Labour Card Apply: ಹೊಸ ಕಾರ್ಮಿಕ ಕಾರ್ಡಿಗೆ ಅರ್ಜಿ ಆಹ್ವಾನ, ಈ ಅರ್ಹ ಕಾರ್ಮಿಕರು ಈ ದಾಖಲೆಯೊಂದಿದೆ ಅರ್ಜಿ ಸಲ್ಲಿಸಿ

ಅಸಂಘಟಿತ ವಲಯದ ಕಾರ್ಮಿಕರಿಗೆ Labour Card ಪಡೆದುಕೊಳ್ಳಲು ಸರ್ಕಾರ ಮತ್ತೊಂದು ಅವಕಾಶ ನೀಡಿದೆ

Labour Card Benefit: ಸದ್ಯ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಇನ್ನು ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು ಕಾಲಕಾಲಕ್ಕೆ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು Labour Card ಅನ್ನು ಸರ್ಕಾರ ಪರಿಚಯಿಸಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರ ನೀಡುವ ಗುರುತಿನ ಚೀಟಿಯನ್ನು ಕಾರ್ಮಿಕ ಕಾರ್ಡ್ (Labour Card) ಎನ್ನಲಾಗುತ್ತದೆ.

ಆರೋಗ್ಯ, ವಿಮೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಂತಹ ವಿವಿಧ ಪ್ರಯೋಜನಗಳು ಮತ್ತು ಯೋಜನೆಗಳನ್ನು ಪಡೆಯಲು ಈ Card ಸಹಾಯ ಮಾಡುತ್ತದೆ. Labour Card ನ ಮೂಲಕ ಅಸಂಘಟಿತ ವಲಯದ ಕಾರ್ಮಿಕರು ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಇದೀಗ ಸರ್ಕಾರ Labour card ಅನ್ನು ಪಡೆದುಕೊಳ್ಳಲು ಮತ್ತೊಮೆ ಅವಕಾಶವನ್ನು ನೀಡಿದೆ.

Labour Card Benefit
Image Credit: Klsescreener

Labour Card ಅನ್ನು ಪಡೆದುಕೊಳ್ಳಲು ಯಾರು ಅರ್ಹರು…?
•ಕಾರ್ಮಿಕ ವರ್ಗದವರು ಅಂದರೆ ಕಟ್ಟಡ ನಿರ್ಮಾ ಕೆಲಸದಲ್ಲಿ ತೊಡಗಿಕೊಂಡವರು ಸರ್ಕಾರ ನೀಡುತ್ತಿರುವ Labour card ಅನ್ನು ಪಡೆಯಲು ಅರ್ಹರಾಗಿರುತ್ತಾರೆ.

•ಈ ಲೇಬರ್ ಕಾರ್ಡ್ ನಿಂದಾಗಿ ವಿಮ ಸೌಲಭ್ಯದಿಂದ ಹಿಡಿದು ಕಾರ್ಮಿಕ ಕುಟುಂಬಕ್ಕೆ ಅಗತ್ಯವಿರುವ ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳಬಹುದು.

•ಒಂದು ವರ್ಷದ ಕಟ್ಟಡ ನಿರ್ಮಾಣದಲ್ಲಿ ಕನಿಷ್ಠ 90 ದಿನಗಳು ಕೆಲಸ ಮಾಡಿದವರು ಈ ಲೇಬರ್ ಕಾರ್ಡ್ ಅನ್ನು ಪಡೆದುಕೊಳ್ಳಬಹುದು.

Join Nadunudi News WhatsApp Group

•ಇನ್ನು 18 ರಿಂದ 50 ವರ್ಷದ ಒಳಗಿನ ಕಾರ್ಮಿಕರು ಲೇಬರ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬಹುದು.

•ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ, ಮೊಬೈಲ್ ಸಂಖ್ಯೆಯನ್ನು ನೀಡಿ ಅರ್ಜಿ ಸಲ್ಲಿಸಬಹುದು.

Labour Card Application
Image Credit: Mymoneysouq

ಇಂದೇ ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ
ಅಪಘಾತ ವಿಮೆ, ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ, ಮಗು ಮತ್ತು ತಾಯಿಯ ಆರೈಕೆ, ಮಕ್ಕಳಿಗೆ ಪೌಷ್ಟಿಕ ಆಹಾರ, ವಿದ್ಯಾರ್ಥಿ ವೇತನ, ಮದುವೆಗೆ ಸಹಾಯಧನ, ಪಿಂಚಣಿ ಸೌಲಭ್ಯ ಸೇರಿದಂತೆ ಇನ್ನಿತರ ಅನೇಕ ಪ್ರಯೋಜನವನ್ನು ಲೇಬರ್ ಕಾರ್ಡ್ ಹೊಂದಿರುವವರು ಪಡೆದುಕೊಳ್ಳಬಹುದು. ಹಿರಿಯ ಕಾರ್ಮಿಕರ ನಿರೀಕ್ಷಕರ ಬಳಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಮಾರ್ಚ್ 31 2024 ರವರೆಗೆ ನೋಂದಣಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.

Join Nadunudi News WhatsApp Group