Ladies Pan Cards: ಮಹಿಳೆಯರಿಗೆ ಪಾನ್ ಆಧಾರ್ ಲಿಂಕ್ ಉಚಿತ, ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ.

ಲೇಡೀಸ್ ಪಾನ್ ಕಾರ್ಡ್ ಮತ್ತು ಆಧಾರ್ ಉಚಿತವಾಗಿ ಲಿಂಕ್ ಮಾಡಬಹುದು, ಸುದ್ದಿಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ.

Ladies Pan Cards Link: ಪಾನ್ ಕಾರ್ಡ್ (Pan Card) ಮತ್ತು ಆಧಾರ್ ಕಾರ್ಡ್ (Aadhar Card) ಲಿಂಕ್ ಗೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರದಿಂದ ಸಾಕಷ್ಟು ಸುದ್ದಿ ಹೊರ ಬಿದ್ದಿದೆ. ಪ್ಯಾನ್ ಆಧಾರ್ ಆಧಾರ್ ಲಿಂಕ್ ಕುರಿತಾದ ಸಾಕಷ್ಟು ಸುದ್ದಿಗಳು ವೈರಲ್ ಆಗುತ್ತಿದೆ.

ಆದರೆ ಇದೀಗ ಮಹಿಳೆಯರಿಗೆ ಪಾನ್ ಆಧಾರ್ ಲಿಂಕ್ ಉಚಿತವಾಗಿ ಮಾಡಲಾಗುತ್ತದೆ ಎನ್ನುವ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿಯುತ್ತಿದೆ. ಈ ಬಗ್ಗೆ ಮಾಹಿತಿ ತಿಳಿಯೋಣ.

Women can easily link PAN card and Aadhaar card
Image Credit: timesnownews

ಆಧಾರ್ ಪ್ಯಾನ್ ಲಿಂಕ್ ಗೆ ದಂಡ
ಈ ಹಿಂದೆ ಪ್ಯಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡಲು ಮಾರ್ಚ್ 31 2023 ಕೊನೆಯ ದಿನಾಂಕವಾಗಿತ್ತು. ಸಾಕಷ್ಟು ಜನರು ಇನ್ನು ಪ್ಯಾನ್ ಆಧಾರ್ ಲಿಂಕ್ ಮಾಡದೆ ಇದ್ದ ಕಾರಣ ಸರ್ಕಾರ ಪ್ಯಾನ್ ಆಧಾರ್ ಲಿಂಕ್ ಗಡುವನ್ನು ವಿಸ್ತರಣೆ ಮಾಡಿದೆ. ಪ್ಯಾನ್ ಆಧಾರ್ ಲಿಂಕ್ ಮಾಡಲು ಜೂನ್ 30 2023 ಕೊನೆಯ ದಿನಾಂಕವನ್ನು ನಿಗದಿ ಮಾಡಿದೆ.

ಮಹಿಳೆಯರಿಗೆ ಪಾನ್ ಆಧಾರ್ ಲಿಂಕ್ ಉಚಿತ
ಇನ್ನು ಪ್ಯಾನ್ ಆಧಾರ್ ಲಿಂಕ್ ಗೆ ಈಗಾಗಲೇ 1,000 ದಂಡವನ್ನು ವಿಧಿಸಲಾಗಿದೆ. ಆದರೆ ಮಹಿಳೆಯರು ಮಾತ್ರ 1000 ದಂಡ ಪಾವತಿಸದೇ ಪ್ಯಾನ್ ಆಧಾರ್ ಅನ್ನು ಲಿಂಕ್ ಮಾಡಬಹುದು ಎಂದು ಕೇಂದ್ರ ಸರ್ಕಾರ ಸೂಚನೆಯನ್ನು ಹೊರಡಿಸಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು. ಇದೀಗ ಈ ವೈರಲ್ ಸುದ್ದಿಯ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ಲಭಿಸಿದೆ.

The central government has clarified that the news that women can link Aadhaar card and PAN card for free is false.
Image Credit: thehindubusinessline

ವೈರಲ್ ಮಾಹಿತಿಯ ಬಗ್ಗೆ ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ
ಪಾನ್ ಆಧಾರ್ ಲಿಂಕ್ ಗೆ ಸಂಬಂಧಪಟ್ಟಂತೆ ಪಾವತಿಸುವ ದಂಡದ ಕುರಿತು ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ವೈರಲ್ ಸುದ್ದಿಗಳ ಬಗ್ಗೆ ನಿರ್ಮಲ ಸೀತಾರಾಮನ್ ಅವರು ಸ್ಪಷ್ಟನೆ ನೀಡಿದ್ದರು. ಇದೀಗ ಮಹಿಳೆಯರಿಗೆ ಉಚಿತವಾಗಿ ಪಾನ್ ಆಧಾರ್ ಲಿಂಕ್ ಮಾಡಲಾಗುತ್ತದೆ ಎನ್ನುವ ವೈರಲ್ ಸುದ್ದಿಯ ಬಗ್ಗೆ ಸ್ಪಷ್ಟನೆ ಲಭಿಸಿದೆ.

Join Nadunudi News WhatsApp Group

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಸುದ್ದಿ ನಕಲಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಮಹಿಳೆಯರು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಉಚಿತವಾಗಿ ಲಿಂಕ್ ಮಾಡಬಹುದು ಅನ್ನುವ ಸುದ್ದಿ ಹರಿದಾಡುತ್ತಿದ್ದು ಆ ಸುದ್ದಿ ಸುಳ್ಳು ಎಂದು ಕೇಂದ್ರ ಸರ್ಕಾರ ಸ್ಪಷ್ಟನೆಯನ್ನ ನೀಡಿದೆ. ಈ ಸುದ್ದಿಯನ್ನ ನಂಬಿ ಯಾರು ಕೂಡ ಮೋಸ ಹೋಗಬಾರದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Join Nadunudi News WhatsApp Group