ಪ್ರಶ್ನೆ ಮಾಡಿರುವ ಕೆ ಆರ್ ಕೆ ನೀವು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಿರಾ, ಮತಾಂತರ ಆದ ನಂತರ ನಿಮ್ಮ ಹೆಸರನ್ನು ಖುಷ್ಬೂ ಅಂತ ಬದಾಲಾಯಿಸಿಕೊಂಡಿದ್ದೀರಾ ಎಂದು ಕೇಳಿದ್ದಾರೆ.  ನಿಖಿತ್ ಎಂದಿದ್ದ ನಿಮ್ಮ ಹೆಸರು ಖುಷ್ಣೂ ಅಂತ ಬದಲಾಗಿದ್ದು ಯಾವಾಗ ಎಂದೂ ಪ್ರಶ್ನೆ ಮಾಡಿದ್ದಾರೆ.

ಕೆ.ಆರ್.ಕೆ ಟ್ವೀಟ್ ಗೆ ತಿರುಗೇಟು ನೀಡಿದ ಖುಷ್ಬೂ
ಇನ್ನು ಕೆ.ಆರ್.ಕೆ ಟ್ವೀಟ್ ಗೆ ಖುಷ್ಬೂ ಉತ್ತರಿಸಿದ್ದು, ಇವು ನನ್ನ ಹೆಸರು ನಿಖಿತ್ ಎಂದು ಬರೆದಿದ್ದೀರಿ. ಆದರೆ ನನ್ನ ಹೆಸರು ನಖತ್. ಈ ಹೆಸರಿನ ಅರ್ಥ ಖುಷ್ಬೂ ಅಂತಾನೆ. ಖುಷ್ಭೂ ಅಂತ ಹೆಸರಿಟ್ಟಿದ್ದು ಬಿ.ಆರ್.ಚೋಪ್ರಾ ಅವರು. ನಿಮಗೆ ವಿಶೇಷ ಮದುವೆ ಕಾಯ್ದೆ ಬಗ್ಗೆ ಗೊತ್ತಾ,  ಆ ಕಾಯ್ದೆ ಅಡಿ ಮದುವೆ ಆಗಿದ್ದೇನೆ. ನನ್ನ ಗಂಡ ಹಿಂದೂ ಆಗಿ, ನಾನು ಮುಸ್ಲಿಂ ಆಗಿಯೇ ಇದ್ದೇನೆ. ಗಂಡ ನನ್ನ ಅರ್ಧ ಜೀವ. ಹಾಗಾಗಿ ಅವರ ಹೆಸರು ಸೇರಿಸಿಕೊಂಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

Join Nadunudi News WhatsApp Group