KVP Scheme: ನಿಮ್ಮ ಬಳಿ 5 ಲಕ್ಷ ಇದ್ದರೆ ಇಂದೇ ಅದನ್ನ ಪೋಸ್ಟ್ ಆಫೀಸ್ ನಲ್ಲಿ ಇಟ್ಟುಬಿಡಿ, ಸಿಗಲಿದೆ 10 ಲಕ್ಷ ವಾಪಸ್

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ 5 ಲಕ್ಷ ಇಟ್ಟರೆ ಸಿಗಲಿದೆ 10 ಲಕ್ಷ

Post Office Kisan Vikas Patra 2023: ಅಂಚೆ ಇಲಾಖೆ(Post Office) ಇದು ಸರ್ಕಾರಿ ಸಂಸ್ಥೆ ಆಗಿದ್ದು, ಈ ಇಲಾಖೆಯಲ್ಲಿ ಹೂಡಿಕೆ ಮಾಡಿದರೆ ಯಾವುದೇ ಅಪಾಯ ಇರುವುದಿಲ್ಲ. ಹೂಡಿಕೆಯಲ್ಲಿ ಅಂಚೆ ಇಲಾಖೆ ಬಹಳ ಸುರಕ್ಷಿತ ಆಯ್ಕೆ ಆಗಿದೆ.

ಈಗಾಗಲೇ ಅಂಚೆಯಲ್ಲಿ ಹಲವಾರು ಯೋಜನೆಗಳು ಅಂದರೆ ಸಣ್ಣ ಹೂಡಿಕೆ, ದೊಡ್ಡ ಹೂಡಿಕೆಗೆ ಸಂಬಂಧಿಸಿದಂತೆ ಹಲವು ಯೋಜನೆಗಳನ್ನು ನಾವು ಕಾಣುತ್ತೇವೆ. ಅಂಚೆ ಇಲಾಖೆಯ ಎಲ್ಲಾ ಯೋಜನೆಯು ಹೂಡಿಕೆದಾರರಿಗೆ ಬಹಳ ಪ್ರಯೋಜನಕಾರಿ ಹಾಗು ಲಾಭದಾಯಕ ಆಗಿರುತ್ತದೆ. ಅಂತಹ ಒಂದು ಯೋಜನೆಯಲ್ಲಿ ಕಿಸಾನ್ ವಿಕಾಸ್ ಪತ್ರ ಯೋಜನೆಯೂ ಒಂದಾಗಿದೆ.

KVP Scheme in Post Office
Image Credit: The Hindu

ಕಿಸಾನ್ ವಿಕಾಸ್ ಪತ್ರ ಯೋಜನೆಯ ಬಗ್ಗೆ ಮಾಹಿತಿ

ಪ್ರತಿಯೊಬ್ಬ ವ್ಯಕ್ತಿಯು ತನ್ನ ಆದಾಯದಲ್ಲಿ ಒಂದಿಷ್ಟನ್ನು ಹೂಡಿಕೆ ಮಾಡಲು ಬಯಸುತ್ತಾನೆ ಆದರೆ ಎಲ್ಲಿ ಹೂಡಿಕೆ ಮಾಡಬೇಕು? ಹೇಗೆ ಹೂಡಿಕೆ ಮಾಡಬೇಕು? ಎನ್ನುವ ಕುರಿತು ಅರಿವು ಇರುವುದಿಲ್ಲ ಅಂಥವರಿಗೆ ಈ ಕಿಸಾನ್ ವಿಕಾಸ್ ಪತ್ರ ಯೋಜನೆ ಬಹಳ ಸಹಾಯಕ ಆಗಲಿದೆ. ಈ ಯೋಜನೆ ಹೂಡಿಕೆದಾರರ ಹಣವನ್ನು ದ್ವಿಗುಣಗೊಳಿಸುವ ಭರವಸೆ ನೀಡುತ್ತದೆ.ಈ ಯೋಜನೆಯಲ್ಲಿ, ನೀವು 1,000 ರೂ.ಗಳಿಂದ ಹೂಡಿಕೆ ಮಾಡಲು ಪ್ರಾರಂಭಿಸಬಹುದು. ಅಷ್ಟೇ ಅಲ್ಲದೆ ಈ ಯೋಜನೆಯಡಿ ಹೂಡಿಕೆ ಮಾಡಿದ ಹಣಕ್ಕೆ ಸರ್ಕಾರವು ಶೇಕಡಾ7.5 ರಷ್ಟು ಬಡ್ಡಿಯನ್ನು ನೀಡುತ್ತಿದೆ.

ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ ಹೂಡಿಕೆಗೆ ಮಿತಿ ಇಲ್ಲ

Join Nadunudi News WhatsApp Group

ಈ ಯೋಜನೆಯಡಿಯಲ್ಲಿ ನಿಮ್ಮ ಕೈಯಲ್ಲಿ ಎಷ್ಟಾಗತ್ತೋ ಅಷ್ಟು ಹೂಡಿಕೆ ಮಾಡಬಹುದಾಗಿದೆ, ಹೂಡಿಕೆಗೆ ಯಾವುದೇ ಮಿತಿಯನ್ನು ಸರ್ಕಾರ ಹೇರಿಲ್ಲ. ನೀವು ಎಷ್ಟು ಹಣ ಹೂಡಿಕೆ ಮಾಡುತ್ತಿರೋ ಅಷ್ಟು ಲಾಭವನ್ನು ಪಡೆಯಬಹುದಾಗಿದೆ. ಈ ಯೋಜನೆಯಲ್ಲಿ ನೀವು 1000 ರೂ.ಗಳಿಂದ ಪ್ರಾರಂಭಿಸಿದ ನಂತರ, ನೀವು 100 ರೂ.ಗಳ ಗುಣಿತಗಳಲ್ಲಿ ಹೂಡಿಕೆ ಮಾಡಬಹುದು. ವಿಶೇಷವೆಂದರೆ ನೀವು ಜಂಟಿ ಖಾತೆಯನ್ನು ತೆರೆಯುವ ಮೂಲಕ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರೊಂದಿಗೆ, ಕಿಸಾನ್ ವಿಕಾಸ್ ಪತ್ರದಲ್ಲಿ ನಾಮನಿರ್ದೇಶಿತ ಸೌಲಭ್ಯವೂ ಲಭ್ಯವಿದೆ. ಇದರಲ್ಲಿ, 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಸಹ ತಮ್ಮ ಹೆಸರಿನಲ್ಲಿ ಕೆವಿಪಿ ಖಾತೆಯನ್ನು ತೆರೆಯಬಹುದು.

Post Office Kisan Vikas Patra 2023
Image Credit: The Begusarai

ನಿಮ್ಮ ಹೂಡಿಕೆಯ ಹಣ ದ್ವಿಗುಣಗೊಳ್ಳಲಿದೆ

ನಿಮ್ಮ ಹಣ ದ್ವಿಗುಣ ಆಗಲು ನೀವು 9 ವರ್ಷ 7 ತಿಂಗಳು ಹೂಡಿಕೆ ಮಾಡಬೇಕು. ಅಂದರೆ ನೀವು ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ 115 ತಿಂಗಳವರೆಗೆ 1 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ, ಈ ಅವಧಿಯಲ್ಲಿ ಈ ಮೊತ್ತವು 2 ಲಕ್ಷ ರೂ ಆಗುತ್ತದೆ. ಮತ್ತೊಂದೆಡೆ,ನೀವು ಅದರಲ್ಲಿ 5 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದರೆ ನಿಮಗೆ 10 ಲಕ್ಷ ರೂ. ಸಿಗಲಿದೆ. ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆಯ ಮೊತ್ತದ ಮೇಲಿನ ಬಡ್ಡಿಯನ್ನು ಕಂಪೌಂಡಿಂಗ್ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ಅಂದರೆ, ನೀವು ಅದರಲ್ಲಿ ಬಡ್ಡಿಯ ಮೇಲೆ ಬಡ್ಡಿಯನ್ನು ಸಹ ಗಳಿಸುತ್ತೀರಿ.

ಕಿಸಾನ್ ವಿಕಾಸ್ ಪತ್ರ ಖಾತೆ ತೆರೆಯುವ ವಿಧಾನ

ಕಿಸಾನ್ ವಿಕಾಸ್ ಪತ್ರ ಯೋಜನೆಗೆ ಅಂಚೆ ಕಚೇರಿಯಲ್ಲಿ ಠೇವಣಿ ಮಾಡಿದ ರಸೀದಿಯೊಂದಿಗೆ ಅರ್ಜಿಯನ್ನು ಭರ್ತಿ ಮಾಡಬೇಕು ಮತ್ತು ನಂತರ ಹೂಡಿಕೆಯ ಮೊತ್ತವನ್ನು ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಠೇವಣಿ ಮಾಡಬೇಕಾಗುತ್ತದೆ. ನೀವು ಅರ್ಜಿಯೊಂದಿಗೆ ನಿಮ್ಮ ಗುರುತಿನ ಚೀಟಿಯನ್ನು ಸಹ ಸೇರಿಸಬೇಕಾಗುತ್ತದೆ. ಕಿಸಾನ್ ವಿಕಾಸ್ ಪತ್ರ ಒಂದು ಸಣ್ಣ ಉಳಿತಾಯ ಯೋಜನೆಯಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರವು ತನ್ನ ಬಡ್ಡಿದರವನ್ನು ಪರಿಶೀಲಿಸುತ್ತದೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡುತ್ತದೆ.

Join Nadunudi News WhatsApp Group