ಗೋವಾದಲ್ಲಿ ದಿಗಂತ್ ಗೆ ಪೆಟ್ಟಾದಾಗ ಸಹಾಯ ಮಾಡಿದ ಈ ವ್ಯಕ್ತಿ ನಿಜಕ್ಕೂ ಯಾರು ಗೊತ್ತಾ, ದೇವರು ಎಂದ ಐಂದ್ರಿತಾ.

ಖ್ಯಾತ ನಟ ದಿಗಂತ್ ಅವರ ಸುದ್ದಿ ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿತ್ತು ಎಂದು ಹೇಳಬಹುದು. ಹೌದು ಗೋವಾದಲ್ಲಿ ದೊಡ್ಡ ಅಪಘಾತವಾದ ಕಾರಣ ನಟ ದಿಗಂತ್ ಗೆ ಬಲವಾದ ಪೆಟ್ಟಾಗಿ ಅವರು ಈಗ ಮನೆಯಲ್ಲಿ ಬೆಡ್ ರೆಸ್ಟ್ ನಲ್ಲಿ ಇದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ನಟ ದಿಗಂತ್ ಅವರ ಬದುಕಿನಲ್ಲಿ ನಡೆದ ಎರಡನೆಯ ಕಹಿ ಘಟನೆ ಇದಾಗಿದ್ದು ಈ ಘಟನೆಗಳ ಕಾರಣ ನಟ ದಿಗಂತ್ ಬಹಳ ನೋವನ್ನ ಅನುಭವಿಸುತ್ತಿದ್ದಾರೆ. ಹೌದು ನಟ ದಿಗಂತ್ ಮತ್ತು ಪತ್ನಿ ಐಂದ್ರಿತಾ ರೈ ಗೋವಾಗೆ ಹೋಗಿದ್ದು ಅಲ್ಲಿ ಸಾಹಸ ಕ್ರೀಡೆಯನ್ನ ಮಾಡುವ ಸಮಯದಲ್ಲಿ ನಟ ದಿಗಂತ್ ಅವರಿಗೆ ಬಲವಾದ ಪೆಟ್ಟಾಗಿ ಅವರಿಗೆ ತಕ್ಷಣ ಪ್ರಥಮ ಚಿಕಿತ್ಸೆಯನ್ನ ನೀಡಿದ ನಂತರ ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆತರಲಾಯಿತು ಎಂದು ಹೇಳಬಹುದು.

ಇನ್ನು ಈ ಅಪಘಾತ ನಡೆದ ಸಮಯದಲ್ಲಿ ನಟ ದಿಗಂತ್ ಅವರ ಜೊತೆ ಪತ್ನಿ ಐಂದ್ರಿತಾ ರೈ ಮಾತ್ರ ಇದ್ದು ಆ ಸಮಯದಲ್ಲಿ ಏನು ಮಾಡಬೇಕು ಎಂದು ತೋಚದೆ ಇದ್ದಾಗ ಅವರ ಸಹಾಯಕ್ಕೆ ಒಂದು ಈ ವ್ಯಕ್ತಿ. ಹೌದು ಇವರಿಬ್ಬರಿಗೆ ದೇವರಂತೆ ಬಂದ ವ್ಯಕ್ತಿ ತುಂಬಾ ದೊಡ್ಡ ಸಹಾಯವನ್ನ ಮಾಡಿದ್ದು ಈ ಸಹಯಾನ್ನ ನಾವು ಇರುವ ತನಕ ಮರೆಯುವುದಿಲ್ಲ ಎಂದು ಐಂದ್ರಿತಾ ರೈ ಮತ್ತು ದಿಗಂತ್ ಹೇಳಿದ್ದಾರೆ. ಹಾಗಾದರೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಈ ವ್ಯಕ್ತಿ ನಿಜಕ್ಕೂ ಯಾರು ಅನ್ನುವುದರ ಬಗ್ಗೆ ತಿಳಿಯೋಣ ಬನ್ನಿ.

KVN production narayan

ಹೌದು ನಟ ದಿಗಂತ್ ಅವರು ಈಗ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು ಇದರ ಮದ್ಯೆ ನಟ ದಿಗಂತ್ ಮತ್ತು ಐಂದ್ರಿತಾ ರೈ ಅವರು ಸಾಮಾಜಿಕ ಜಾಲತಾಣದಲ್ಲಿ ತಮಗೆ ಸಹಾಯ ಮಾಡಿಯೇ ಈ ವ್ಯಕ್ತಿಯನ್ನ ನೆನೆದು ತುಂಬು ಹೃದಯದ ಧನ್ಯವಾದವನ್ನ ಹೇಳಿದ್ದಾರೆ. ಹೌದು ಸ್ನೇಹಿತರೆ ನಟ ದಿಗಂತ್ ಅವರಿಗೆ ಬಲವಾದ ಪೆಟ್ಟಾದಾಗ ಅವರಿಗೆ ಸಹಾಯ ಮಾಡಿದ್ದು ಕೆವಿಎನ್ ಪ್ರೊಡಕ್ಷನ್ ಮಾಲೀಕರಾದ ವೆಂಕಟ್ ಕೆ ನಾರಾಯಣ್ ಅವರು. ಆ ಸಮಯದಲ್ಲಿ ಅಲ್ಲಿಗೆ ಬಂದ ಅವರು ದಿಗಂತ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದ್ದು ಮಾತ್ರವಲ್ಲದೆ ಅವರನ್ನ ಅಲ್ಲಿಂದ ತಕ್ಷಣವೇ ಏರ್ ಲಿಫ್ಟ್ ಮಾಡಲು ಸಹಾಯ ಮಾಡಿದರು. ಆ ಸಮಯದಲ್ಲಿ ಅವರನ್ನ ಅಲ್ಲಿಗೆ ಕಳುಹಿಸಿದ್ದು ದೇವರೇ ಎಂದು ಹೇಳಿರುವ ನಟ ದಿಗಂತ್ ಪತ್ನಿ ಐಂದ್ರಿತಾ ರೈ ಅವರು ಅವರಿಗೆ ನಾನು ಎಷ್ಟು ಧನ್ಯವಾದವನ್ನ ಹೇಳಿದರು ಸಾಲದು ಎಂದು ಹೇಳಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಕೆವಿಎನ್ ಪ್ರೊಡಕ್ಷನ್ ಮಾಲೀಕರಾದ ವೆಂಕಟ್ ಕೆ ನಾರಾಯಣ್ ಅವರು ಆ ಸಮಯದಲ್ಲಿ ದಿಗಂತ್ ಕುಟುಂಬಕ್ಕೆ ದೊಡ್ಡ ಸಮಯವನ್ನ ಮಾಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ಕನ್ನಡದ ಹಲವು ಬಿಗ್ ಬಜೆಟ್ ಸಿನಿಮಾಗಳು ಬಂದಿರುವುದು ನಿಮಗೆಲ್ಲ ತಿಳಿದಿದೆ ಮತ್ತು ಅಷ್ಟೇ ಅಲ್ಲದೆ ನಟ ದ್ರುವ ಸರ್ಜಾ ಅವರ ಮುಂದಿನ ಸಿನಿಮಾವನ್ನು ಈ ಸಂಸ್ಥೆಯೇ ನಿರ್ಮಾಣ ಮಾಡುತ್ತಿದೆ. ಸ್ನೇಹಿತರೆ ಕೆವಿಎನ್ ಪ್ರೊಡಕ್ಷನ್ ಮಾಲೀಕರಾದ ವೆಂಕಟ್ ಕೆ ನಾರಾಯಣ್ ಈ ಸಹಾಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ.

Join Nadunudi News WhatsApp Group

KVN production narayan

Join Nadunudi News WhatsApp Group