Labour Card: ಇಂತವರ ಕಾರ್ಮಿಕ ಕಾರ್ಡ್ ರದ್ದು ಮಾಡಲು ಸರ್ಕಾರದ ಆದೇಶ, ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ನೋಡಿ

ಇಂತವರ Labour Card ರದ್ದು ಮಾಡಲು ಮುಂದಾದ ರಾಜ್ಯ ಸರ್ಕಾರ

Labour Card Cancel: ದೇಶದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಜನರನ್ನು ಸಮರ್ಥರನ್ನಾಗಿಸಲು ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಆರಂಭಿಸಿದೆ. ಸದ್ಯ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕಾರ್ಮಿಕರಿಗಾಗಿ ವಿಶೇಷ ಯೋಜನೆಯನ್ನು ಪರಿಚಯಿಸಿದೆ. ಇನ್ನು ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಕಾರ್ಮಿಕರು ಕಾಲಕಾಲಕ್ಕೆ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು Labour Card ಅನ್ನು ಸರ್ಕಾರ ಪರಿಚಯಿಸಿದೆ.

Labour Card Cancel
Image Credit: Original Source

ಕಾರ್ಮಿಕ ಕಾರ್ಡ್ ಎಂದರೇನು..?
ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರ ನೀಡುವ ಗುರುತಿನ ಚೀಟಿಯನ್ನು ಕಾರ್ಮಿಕ ಕಾರ್ಡ್ (Labour Card) ಎನ್ನಲಾಗುತ್ತದೆ. ಆರೋಗ್ಯ, ವಿಮೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಂತಹ ವಿವಿಧ ಪ್ರಯೋಜನಗಳು ಮತ್ತು ಯೋಜನೆಗಳನ್ನು ಪಡೆಯಲು ಈ Card ಸಹಾಯ ಮಾಡುತ್ತದೆ. Labour Card ನ ಮೂಲಕ ಅಸಂಘಟಿತ ವಲಯದ ಕಾರ್ಮಿಕರು ಹೆಚ್ಚಿನ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಸದ್ಯ ರಾಜ್ಯ ಸರ್ಕಾರ ಇಂತವರ Labour Card ಅನ್ನು ರದ್ದುಪಡಿಸಲು ಮುಂದಾಗಿದೆ.

ಇಂತವರ Labour Card ರದ್ದು ಮಾಡಲು ಮುಂದಾದ ರಾಜ್ಯ ಸರ್ಕಾರ
ಸುಳ್ಳು ಮಾಹಿತಿ ನೀಡಿ Labour Card ಪಡೆದವರ ವಿರುದ್ಧ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಿ ಅನರ್ಹರ Labour Card ರದ್ದು ಮಾಡುವುದಾಗಿ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ರಾಜ್ಯಾದ್ಯಂತ 3,54,128 ಅನರ್ಹ ಕಟ್ಟಡ ಮತ್ತು ಇತರ ಕಟ್ಟಡ ಕಾರ್ಮಿಕರ ನೋಂದಣಿ ಪತ್ತೆಯಾಗಿದೆ.

Labour Card Latest Update
Image Credit: TV9hindi

ಈ ಅನರ್ಹ ಕಾರ್ಮಿಕ ಕಾರ್ಡ್‌ ಗಳನ್ನು ಶಾಶ್ವತವಾಗಿ ರದ್ದುಗೊಳಿಸುವಂತೆ ಕಾರ್ಮಿಕ ಮಂಡಳಿಗೆ ತಿಳಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಇನ್ನು ಫೆರಾರಿ ಕಾರ್, 50 ಎಕರೆ ಜಾಮೀನು ಹೊಂದಿರುವವರು ಕೂಡ ಕಾರ್ಮಿಕ ಕಾರ್ಡ್ ಅನ್ನು ಪಡೆದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರ ಅಂತರವ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಅನರ್ಹರು ಕಾರ್ಡ್ ಪಡೆಯುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳವು ಸರ್ಕಾರ ಕಾರ್ಡ್ ಪಡೆದವರ ಮನೆ ಸರ್ವೇ ಮಾಡಿ ಅಂರಹರಾಗಿದ್ದರೆ ಅಂತವರ ಕಾರ್ಡ್ ಅನ್ನು ರದ್ದುಪಡಿಸುತ್ತಿದೆ.

Join Nadunudi News WhatsApp Group

Join Nadunudi News WhatsApp Group